Mysore
31
few clouds

Social Media

ಸೋಮವಾರ, 09 ಫೆಬ್ರವರಿ 2026
Light
Dark

ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಹೇಳಿಕೆಗೆ ಕಿಚ್ಚ ಸುದೀಪ್‌ ಕೆಂಡಾಮಂಡಲ

kicha sudeep

ಬೆಂಗಳೂರು:ಇತ್ತೀಚೆಗೆ ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಕನ್ನಡ ಚಿತ್ರರಂಗದ ಹಲವರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದರು. ಅಶ್ಲೀಲವಾಗಿ ಮಾತನಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ನಟ ಕಿಚ್ಚ ಸುದೀಪ್‌ ಪ್ರತಿಕ್ರಿಯೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಕನಕಪುರ ಶ್ರೀನಿವಾಸ್‌, ಡಿ.ಕೆ.ಶಿವಕುಮಾರ್‌, ಧ್ರುವಸರ್ಜಾ, ಎ.ಪಿ.ಅರ್ಜುನ್‌, ಜೋಗಿ ಪ್ರೇಮ್‌, ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ಹಲವರ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದರು.

ಪ್ರೇಮ್‌ ಹಾಗೂ ಅರ್ಜುನ್‌ ಜನ್ಯಾ ವಿರುದ್ಧ ವಂಚನೆ ಆರೋಪವನ್ನೂ ಮಾಡಿದ್ದರು. ಇದಕ್ಕೆ ಚಿತ್ರರಂಗದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ.

ಈ ಕುರಿತು ಮಾತನಾಡಿದ ನಟ ಕಿಚ್ಚ ಸುದೀಪ್‌ ಅವರು, ಸಿಸಿಎಲ್‌ ಗೆಲುವಿನ ಹಿನ್ನೆಲೆಯಲ್ಲಿ ಸಿಹಿ ತಿನ್ನುವ ಸಂದರ್ಭ. ಈ ವೇಳೆ ಮೆಣಸಿನಕಾಯಿ ಯಾಕೆ? ನಾವು ಕಪ್‌ ಗೆಲ್ಲಲು 12 ವರ್ಷ ಕಾದಿದ್ದೇವೆ. ನಮ್ಮ ಉತ್ತರಕ್ಕಾಗಿ ನೀವು ಕೂಡ ಸ್ವಲ್ಪ ಕಾಯಿರಿ. ಇನ್ನೊಂದು ವೇದಿಕೆ ಹತ್ತುತ್ತೇನೆ. ಆಗ ಮಾತನಾಡುತ್ತೇನೆ. ಈಗ ಲಾಡು ತಿನ್ನುವ ಸಮಯ. ಮೆಣಸಿನಕಾಯಿ ಅಲ್ಲ. ಇದು 30 ವರ್ಷದ ಅನುಭವದ ಮಾತು ಎಂದು ಖಡಕ್‌ ಆಗಿ ಹೇಳಿದ್ದಾರೆ.

 

Tags:
error: Content is protected !!