Mysore
19
overcast clouds

Social Media

ಭಾನುವಾರ, 25 ಜನವರಿ 2026
Light
Dark

ಧಾರವಾಡ ಹುಡುಗ, ಮೈಸೂರಿನ ಹುಡುಗಿ; ಇಬ್ಬರ ಮಧ್ಯೆ ‘ಮಾತೊಂದ ಹೇಳುವೆ’

mathondu heluve

ರೇಡಿಯೋ ಜಾಕಿಗಳಾಗಿ ಗುರುತಿಸಿಕೊಂಡ ಹಲವರು ನಟರಾಗಿ, ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಆ ಸಾಲಿಗೆ ಮಯೂರ್ ಕಡಿ ಸಹ ಸೇರಿದ್ದಾರೆ. ಇವರು ‘ಮಾತೊಂದ ಹೇಳುವೆ’ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಟರಾಗಿಯೂ ಕೆಲಸ ಮಾಡಿದ್ದಾರೆ. ಈ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ವಿಶೇಷ ವಿಡಿಯೋ ತುಣುಕು ಬಿಡುಗಡೆ ಮಾಡುವ ಮೂಲಕ ಘೋಷಣೆ ಮಾಡಿದೆ.

ಚಿತ್ರದ ಕಥೆಯಲ್ಲಿ ನಾಯಕ ಉತ್ತರ ಕರ್ನಾಟಕದ ರೇಡಿಯೋ ಜಾಕಿ ಆಗಿರುತ್ತಾನೆ. ನಾಯಕಿ ಮೈಸೂರಿನಿಂದ ಧಾರವಾಡಕ್ಕೆ ಆಗಮಿಸುತ್ತಾಳೆ. ಇಬ್ಬರೂ ಭೇಟಿ ಆದಾಗ ನಡೆಯುವ ರೋಚಕ ಘಟನೆಗಳೇ ಚಿತ್ರದ ಜೀವಾಳ.

‘ಇದೊಂದು ವಿಭಿನ್ನ ಪ್ರೇಮಕಥೆ. ಕುಟುಂಬ ಸಮೇತ ನೋಡಬಹುದಾದ ಚಿತ್ರ. ಜೂನ್.13ರಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಲಿದೆ’ ಎನ್ನುತ್ತಾರೆ ಮಯೂರ್.

‘ಮತೊಂದು ಹೇಳುವೆ’ ಚಿತ್ರದಲ್ಲಿ ಮಯೂರ್ ಕಡಿ, ಅಪೂರ್ವ ಆರಾಧ್ಯ, ಗಿರೀಶ್ ಶಿವಣ್ಣ, ಪಿ.ಡಿ. ಸತೀಶ್ ಚಂದ್ರ, ಪ್ರತೀಕ್ ರಡ್ಡೆರ್, ಚೇತನ್ ಮರಂಬೀಡ್, ವಿದ್ಯಾಸಾಗರ ದೀಕ್ಷಿತ್, ಪ್ರತೀಕ್, ಕಾರ್ತಿಕ್ ಪತ್ತಾರ್, ಸುನಿಲ್ ಪತ್ರಿ, ಜ್ಯೋತಿ ಪುರಾಣಿಕ್ ಮುಂತಾದವರಿದ್ದಾರೆ.

ಮಹೇಶ್ವರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ‘ಮತೊಂದು ಹೇಳುವೆ’ ಚಿತ್ರ ನಿರ್ಮಾಣವಾಗಿದೆ. ಪರ್ವತೇಶ್ ಪೋಲ್ ಛಾಯಾಗ್ರಹಣ, ಉಲ್ಲಾಸ್ ಕುಲಕರ್ಣಿ ಸಂಗೀತ ಸಂಯೋಜಿಸಿದ್ದಾರೆ.

Tags:
error: Content is protected !!