Mysore
25
haze

Social Media

ಶನಿವಾರ, 13 ಡಿಸೆಂಬರ್ 2025
Light
Dark

ಧನಂಜಯ್‍ಗೆ ರೀಷ್ಮಾ ನಾಯಕಿ; ‘ಅಣ್ಣ From Mexico’ಗೆ ಸೇರ್ಪಡೆ

ಕನ್ನಡದ ಹಲವು ನಟಿಯರಿಗೆ ಕನ್ನಡದಲ್ಲೇ ಕೆಲಸವಿಲ್ಲ ಎನ್ನುವಂತಹ ಸ್ಥಿತಿ ಇರುವಾಗ ಕೊಡಗಿನ ಹುಡುಗಿ ರೀಷ್ಮಾ ನಾಣಯ್ಯ ಮಾತ್ರ ಕನ್ನಡದಲ್ಲಿ ಸಿನಿಮಾ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಉಪೇಂದ್ರ ಜೊತೆಗೆ ‘ಯುಐ’ ಮತ್ತು ಧ್ರುವ ಸರ್ಜಾ ಜೊತೆಗೆ ‘ಕೆಡಿ – ದಿ ಡೆವಿಲ್‍’ ಚಿತ್ರದಲ್ಲಿ ನಟಿಸುತ್ತಿರುವ ರೀಷ್ಮಾ, ಇದೀಗ ಧನಂಜಯ್‍ ಅಭಿನಯದ ‘ಅಣ್ಣ From Mexico’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

‘ಅಣ್ಣ From Mexico’ ಚಿತ್ರವು ಕಳೆದ ವರ್ಷ ಧನಂಜಯ್‍ ಹುಟ್ಟುಹಬ್ಬದಂದು ಘೋಷಣೆಯಾಗಿತ್ತು. ಆ ನಂತರ ವರ್ಷದ ಕೊನೆಯಲ್ಲಿ ಚಿತ್ರದ ಮುಹೂರ್ತ ಸದ್ದಿಲ್ಲದೆ ನಡೆದಿತ್ತು. ಈಗಾಗಲೇ ಚಿತ್ರೀಕರಣ ಸಹ ಮುಗಿಯುವ ಹಂತಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ನಾಯಕಿಯ ಘೋಷಣೆಯಾಗಿದೆ. ಇತ್ತೀಚೆಗೆ ದಸರಾ ಹಬ್ಬದ ಸಂದರ್ಭದಲ್ಲಿ ಚಿತ್ರತಂಡವು ನಾಯಕಿಯ ಪೋಸ್ಟರ್‍ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಬರಮಾಡಿಕೊಂಡಿದೆ.

‘ಅಣ್ಣ From Mexico’ ಚಿತ್ರವನ್ನು ಶಂಕರ್‍ ಗುರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದರು. 2021ರಲ್ಲಿ ತೆರೆಗೆ ಬಂದ ‘ಬಡವ ರಾಸ್ಕಲ್’ ಚಿತ್ರವನ್ನು ಶಂಕರ್ ಗುರು ನಿರ್ದೇಶಿಸಿದ್ದರು. ‘ಅಣ್ಣ From Mexico’ ಚಿತ್ರವು ಫ್ಯಾಮಿಲಿ ಎಂಟರ್‌ ಟ್ರೇನರ್‍ ಆಗಿದ್ದು, ದಿ ರಾಯಲ್ ಸ್ಟುಡಿಯೋಸ್ ಅಡಿಯಲ್ಲಿ ಸತ್ಯ ರಾಯಲ್‌ ನಿರ್ಮಿಸುತ್ತಿದ್ದು. ಐರಾ ಫಿಲ್ಮ್ಸ್ ಕೂಡ ಜೊತೆಯಾಗಿ ಕೈ ಜೋಡಿಸಿದೆ.

ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜಿಸುತ್ತಿದ್ದು, ಎಸ್‍.ಕೆ. ರಾವ್‍ ಅವರ ಛಾಯಾಗ್ರಹಣವಿದೆ. ‘ಅಣ್ಣ From Mexico’ ಚಿತ್ರಕ್ಕೆ ಪ್ರಶಾಂತ್‍ ರಾಜಪ್ಪ ಸಂಭಾಷಣೆ ರಚಿಸಿದ್ದಾರೆ.

ಅಂದಹಾಗೆ, ರೀಷ್ಮಾ ಅಭಿನಯದ ‘ಯುಐ’ ಮತ್ತು ‘ಕೆಡಿ – ದಿ ಡೆವಿಲ್‍’ ಚಿತ್ರಗಳ ಚಿತ್ರೀಕರಣ ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಮಧ್ಯೆ, ‘ಯುಐ’ ಚಿತ್ರವು ನವೆಂಬರ್‍ನಲ್ಲಿ ಬಿಡುಗಡೆಯಾದರೆ, ‘ಕೆಡಿ – ದಿ ಡೆವಿಲ್‍’ ಚಿತ್ರವು ಡಿಸೆಂಬರ್‍ ತಿಂಗಳಲ್ಲಿ ಬಿಡುಗಡೆಯಾಗಲಿದೆ.

 

Tags:
error: Content is protected !!