Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

‘ಓಡೋ ಓಡೋ ಓಡೋ …’ ಹಾಡಿಗೆ ಒಂದು ಮಿಲಿಯನ್ ವೀಕ್ಷಣೆ

ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು ಮುಂತಾದವರು ಜೊತೆಯಾಗಿ ನಟಿಸಿರುವ ‘ಫಾರೆಸ್ಟ್’ ಎಂಬ ಚಿತ್ರದ ಹಾಡು, ಎರಡು ವಾರಗಳ ಹಿಂದೆ ಬಿಡುಗಡೆಯಾಗಿತ್ತು. ಕೈಲಾಶ್‍ ಖೇರ್‍ ಹಾಡಿರುವ ಈ ಹಾಡು ಇದೀಗ ಒಂದು ಮಿಲಿಯನ್‍ಗೂ ಹೆಚ್ಚು ವೀಕ್ಷಣೆ ಕಂಡಿದೆ.

‘ಫಾರೆಸ್ಟ್’ ಚಿತ್ರದ ‘ಓಡೋ ಓಡೋ ಓಡೋ …’ ಚಿತ್ರದ ಹಾಡಿಗೆ ಪುನೀತ್‍ ಆರ್ಯ ಸಾಹಿತ್ಯ ಬರೆದಿದ್ದು, ಕೈಲಾಶ್‍ ಖೇರ್‍ ಮತ್ತು ಹರ್ಷ ಉಪ್ಪಾರ್‍ ಧ್ವನಿಯಾಗಿದ್ದಾರೆ. ಇನ್ನು, ಯೂಟ್ಯೂಬ್‍ನ ಎನ್‍.ಎಂ.ಕೆ. ಸಿನಿಮಾಸ್‍ ಚಾನಲ್‍ನಲ್ಲಿ ಈ ಹಾಡು ಬಿಡುಗಡೆ ಆಗಿದೆ. ಈ ಹಾಡನ್ನು ಈಗಾಗಲೇ ಹನ್ನೊಂದು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ.

ಎನ್‍.ಎಂ.ಕೆ. ಸಿನಿಮಾಸ್‍ ಬ್ಯಾನರ್‍ನಡಿ ಎನ್‍.ಎಂ. ಕಾಂತರಾಜ್ ನಿರ್ಮಿಸಿರುವ ‘ಫಾರೆಸ್ಟ್’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಮಡಿಕೇರಿ, ಎಂ.ಎಂ.ಹಿಲ್ಸ್, ಸಂಪಾಜೆ ಕಾಡು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಹೆಸರೇ ಹೇಳುವಂತೆ ಕಾಡಿನಲ್ಲಿ ನಡೆಯುವ ಸಾಹಸಮಯ ಕಥೆ ಇದಾಗಿದ್ದು, ಒಂದಿಷ್ಟು ಜನ ಕಾಡಿಗೆ ಯಾಕೆ ಹೋಗುತ್ತಾರೆ, ಹೋಗಿ ಏನು ಮಾಡುತ್ತಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡಲಾಗಿದೆ.

‘ಫಾರೆಸ್ಟ್’ ಚಿತ್ರಕ್ಕೆ ನಿರ್ದೇಶಕ ಚಂದ್ರಮೋಹನ್ ಅವರು ಸತ್ಯಶೌರ್ಯ ಸಾಗರ್ ಅವರ ಜೊತೆಗೂಡಿ ಕಥೆ, ಚಿತ್ರಕಥೆ ರಚಿಸಿದ್ದಾರೆ. ಸಂಭಾಷಣೆಯನ್ನು ಸತ್ಯಶೌರ್ಯ ಸಾಗರ್ ಅವರೆ ಬರೆದಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಧರ್ಮವಿಶ್ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಆನಂದ್ ರಾಜವಿಕ್ರಮ್ ಅವರದು. ರವಿಕುಮಾರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ ಈ ಚಿತ್ರಕ್ಕಿದೆ.

ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ರಂಗಾಯಣ ರಘು, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಣಾಜೆ, ಸೂರಜ್ ಪಾಪ್ಸ್, ಸುನೀಲ್ ಕುಮಾರ್ ಮುಂತಾದವರು ನಟಿಸಿರುವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.

Tags: