Mysore
17
few clouds

Social Media

ಬುಧವಾರ, 28 ಜನವರಿ 2026
Light
Dark

‘ಕುಲದಲ್ಲಿ ಕೀಳ್ಯಾವುದೋ’ ಬಿಡುಗಡೆಗೂ ಮುನ್ನ ಮಡೆನೂರು ಮನು ಅರೆಸ್ಟ್

Madhenuru Manu

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರು ಮನು ನಾಯಕನಾಗಿ ಅಭಿನಯಿಸಿರುವ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರವು ಇದೇ ಶುಕ್ರವಾರ (ಮೇ 23) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಬಿಡುಗಡೆಗೂ ಒಂದು ದಿನ ಮೊದಲು ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಗುರುವಾರ ಬಂಧಿಸಲಾಗಿದೆ.

ಮನು ವಿರುದ್ಧ ನಗರದ ಅನ್ನಪೂರ್ಣೇಶ್ವರಿ ಪೊಲೀಸ್ ಪೊಲೀಸ್‍ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಸಂಭಾವನೆ ನೀಡುವ ನೆಪದಲ್ಲಿ ಬಂದು ನನ್ನ ಮೇಲೆ ಮನು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಸಹ ಕಲಾವಿದೆ ದೂರು ನೀಡಿದ್ದರು. ಈ ಸಂಬಂಧ ಅತ್ಯಾಚಾರ ಪ್ರಕರಣದ ದಾಖಲಿಸಿಕೊಂಡಿದ್ದ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಈ ಬೆನ್ನಲ್ಲೇ ಮನು ಮಾತನಾಡಿರುವ ವಿಡಿಯೋವೊಂದು ಲಭ್ಯವಾಗಿದೆ.

ಈ ವೀಡಿಯೋದಲ್ಲಿ ಮಾತನಾಡಿರುವ ಮನು, ಉದ್ದೇಶಪೂರ್ವಕವಾಗಿ ತಮ್ಮನ್ನು ಸಿಕ್ಕಿಸಲಾಗುತ್ತಿದೆ ಎಂದು ಹೇಳಿದ್ದಾರೆ. ‘ನನ್ನಅಭಿನಯದ ʻಕುಲದಲ್ಲಿ ಕೀಳ್ಯಾವುದೋʼ ಚಿತ್ರವು ನಾಳೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಹೀಗಿರುವಾಗ ಎಫ್‌ಐಆರ್‌ ಮಾಡುವಂತಹ ಅವಶ್ಯಕತೆ ಇರಲಿಲ್ಲ. ಇತ್ತೀಚೆಗೆ ನಾನು ಆಕೆಯೊಂದಿಗೆ ಮಾತನಾಡಿದ್ದೆ. ಆಗ ನಾನು ಸುಮ್ಮನಿದ್ದರೂ ಬೇರೆಯವರು ಬಿಡುತ್ತಿಲ್ಲ. ಈ ರೀತಿ ಮಾಡು ಅಂತ ಹೇಳಿಕೊಡ್ತಿದ್ದಾರೆ ಅಂತ ಅವಳೇ ಹೇಳಿದ್ದಳು. ಯಾರ‍್ಯಾರು ಹೇಳಿಕೊಡ್ತಿದ್ದಾರೆ ಅಂತ ಕೂಡ ಬಾಯಿಬಿಟ್ಟಿದ್ದಾಳೆ’ ಎಂದಿದ್ದಾರೆ.

ಆಕೆಯ ಹಿಂದೆ ಇಬ್ಬರು ಹೀರೋಗಳು, ಓಬ್ಬ ಲೇಡಿ ಡಾನ್‌ ಸೇರಿ 12 ಜನ ಇದ್ದಾರೆ ಎಂದಿರುವ ಮನು, ‘ನಾನು ಯಾರಿಗೇನು ಮಾಡಿದ್ದೇನೆ ಗೊತ್ತಿಲ್ಲ. ನಾನಾಯ್ತು ಸಿನಿಮಾ ಕೆಲಸ ಆಯ್ತು ಅಂತ ಇರುವವನು ನಾನು. ಸಿನಿಮಾ ಕೆಲಸವಿಲ್ಲದಿದ್ದರೆ ಜಮೀನು ನೋಡಿಕೊಂಡು ಇರುತ್ತೇನೆ. ನನ್ನ ವಿರುದ್ಧ ಪ್ರತಿಯೊಂದು ಆರೋಪಕ್ಕೂ ಸಾಕ್ಷಿ ಕೊಡುತ್ತೇನೆ. ಶೀಘ್ರದಲ್ಲೇ ನಾನು ಕಾನೂನಿನ ಮೂಲಕ ಉತ್ತರ ಕೊಡುವ ಕೆಲಸ ಮಾಡುತ್ತೇನೆ’ ಎಂದು ಮನು ವಿಡಿಯೋನಲ್ಲಿ ಹೇಳಿದ್ದಾರೆ.

Tags:
error: Content is protected !!