Mysore
14
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

‘ಟಕೀಲಾ’ ಹಾಡಿಗೆ ಧ್ವನಿಯಾದ ಶರಣ್‍; ಸದ್ಯದಲ್ಲೇ ಹಾಡು ಬಿಡುಗಡೆ

sharan singing song

ಶರಣ್‍ ಬರೀ ನಟರಾಗಿಯಷ್ಟೇ ಅಲ್ಲ, ಗಾಯಕರಾಗಿಯೂ ಜನಪ್ರಿಯರು. ‘ರಾಜ ರಾಜೇಂದ್ರ’ ಚಿತ್ರದ ‘ಮಧ್ಯಾಹ್ನ ಕನಸಿನಲ್ಲಿ …’, ‘ವಜ್ರಕಾಯ’ ಚಿತ್ರದ ‘ತೂಕಟ ಗಡಬಡ …’, ‘ಬುಲೆಟ್‍ ಬಸ್ಯ’ ಚಿತ್ರದ ‘ಕಾಲ್‍ ಕೆಜಿ ಕಳ್ಳೇಕಾಯ್‍ …’, ‘ದನ ಕಾಯೋನು’ ಚಿತ್ರದ ಹಾಲು ಕುಡಿದ ಮಕ್ಳೇ …’ ಮುಂತಾದ ಹಾಡುಗಳನ್ನು ಅವರು ಹಾಡಿದ್ದಾರೆ.

ಈಗ ಬಹಳ ದಿನಗಳ ನಂತರ ಹಾಡೊಂದನ್ನು ಅವರು ಹಾಡಿದ್ದಾರೆ. ಧರ್ಮ ಕೀರ್ತಿರಾಜ್‍ ಅಭಿನಯದ ‘ಟಕೀಲಾ’ ಚಿತ್ರದ ಶೀರ್ಷಿಕೆ ಗೀತೆಯಾದ ‘ಟಕೀಲಾ ಟಕೀಲಾ …’ ಎಂಬ ಹಾಡನ್ನು ಹಾಡಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಹಾಡಿಗೆ ವಿ. ನಾಗೇಂದ್ರ ಪ್ರಸಾದ್‍ ಅವರು ಸಾಹಿತ್ಯ ರಚಿಸಿದ್ದಾರೆ.

‘ಟಕೀಲಾ’ ಸುಮಾರು ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಚಿತ್ರ. ಈ ಹಿಂದೆ ‘ವಿದ್ಯಾರ್ಥಿ’, ‘ಮುನಿಯ’, ‘ಜನ್‍ ಧನ್‍’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ಮರಡಿಹಳ್ಳಿ ನಾಗಚಂದ್ರ ಈ ಚಿತ್ರವನ್ನು ಶ್ರೀ ಸಿದ್ದಿವಿನಾಯಕ ಫಿಲಂಸ್ ಬ್ಯಾನರ್‍ ಅಡಿ ನಿರ್ಮಿಸಿದರೆ, ‘ಮೀಸೆ ಚಿಗುರಿದಾಗ’, ‘ಹೂಂ ಅಂತೀಯ ಉಹೂಂ ಅಂತೀಯ’ ಚಿತ್ರಗಳನ್ನು ನಿರ್ದೇಶಿಸಿರುವ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕ ಪ್ರವೀಣ್‍ ನಾಯಕ್‍, ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:- ನಿರಂಜನ್‌ ಸುಧೀಂದ್ರ ಜೊತೆಗೆ ‘ನೆನಪಿರಲಿ’ ಪ್ರೇಮ್; ʼಸ್ಪಾರ್ಕ್‌ʼಗೆ ಹೊಸ ಸೇರ್ಪಡೆ

ಈಗಾಗಲೇ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಶರಣ್‍ ಹಾಡಿರುವ ಹಾಡಿನ ಮೂಲಕ ಚಿತ್ರದ ಪ್ರಚಾರದ ಕೆಲಸಗಳು ಶುರುವಾಗಲಿವೆ.

‘ಟಕೀಲಾ’ ಚಿತ್ರದಲ್ಲಿ ಧರ್ಮ ಕೀರ್ತಿರಾಜ್‍ ಮತ್ತು ನಿಖಿತಾ ಸ್ವಾಮಿ ನಾಯಕ-ನಾಯಕಿಯಾಗಿ ಅಭಿನಯಿಸಿದರೆ, ಮಿಕ್ಕಂತೆ ನಾಗೇಂದ್ರ ಅರಸ್, ಕೋಟೆ ಪ್ರಭಾಕರ್, ಸುಮನ್‌ ಶರ್ಮ, ಅರುಣ್ ಮೇಸ್ಟ್ರು ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಪಿ.ಕೆ.ಹೆಚ್. ದಾಸ್ ಛಾಯಾಗ್ರಹಣ ಮತ್ತು ಟಾಪ್‌ಸ್ಟಾರ್ ರೇಣು ಅವರ ಸಂಗೀತವಿದೆ.

ಈ ಚಿತ್ರಕ್ಕಾಗಿ ಬೆಂಗಳೂರು, ದೇವರಾಯನದುರ್ಗ, ಸಕಲೇಶಪುರ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ.

Tags:
error: Content is protected !!