Mysore
17
clear sky

Social Media

ಗುರುವಾರ, 22 ಜನವರಿ 2026
Light
Dark

ʼಸಿಕಂದರ್‌ʼ ನಲ್ಲಿ ಕನ್ನಡಿಗ ಕಿಶೋರ್‌

ಸಲ್ಮಾನ್‌ ಖಾನ್‌ ನಟನೆಯ ʼಸಿಕಂದರ್‌ʼ ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿ ಜನ ಮೆಚ್ಚುಗೆ ಪಡೆದಿದೆ. ಈ ಚಿತ್ರದಲ್ಲಿ ಸಲ್ಮಾನ್‌ ಖಾನ್‌ಗೆ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ಚಿತ್ರದಲ್ಲಿ ಕನ್ನಡ ಪ್ರತಿಭೆಗಳ ಹವಾ ಜೋರಾಗಿದೆ.

ಸಿನಿಮಾದಲ್ಲಿ ಬಾಲಿವುಡ್‌ ಮಂದಿಗಿಂತ ದಕ್ಷಿಣದ ಕಲಾವಿದರೆ ಜಾಸ್ತಿಯಿದ್ದು, ಕನ್ನಡಿಗ ಕಿಶೋರ್‌ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ.

ಬಹುಭಾಷಾ ನಟ ಎಂದು ಸೈ ಎನಿಸಿಕೊಂಡಿರುವ ಕಿಶೋರ್‌, ಈ ಸಿನಿಮಾದಲ್ಲಿ ನಟ ಸಲ್ಮಾನ್‌ ಖಾನ್‌ ವಿರುದ್ದ ತೊಡೆತಟ್ಟಿದ್ದಾರೆ. ಟ್ರೈಲರ್‌ನಲ್ಲಿ ಇಬ್ಬರ ನಡುವೆ ಚಿಕ್ಕದಾಗಿ ಫೈಟ್‌ ಸೀನ್‌ ತೋರಿಸಲಾಗಿದೆ. ಈಗಾಗಲೇ ಟ್ರೈಲರ್‌ ನೋಡಿ ಮೆಚ್ಚರೋ ಅಭಿಮಾನಿಗಳಿಗೆ ಸಿನಿಮಾದಲ್ಲಿ ಕಿಶೋರ್‌ ಪಾತ್ರ ಹೇಗಿರಲಿದೆ ಎಂಬುದರ ಬಗ್ಗೆ ಕುತೂಹಲವಿದೆ.

ಇನ್ನೂ ಈ ಚಿತ್ರದಲ್ಲಿ ಕಾಜಲ್‌, ಬಾಹುಬಲಿ ಖ್ಯಾತಿಯ ಕಟ್ಟಪ್ಪ ಅಲಿಯಾಸ್‌ ಸತ್ಯರಾಜ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. ದಕ್ಷಿಣದ ಖ್ಯಾತ ನಿರ್ದೇಶಕ ಎ.ಆರ್‌.ಮುರುಗದಾಸ್‌ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಇದೇ 30ರಂದು ಸಿನಿಮಾ ರಿಲೀಸ್‌ ಅಗಲಿದೆ.

Tags:
error: Content is protected !!