Mysore
20
broken clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ರವಿ ಬಸ್ರೂರು ನಿರ್ದೇಶನದಲ್ಲಿ ‘ವೀರ ಚಂದ್ರಹಾಸ’ನಾದ ಶಿವಣ್ಣ

ಕಳೆದ ವರ್ಷ ರವಿ ಬಸ್ರೂರು ನಿರ್ದೇಶನದ ‘ಕಡಲ್‍’ ಎಂಬ ಚಿತ್ರ ಬಿಡುಗಡೆಯಾಗಿತ್ತು. ಕರಾವಳಿ ಪ್ರದೇಶದ ಈ ಚಿತ್ರವು ದೊಡ್ಡ ಯಶಸ್ಸು ಕಾಣದಿದ್ದರೂ, ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ಇದೀಗ ರವಿ ಬಸ್ರೂರು ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರ ಚಿತ್ರದಲ್‍ಲಿ ಶಿವರಾಜಕುಮಾರ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಬಾರಿ ರವಿ ಬಸ್ರೂರು ಪೌರಾಣಿಕ ಯಕ್ಷಗಾನ ಪ್ರಸಂಗವಾದ ‘ವೀರ ಚಂದ್ರಹಾಸ’ನನ್ನು ತೆರೆಗೆ ತರುತ್ತಿದ್ದಾರೆ. ಈ ಚಿತ್ರದ ಮೂಲಕ ಕರ್ನಾಟಕದ ಜನಪ್ರಿಯ ಜಾನಪದ ಕಲೆಯಾದ ಯಕ್ಷಗಾನವನದ ಸಂಸ್ಕೃತಿ ಮತ್ತು ಪರಂಪರೆಯನ್ನು ಸಿನಿಮಾ ಮೂಲಕ ತಲುಪಿಸುವ ಪ್ರಯತ್ನವನ್ನು ಅವರು ‘ವೀರ ಚಂದ್ರಹಾಸ’ ಚಿತ್ರದ ಮೂಲಕ ಮಾಡುತ್ತಿದ್ದಾರೆ. ಈ ಚಿತ್ರದ ಮೋಷನ್‍ ಪೋಸ್ಟರ್‍ ಇತ್ತೀಚೆಗೆ ಬಿಡುಗಡೆಯಾಗಿದೆ.

ಕುಂತಲ ಸಾಮ್ರಾಜ್ಯದ ಚಂದ್ರಹಾಸನ ಕಥೆಯನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನವನ್ನು ರವಿ ಈ ಚಿತ್ರದ ಮೂಲಕ ಮಾಡುತ್ತಿದ್ದಾರೆ. ಇದು ಅವರ 12 ವರ್ಷಗಳ ಕನಸಂತೆ. ಈ ಚಿತ್ರದಲ್ಲಿ ಶಿವರಾಜಕುಮಾರ್‍ ಅವರು ಸಿಂಗಾನಲ್ಲೂರು ಸಂಸ್ಥಾನದ ‘ನಾಡಚಕ್ರವರ್ತಿ ಶಿವ ಪುಟ್ಟಸ್ವಾಮಿ’ಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವರಾಜಕುಮಾರ್‍ ಅವರ ನಿಜವಾದ ಹೆಸರು ನಾಗರಾಜು ಶಿವ ಪುಟ್ಟಸ್ವಾಮಿ ಎಂದು ಎಲ್ಲರಿಗೂ ಗೊತ್ತೇ ಇದೆ. ಈಗ ಅವರ ನಿಜಜೀವನದ ಹೆಸರನ್ನು ಪಾತ್ರಕ್ಕೂ ಇಡಲಾಗಿದೆ.

ಇಷ್ಟು ವರ್ಷಗಳ ಸಿನಿಜರ್ನಿಯಲ್ಲಿ ಶಿವರಾಜಕುಮಾರ್‍ ಯಕ್ಷಗಾನದ ವೇಷ ತೊಡತ್ತಿರುವುದು ಇದೇ ಮೊದಲು. ‘ವೀರ ಚಂದ್ರಹಾಸ’ ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಸಾಕಷ್ಟು ತಯಾರಿಯನ್ನೂ ನಡೆಸಿ ಚಿತ್ರದಲ್ಲಿ ನಟಿಸಿದ್ದಾರೆ. ಯಕ್ಷಗಾನಕ್ಕೆ ಸಂಬಂಧಿಸಿದಂತೆ ಹಲವು ವೀಡಿಯೋಗಳನ್ನು ನೋಡಿ, ಅರ್ಥ ಮಾಡಿಕೊಂಡು, ಯಕ್ಷಗಾನದ ವೇಷ ತೊಟ್ಟು ಅವರು ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಯಕ್ಷಗಾನ ನೃತ್ಯ ಮಾಡುವ ಆಸೆಯೂ ಅವರಿಗಿತ್ತಂತೆ. ಆದರೆ, ಅನಾರೋಗ್ಯದ ಸಮಸ್ಯೆಯಿಂದ ಅದು ಸಾಧ್ಯವಾಗಲಿಲ್ಲ.

‘ವೀರ ಚಂದ್ರಹಾಸ’ ಚಿತ್ರದಲ್ಲಿ 450ಕ್ಕೂ ಹೆಚ್ಚು ಯಕ್ಷಗಾನ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರಂತೆ. ಈ ಚಿತ್ರವನ್ನು ಓಂಕಾರ್‍ ಮೂವೀಸ್‍ ಬ್ಯಾನರ್‍ ಅಡಿ ಎನ್‍.ಎಸ್. ರಾಜಕುಮಾರ್ ನಿರ್ಮಿಸಿದ್ದು, ಈಗಾಗಲೇ ಚಿತ್ರೀಕರಣ ಮುಗಿದು, ಪೋಸ್ಟ್-ಪ್ರೊಡಕ್ಷನ್‍ ಕೆಲಸಗಳು ನಡೆಯುತ್ತಿವೆ. ಚಿತ್ರವು 2025ರ ಜುಲೈ ನಂತರ ಬಿಡುಗಡೆಯಾಗುವ ನಿರೀಕ್ಷೆ ಇದೆ.

Tags: