Mysore
15
scattered clouds

Social Media

ಶುಕ್ರವಾರ, 30 ಜನವರಿ 2026
Light
Dark

ಅಮೇಜಾನ್ ಪ್ರೈಮ್‍ನಲ್ಲಿ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಮಿಥ್ಯ’

ರಕ್ಷಿತ್‍ ಶೆಟ್ಟಿ ನಿರ್ಮಾಣದ ‘ಮಿಥ್ಯ’ ಚಿತ್ರವು ಮಾರ್ಚ್ 07ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬಂದಿದ್ದರೂ, ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ. ಈಗ ಈ ಚಿತ್ರವು ಅಮೇಜಾನ್‍ ಪ್ರೈಮ್‍ನಲ್ಲಿ ಸ್ಟ್ರೀಮ್‍ ಆಗುತ್ತಿದೆ.

ರಕ್ಷಿತ್ ಶೆಟ್ಟಿ ಪರಂವಃ ಪಿಕ್ಚರ್ಸ್ ಮೂಲಕ ಅನೇಕ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ, ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಆ ಪೈಕಿ ‘ಮಿಥ್ಯ’ ಸಹ ಒಂದು. ಹೆತ್ತವರನ್ನು ಕಳೆದುಕೊಂಡ ಮಿಥುನ್ ಎಂಬ ಹುಡುಗನ ಹೊಸ ಕನಸಿನ ಕಥಾಹಂದರ ಹೊಂದಿರುವ ಈ ಚಿತ್ರ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲೂ ಪ್ರದರ್ಶನಗೊಂಡಿತು. ಆದರೆ, ಚಿತ್ರ ಬಿಡುಗಡೆಯಾದಾಗ ಹೆಚ್ಚು ಸುದ್ದಿಯಾಗಲಿಲ್ಲ. ಈಗ ಈ ಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ನೋಡಲು ಲಭ್ಯವಿದೆ.

ಈ ಹಿಂದೆ ‘ಏಕಂ’ ಎಂಬ ವೆಬ್ ಸಿರೀಸ್ ಸೇರಿದಂತೆ ಅನೇಕ ಕಿರುಚಿತ್ರಗಳನ್ನು ನಿರ್ದೇಶಿಸಿರುವ ಸುಮಂತ್ ಭಟ್, ‘ಮಿಥ್ಯ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಮೂರು ಮುಖ್ಯಪಾತ್ರಗಳಿದ್ದ, ಮಾಸ್ಟರ್ ಅತೀಶ್ ಎಸ್, ಶೆಟ್ಟಿ, ಮಿಥುನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಕಾಶ್ ತುಮ್ಮಿನಾಡು, ರೂಪ ವರ್ಕಾಡ್ ಸಹ ಚಿತ್ರದಲ್ಲಿ ನಟಿಸಿದ್ದಾರೆ.

‘ಮಿಥ್ಯ’ ಚಿತ್ರಕ್ಕೆ ಉದಿತ್ ಕುರಾನ ಛಾಯಾಗ್ರಹಣ, ಭುವನೇಶ್ ಮಣಿವಣನ್ ಸಂಕಲನ ಹಾಗೂ ಮಿಥುನ್ ಮುಕುಂದನ್ ಸಂಗೀತವಿದೆ.

ಇತ್ತೀಚಿನ ದಿನಗಳಲ್ಲಿ ಅಮೇಜಾನ್‍ ಪ್ರೈಮ್‍ನಲ್ಲಿ ‘ಫಾರೆಸ್ಟ್’, ‘ಛೂ ಮಂತರ್‍’, ‘ನೋಡಿದವರು ಏನಂತಾರೆ’, ‘ಮರ್ಯಾದೆ ಪ್ರಶ್ನೆ’, ‘ರಾಯಲ್‍’, ‘ಲಾಫಿಂಗ್‍ ಬುದ್ಧ’, ‘ತಾಯಿ ಕಸ್ತೂರ್‍ ಗಾಂಧು’ ಮುಂತಾದ ಚಿತ್ರಗಳು ಬಿಡುಗಡೆಯಾಗಿದ್ದು, ಈಗ ಆ ಸಾಲಿಗೆ ‘ಮಿಥ್ಯ’ ಸಹ ಸೇರಿದೆ.

Tags:
error: Content is protected !!