Mysore
21
haze

Social Media

ಬುಧವಾರ, 28 ಜನವರಿ 2026
Light
Dark

ಲೈವ್‌ ಕಾನ್ಸರ್ಟ್‌ ವೇಳೆ ಸೋನು ನಿಗಮ್‌ಗೆ ಬೆನ್ನು ನೋವು: ಆಸ್ಪತ್ರೆಗೆ ದಾಖಲು

ಪುಣೆ: ಖ್ಯಾತ ಗಾಯಕ ಸೋನು ನಿಗಮ್‌ ಪುಣೆಯಲ್ಲಿ ಸಂಗೀತ ಕಾರ್ಯಕ್ರಮದ ಲೈವ್‌ ಕಾನ್ಸರ್ಟ್‌ ನಡೆಸಿಕೊಡುವ ವೇಳೆ ಅವರಿಗೆ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮ್ಮ ಆರೋಗ್ಯದ ಬಗ್ಗೆ ಫ್ಯಾನ್ಸ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ವಿವರಿಸಿ ಪೋಸ್ಟ್‌ ಹಾಕಿದ್ದಾರೆ.

ಸೋನು ನಿಗಮ್‌ ಪೋಸ್ಟ್‌ನಲ್ಲಿ, ಪುಣೆಯ ಸಂಗೀತ ಕಾರ್ಯಕ್ರಮದಲ್ಲಿ ಹಾಡು ಹೇಳುತ್ತಾ ವೇದಿಕೆ ಮೇಲೆಲ್ಲ ಓಡಾಡುತ್ತಾ ಇದ್ದೆ. ಈ ವೇಳೆ ಬೆನ್ನು ನೋವು ಕಾಣಿಸಿಕೊಂಡಿದೆ. ಆದರೆ, ಹೇಗೋ ಆ ಸಂದರ್ಭ ನಿಭಾಯಿಸಿ ಸಂಗೀತ ಕಾರ್ಯಕ್ರಮ ಮುಗಿಸಿ ನಂತರ ಆಸ್ಪತ್ರೆಗೆ ದಾಖಲಾದೆ ಎಂದು ತಿಳಿಸಿದ್ದಾರೆ.

ಅಭಿಮಾನಿಗಳು ನನ್ನಿಂದ ಎಷ್ಟನ್ನು ನಿರೀಕ್ಷಿಸುತ್ತಾರೋ ಅದಕ್ಕಿಂತ ಕಡಿಮೆ ಕೊಡಲು ನನಗೆ ಇಷ್ಟವಿಲ್ಲ ಆದ ಕಾರಣ ನಾನು ಸಂಗೀತ ಕಾರ್ಯಕ್ರಮವನ್ನು ಪೂರ್ಣವಾಗಿ ಮುಗಿಸಿದೆ. ಈ ಕಾರ್ಯಕ್ರಮದಲ್ಲಿ ಸ್ವಲ್ಪ ಅಲ್ಲಾಡಿದರೂ ನೋವು ಹೆಚ್ಚಾಗುತ್ತಿತ್ತು. ಆ ರಾತ್ರಿ ಸರಸ್ವತಿ ನನ್ನ ಕೈ ಹಿಡಿದರು ಎಂದು ಕ್ಯಾಪ್ಸನ್ ನೀಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.

ಬಹುಭಾಷಾ ಖ್ಯಾತ ಗಾಯಕರಾಗಿರುವ ಸೋನು ನಿಗಮ್‌ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಹಾಡಿದ್ದಾರೆ.

 

Tags:
error: Content is protected !!