Mysore
25
broken clouds
Light
Dark

ಬಳ್ಳಾರಿ ಜೈಲಿನಲ್ಲಿ ದರ್ಶನ್‌ಗೆ ಸಿಕ್ತು ಸರ್ಜಿಕಲ್‌ ಚೇರ್‌ ಭಾಗ್ಯ

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಡಿ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್‌ ಆಗಿರುವ ನಟ ದರ್ಶನ್‌ಗೆ ಅನಾರೋಗ್ಯದ ಕಾರಣದಿಂದಾಗಿ ಸರ್ಜಿಕಲ್‌ ಚೇರ್‌ ನೀಡಲಾಗಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್‌ ಆಗಿರುವ ನಟ ದರ್ಶನ್‌ ಅವರು ಅನಾರೋಗ್ಯದ ಕಾರಣದಿಂದಾಗಿ ನನಗೆ ಸರ್ಜಿಕಲ್‌ ಚೇರ್‌ ಬೇಕು ಎಂದು ಜೈಲು ಡಿಐಜಿಗೆ ಮನವಿ ಮಾಡಿದ್ದರು.

ದರ್ಶನ್‌ ಮನವಿ ಪುರಸ್ಕರಿಸಿದ ಡಿಐಜಿ ಕೂಲಂಕುಷವಾಗಿ ಆರೋಗ್ಯ ತಪಾಸಣೆ ಹಾಗೂ ರಿಪೋರ್ಟ್‌ ಪರಿಶೀಲನೆ ಬಳಿಕ ಚೇರ್‌ ಕೊಡಲು ಅಸ್ತು ಎಂದಿದ್ದಾರೆ.

ದರ್ಶನ್‌ ಆರೋಗ್ಯದ ಬಗ್ಗೆ ವೈದ್ಯರು ಕೊಟ್ಟ ವರದಿ ಬಳಿಕ ಕಾರಾಗೃಹ ಇಲಾಖೆ ಡಿಐಜಿ ದರ್ಶನ್‌ಗೆ ಸರ್ಜಿಕಲ್‌ ಚೇರನ್ನು ನೀಡಿದ್ದಾರೆ.

ಅರ್ಥೋಪಿಡಿಕ್‌ ವೈದ್ಯರಿಂದ ತಪಾಸಣೆ ಹಾಗೂ ಪರಪ್ಪನ ಅಗ್ರಹಾರದಿಂದ ವರದಿ ತರಿಸಿಕೊಂಡು ಪರಿಶೀಲನೆ ಮಾಡಿರುವ ಡಿಐಜಿ ಅವರು,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ದರ್ಶನ್‌ಗೆ ಸರ್ಜಿಕಲ್‌ ಚೇರ್‌ ತರಿಸಿ ಕೊಟ್ಟಿದ್ದಾರೆ.