Mysore
23
overcast clouds

Social Media

ಭಾನುವಾರ, 06 ಏಪ್ರಿಲ 2025
Light
Dark

ಅನಂತ್‌ ಅಂಬಾನಿ ಮದುವೆಗೆ ಹೋಗದಿರಲು ಕಾರಣ ಬಿಚ್ಚಿಟ್ಟ ಕಿಚ್ಚ !

ಬೆಂಗಳೂರು : ಸ್ಯಾಂಡಲ್‌ವುಡ್‌ನ ಅಭಿನಯಚಕ್ರವರ್ತಿ ಕಿಚ್ಚ ಸುದೀಪ್‌ ಅವರಿಗೂ ಅನಂತ್‌ ಅಂಬಾನಿ ವಿವಾಹಕ್ಕೆ ಆಮಂತ್ರಣ ಬಂದಿದ್ದು, ಮದುವೆಗೆ ಹೋಗದಿರಲು ಸ್ವತಃ ಸುದೀಪ್‌ ಕಾರಣ ತಿಳಿಸಿದ್ದಾರೆ.

ಏಶಿಯಾದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತದ ಮುಖೇಶ್‌ ಅಂಬಾನಿಯ ಎರಡನೇ ಪುತ್ರ ಅನಂತ್‌ ಅಂಬಾನಿಯ ಅದ್ದೂರಿ ವಿವಾಹ ಮಹೋತ್ಸವದಲ್ಲಿ ದೇಶ-ವಿದೇಶಗಳಿಂದ ಚಿತ್ರನಟರು, ರಾಜಕಾರಣಿಗಳು ಹಾಗೂ ಬಿಸನೆಸ್‌ಮೆನ್‌ಗಳು ಭಾಗಿಯಾಗಿದ್ದರು.

ಕನ್ನಡ ಚಿತ್ರರಂಗದಿಂದ ನಟ ಯಶ್‌ ದಂಪತಿಗಳು ಭಾಗಿಯಾಗಿದ್ದ ವೀಡಿಯೋ ಎಲ್ಲೆಡೆ ವೈರಲ್‌ ಆಗಿತ್ತು. ಇದೀಗ ಕಿಚ್ಚ ಸುದೀಪ್‌, ತಮಗೂ ಅನಂತ್‌ ಅಂಬಾನಿ ಮದುವೆಗೆ ಆಮಂತ್ರಣ ಬಂದಿದ್ದು, ವಿವಾಹ ಮಹೋತ್ಸವದಲ್ಲಿ ಭಾಗಿಯಾಗದಿರಲು ಕಾರಣ ಬಿಚ್ಚಿಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ನನಗೂ ಅನಂತ್‌ ಅಂಬಾನಿ ವಿವಾಹ ಮಹೋತ್ಸವದ ಆಮಂತ್ರಣ ಬಂದಿದೆ. ಆದರೆ ಆರೋಗ್ಯದ ಸಮಸ್ಯೆಯಿಂದ ಭಾಗಿಯಾಯಗಲು ಸಾಧ್ಯವಾಗಲಿಲ್ಲ. ವಿವಾಹ ನಡೆಯುತ್ತಿದ್ದ ಸ್ಥಳದಲ್ಲಿ ಕೆಲವು ಕಟ್ಟುಪಾಡು ಹಾಗೂ ನಿಯಮಗಳಿದ್ದ ಕಾರಣ ನನ್ನಿಂದ ಸಮಸ್ಯೆಯಾಗಬಾರದು ಎಂಬ ಕಾರಣದಿಂದ ವಿವಾಹಕ್ಕೆ ಭೇಟಿ ನೀಡಿರಲಿಲ್ಲ. ನನಗೂ ಜ್ವರ ಹಾಗೂ ನೆಗಡಿ ಇದ್ದ ಕಾರಣ ನನ್ನಿಂದ ತೊಂದುರೆಯಾಗಬಾರದು ಎಂದು ಸುಮ್ಮನಾದೆ ಎಂದು ಹೇಳಿದ್ದಾರೆ.

ಮುಂದುವರೆದು, ಮುಖೇಶ್‌ ಅಂಬಾನಿ ಅವರನ್ನು ಭೇಟಿಯಾಗುವುದು ನಮ್ಮ ಅದೃಷ್ಠ. ಮುಂದೊಂದು ದಿನ ಖಂಡಿತ ಅವರನ್ನು ಭೇಟಿಯಾಗುತ್ತೇನೆ ಎಂದು ತಿಳಿಸಿದ್ದಾರೆ.

Tags: