Mysore
20
overcast clouds
Light
Dark

ಕನ್ನಡತಿ ರಂಜಿನಿ ರಾಘವನ್‌ಗೆ ಯುವ ಸಾಹಿತ್ಯ ರತ್ನ ಬಿರುದು

ಬೆಂಗಳೂರು: ಹಲವು ಕನ್ನಡ ಧಾರಾವಾಹಿಗಳ ಮೂಲಕ ಖ್ಯಾತಿ ಪಡೆದಿರುವ ನಟಿ ರಂಜಿನಿ ರಾಘವನ್‌ಗೆ ಯುವ ಸಾಹಿತ್ಯ ರತ್ನ ಬಿರುದು ನೀಡಲಾಗಿದೆ.

ಹಲವು ಕನ್ನಡ ಧಾರಾವಾಹಿಗಳ ಮೂಲಕ ಮನೆ ಮಾತಾಗಿರುವ ನಟಿ ರಂಜಿನಿ ರಾಘವನ್‌ ಅವರು, ನಟಿಯ ಜೊತೆ ಜೊತೆಗೆ ಒಳ್ಳೆಯ ಬರಹಗಾರ್ತಿ. ಇವರು ಕತೆಡಬ್ಬಿ ಎಂಬ ಕಥಾಸಂಕಲನ ಮತ್ತು ಸ್ವೈಪ್‌ ರೈಟ್‌ ಎಂಬ ಕಾದಂಬರಿ ಬರೆದು ಸಾಹಿತ್ಯ ಲೋಕದಲ್ಲಿಯೂ ಮಿಂಚುತ್ತಿದ್ದಾರೆ. ರಂಜಿನಿ ಅವರಿಗೆ ಕನ್ನಡದ ಮೇಲೆ ಅತೀ ಹೆಚ್ಚು ಆಸಕ್ತಿ. ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಮೂಲಕ ಇದನ್ನು ಅವರು ಸಾಬೀತು ಮಾಡಿದ್ದಾರೆ.

ಶೂಟಿಂಗ್‌ನ ಬಿಜಿ ಶೆಡ್ಯೂಲ್‌ ನಡುವೆಯೂ ಪುಸ್ತಕ ಬರೆಯಲು ಟೈಂ ಮಾಡಿಕೊಳ್ಳುತ್ತಾರೆ. ನಟನೆಯಲ್ಲಿ ತೊಡಗಿಸಿಕೊಂಡವರು ಬರವಣಿಗೆ ಬಗ್ಗೆ ಗಮನ ನೀಡೋಕೆ ಸಮಯ ಸಿಗೋದು ಕಡಿಮೆ. ಅದರಲ್ಲೂ ಧಾರಾವಾಹಿ ನಟ-ನಟಿಯರು ಪ್ರತಿ ದಿನ ಶೂಟಿಂಗ್‌ನಲ್ಲೇ ಮುಳುಗಿರುತ್ತಾರೆ. ಅದರ ನಡುವೆಯೂ ಕಥೆ, ಕಾದಂಬರಿ ಬರೆಯಬೇಕು ಎಂದರೆ ಸಮಯ ಹೊಂದಿಸಿಕೊಳ್ಳುವುದು ಸುಲಭದ ಮಾತಲ್ಲ. ಆ ಎಲ್ಲಾ ನೆಪಗಳನ್ನು ಬದಿಗಿಟ್ಟು ನಟಿ ರಂಜಿನಿ ರಾಘವನ್‌ ಅವರು ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ.

ಇದೀಗ ನಟಿಗೆ ಇನ್ನೊಂದು ಹೆಮ್ಮೆಯ ಗರಿ ಮೂಡಿದೆ. ಇವರ ಸಾಹಿತ್ಯ ಪ್ರೇಮವನ್ನು ಗುರುತಿಸಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ಯುವ ಸಾಹಿತ್ಯ ರತ್ನ ಬಿರುದು ನೀಡಿ ಗೌರವಿಸಲಾಗಿದೆ. ಇದನ್ನು ನಟಿ ರಂಜಿನಿ ರಾಘವನ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.