ದುಬೈ: 2024ನೇ ಸಾಲಿನ ದಕ್ಷಿಣ ಭಾರತದ ಪ್ರತಿಷ್ಠಿತ ಪ್ರಶ್ತಿ ಸೈಮಾ ಸಮಾರಂಭ ದುಬೈನಲ್ಲಿ ಸೆಪ್ಟೆಂಬರ್ 14 ಮತ್ತು 15 ರಂದು ನಡೆಯಲಿದೆ.
ಈ ಬಾರಿ 12ನೇ ಆವೃತ್ತಿ ಸೈಮಾ ನಡೆಯುತ್ತಿದ್ದು, ದಕ್ಷಿಣ ಭಾರತದಲ್ಲಿ ಪ್ರತಿ ವರ್ಷ ನಡೆಯುವ ಪ್ರತಿಷ್ಠಿತ ಪ್ರಶಸ್ತಿ ಎಂಬ ಹೆಗ್ಗಳಿಕೆಗೆ ಸೈಮಾ ಪಾತ್ರವಾಗಿದೆ. ದಕ್ಷಿಣ ಸಿನಿರಂಗದ ಪ್ರತಿಭೆಗಳನ್ನು ಗುರುತಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಭ್ರಮಿಸುವ ಸೈಮಾದಲ್ಲಿ ನಾಲ್ಕು ಇಂಡಸ್ಟ್ರೀಗಳು ಒಂದೇ ಕುಟುಂಬದಂತೆ ಭಾಗಿಯಾಗಲಿದ್ದಾರೆ.
ಇನ್ನು ಈಗಾಗಲೇ ಸೈಮಾ ಪ್ರಶಸ್ತಿಗೆ ನಾಮಿನೇಷನ್ಸ್ ಆರಂಭವಾಗಿದ್ದು, ಸಪ್ತಸಾಗರದಾಚೆ ಎಲ್ಲೂ ಸೈಡ್ ಎ ಸಿನಿಮಾಗಳು ಸೈಮಾ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿವೆ. ದರ್ಶನ್ ಅಭಿನಯದ ಕಾಟೇರ ಚಿತ್ರ 8 ವಿಭಾಗಗಳಲಿ ನಾಮಿನೇಟ್ ಆಗಿದೆ. ಇನ್ನು ರಕ್ಷಿತ್ ಶೆಟ್ಟಿ ನಟನೆಯ ಹೇಮಂತ್ ರಾವ್ ನಿರ್ದೇಶನದ ಸಪ್ತಸಾಗರದಾಚೆ ಎಲ್ಲೂ ಸೈಡ್ ಎ ಚಿತ್ರ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.
ಇದಲ್ಲದೇ ತೆಲುಗು, ತಮಿಳು, ಮಲಯಾಳಂನಲ್ಲೂ ಅನೇಕ ಚಿತ್ರಗಳು ನಾಮನಿರ್ದೇಶನಗೊಂಡಿದ್ದು, ಯಾವುದಕ್ಕೆ ಸೈಮಾ ಅವಾರ್ಡ್ ಬರುತ್ತದೆ ಎಂಬುದು ಮುಂದಿನ ಸೆಪ್ಟೆಂಬರ್ ತಿಂಗಳಿನಲ್ಲಿ ತಿಳಿಯಲಿದೆ.