ಕನ್ನಡದ ಖ್ಯಾತ ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ದಾಂಪತ್ಯ ಜೀವನ ಇಂದಿಗೆ ಅಂತ್ಯವಾಗಿದೆ. ಹೌದು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಈ ಜೋಡಿಗೆ ಕೋರ್ಟ್ ಇಂದು ವಿಚ್ಛೇದನ ಮಂಜೂರು ಮಾಡಿದೆ. ಆ ಮೂಲಕ ನಾಲ್ಕು ವರ್ಷಗಳ ದಾಂಪತ್ಯ ಜೀವನ ಮುಗಿದಿದೆ.
ಕೆಲವೊಂದು ವೈಯಕ್ತಿಕ ಸಮಸ್ಯೆಗಳಿಂದ ಮುಕ್ತಿ ಹೊಂದುವ ಸಲುವಾಗಿ ಈ ಜೋಡಿ ವಿಚ್ಛೇದನ ಪಡೆಯಲು ಕೋರ್ಟ್ ಮೆಟ್ಟಿಲೇರಿತ್ತು. ಇದನ್ನು ಸಮ್ಮತಿಸಿದ ನ್ಯಾಯಾಲಯ ಇವರಿಗೆ ವಿಚ್ಛೇದನ ನೀಡಿ ಆದೇಶ ಹೊರಡಿಸಿದೆ.
ವಿಚ್ಛೇದನಕ್ಕಾಗಿ ಕಾಯುವ ಜೋಡಿಗಳಿಗೆ ವರ್ಷಾನುಗಟ್ಟಲೇ ಸಮಯ ತೆಗೆದುಕೊಳ್ಳುತ್ತವೆ. ಆದರೆ ಈ ಜೋಡಿಗೆ ಕೇವಲ ಒಂದೇ ದಿನದಲ್ಲಿ ವಿಚ್ಛೇದನ ಸಿಕ್ಕಿದೆ. ಇಬ್ಬರೂ ನಗು-ನಗುತ್ತಲೇ ಕೋರ್ಟ್ ಆವರಣಕ್ಕೆ ಬಂದು, ಸರದಿಯಲ್ಲಿ ಪಕ್ಕ-ಪಕ್ಕ ಕೂತು ಕೋರ್ಟ್ ನೀಡಿದ ತೀರ್ಪು ಆಲಿಸಿ ಅಲ್ಲಿಂದ ನಿರ್ಗಮಿಸಿದ್ದಾರೆ.
ಈ ಸಂಬಂದ ಬೆಂಗಳೂರಿನ 2ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯ ತೀರ್ಪು ನೀಡಿದೆ. ಸಿಕ್ಷನ್ 13B ಅಡಿಯಲ್ಲಿ ಇಬ್ಬರ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ದೊರಕಿದೆ.
ಇನ್ನು ಈ ಇಬ್ಬರ ವಿಚ್ಛೇದನ ವಿಷಯಕ್ಕೆ ಸಂಬಂಧಿಸಿದಂತೆ, ಈ ಜೋಡಿಗೆ ಮಗು ಪಡೆಯುವ ವಿಷಯದಲ್ಲಿ ಆಗಾಗ್ಗೆ ಕಿರಿಕ್ ಆಗುತ್ತಲೇ ಇತ್ತಂತೆ. ಮದುವೆಯಾಗಿ ನಾಲ್ಕು ವರ್ಷಗಳು ಕಳೆದರು ಸಹಾ ಯಾವುದೇ ಮಗುವನ್ನು ಪಡೆದಿರಲಿಲ್ಲ. ಈ ವಿಚಾರಕ್ಕೆ ಇಬ್ಬರಿಗೂ ಜಗಳ ಆಗುತ್ತಿತ್ತು ಎನ್ನಲಾಗಿದ್ದು, ನಿವೇದಿತಾ ಅವರು ಮಗು ಪಡೆಯುವುದನ್ನು ನಿರಾಕರಿಸಿದ್ದರು ಎಂದು ಸ್ಯಾಂಡಲ್‌ವುಡ್ ಅಂಗಳದಲ್ಲಿ ಸುದ್ದಿ ಹರಿದಾಡುತ್ತಿದೆ.
ಆದರೆ ವಿಚ್ಛೇದನ ಪಡೆದಿರುವ ದಂಪತಿಯೇ ಇದಕ್ಕೆ ಉತ್ತರ ನೀಡಬೇಕಿದೆ.





