ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ಸಿಕ್ಕಿದ್ದು, ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಟೀಸರ್ ಇಂದು ರಿಲೀಸ್ ಆಗಿದೆ.
ಅಭಿಮಾನಿಗಳು ತೀವ್ರ ಕುತೂಹಲದಿಂದ ಕಾಯುತ್ತಿದ್ದ ಟಾಕ್ಸಿಕ್ ಚಿತ್ರ ಟೀಸರ್ ಇಂದು ಬಿಡುಗಡೆ ಆಗಿದೆ. ಈ ಮೂಲಕ ಯಶ್ ಹುಟ್ಟುಹಬ್ಬದಂದೇ ಚಿತ್ರತಂಡ ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ.
ಈ ಹಿಂದೆ ಚಿತ್ರಕ್ಕೆ ಸಂಬಂಧಿಸಿದಂತೆ ಯಶ್ ಅವರ ಒಂದಿಷ್ಟು ಫೋಟೋಗಳು ರಿಲೀಸ್ ಆಗಿದ್ದವು. ಇಂದು ರಿಲೀಸ್ ಆದ ಟೀಸರ್‌ನಲ್ಲಿ ಯಶ್ ಅವರ ಪಾತ್ರ ರಿವೀಲ್ ಆಗಿದೆ.
ಚಿತ್ರದಲ್ಲಿ ರುಕ್ಮಿಣಿ ವಸಂತ್, ನಯನತಾರಾ, ಕಿಯಾರಾ ಅಡ್ವಾಣಿ ಸೇರಿದಂತೆ ನಟಿಯರ ದೊಡ್ಡ ಬಳಗವೇ ಇದೆ.
ಸಿನಿಮಾದಲ್ಲಿ ಊಹಿಸಲಾಗದ ಟ್ವಿಸ್ಟ್‌ಗಳು ಇದೆ ಎಂದು ಹೇಳಲಾಗಿದ್ದು, ಸಿನಿಮಾ ಸಿನಿಪ್ರಿಯರಲ್ಲಿ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿದೆ.
ಇನ್ನು ನಟ ಯಶ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ ಮನೆಮಾಡಿದ್ದು, ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.




