Mysore
26
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ರೇಣುಕಾಸ್ವಾಮಿಯಿಂದ ಅಶ್ಲೀಲ ಸಂದೇಶ ವಿಚಾರ ಸ್ಪಷ್ಟನೆ ನೀಡಿದ ರಾಗಿಣಿ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೋರ್ಟ್‌ಗೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ರೇಣುಕಾಸ್ವಾಮಿ ಕೇವಲ ಪವಿತ್ರಾ ಗೌಡಗೆ ಮಾತ್ರವಲ್ಲದೇ ಚಂದನವನದ ಇತರೆ ಕೆಲ ನಟಿಯರಿಗೂ ಸಹ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂದು ಉಲ್ಲೇಖಿಸಲಾಗಿದೆ.

ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿರುವ ರಾಗಿಣಿ ದ್ವಿವೇದಿ ಹಾಗೂ ಶುಭ ಪೂಂಜಾ ಹೆಸರು ಇಲ್ಲಿ ಕೇಳಿಬಂದಿದೆ. ಹೀಗೆ ಸುದ್ದಿಗಳು ಹರಿದಾಡಿದ ಬೆನ್ನಲ್ಲೇ ಇಬ್ಬರೂ ನಟಿಯರೂ ಪ್ರತಿಕ್ರಿಯೆ ನೀಡಿದ್ದು, ಶುಭ ಪೂಂಜಾ ಸಾಮಾಜಿಕ ಜಾಲತಾಣದಲ್ಲಿ ʼಮಾಧ್ಯಮ ಮಿತ್ರರೇ, ರೇಣುಕಾಸ್ವಾಮಿ ಪ್ರಕರಣದ ವಿಚಾರವಾಗಿ ಬೆಳಗ್ಗೆಯಿಂದ ಕರೆ ಮಾಡುತ್ತಿದ್ದೀರ ಅಂತಹವರಿಗೆ ಈ ಮೂಲಕ ಸ್ಪಷ್ಟನೆ ನೀಡುತ್ತಿದ್ದೇನೆ. ನನ್ನ ಖಾತೆಗೆ ಅಂತಹ ಯಾವುದೇ ಸಂದೇಶವೂ ಬಂದಿಲ್ಲʼ ಎಂದಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗಳ ಜತೆ ಮಾತನಾಡಿರುವ ರಾಗಿಣಿ ದ್ವಿವೇದಿ ʼನನ್ನ ಪ್ರೊಫೈಲ್‌ ಅನ್ನು ಖಾಸಗಿ ಏಜೆನ್ಸಿಯೊಂದು ನಿರ್ವಹಣೆ ಮಾಡುತ್ತಿದೆ. ಹೀಗಾಗಿ ಅಶ್ಲೀಲ ಸಂದೇಶಗಳು ಬಂದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅಂತಹ ಸಂದೇಶ ಬಂದರೂ ಸಹ ನಾನು ಓದುವುದಿಲ್ಲ. ನನ್ನ ಗಮನಕ್ಕೆ ಬಂದಂತೆ ಅಂತಹ ಯಾವುದೇ ಕೆಟ್ಟ ಸಂದೇಶವೂ ಬಂದಿಲ್ಲʼ ಎಂದು ಹೇಳಿದ್ದಾರೆ.

Tags:
error: Content is protected !!