Mysore
18
scattered clouds

Social Media

ಸೋಮವಾರ, 26 ಜನವರಿ 2026
Light
Dark

ಕಲಿಯುಗ ಕೃಷ್ಣನ ‘ಮಿಡಲ್ ಕ್ಲಾಸ್ ರಾಮಾಯಣ’; ಟ್ರೇಲರ್ ಬಿಡುಗಡೆ

ramayan

ಕನ್ನಡದಲ್ಲಿ ಇದುವರೆಗೂ ‘ನಮ್ಮೂರ ರಾಮಾಯಣ’, ‘ಇಂದಿನ ರಾಮಾಯಣ’, ‘ಮನೆಮನೆ ರಾಮಾಯಣ’ ಮುಂತಾದ ಕೆಲವು ಚಿತ್ರಗಳು ಬಂದಿವೆ. ಈಗ ಆ ಸಾಲಿಗೆ ‘ಮಿಡಲ್ ಕ್ಲಾಸ್ ರಾಮಾಯಣ’ ಎಂಬ ಹೊಸ ಚಿತ್ರ ಸೇರಿದೆ. ಈ ಚಿತ್ರವು ಸೆ. 12ಕ್ಕೆ ಬಿಡುಗಡೆಯಾಗುತ್ತಿದೆ. ಇಷ್ಟಕ್ಕೂ ಈ ರಾಮಾಯಣ ಏನು ಎಂದು ಹೇಳುವುದಕ್ಕೆ ಚಿತ್ರತಂಡ ಒಂದು ಟ್ರೇಲರ್‍ ಬಿಡುಗಡೆ ಮಾಡಿದೆ.

‘ಮಿಡಲ್‍ ಕ್ಲಾಸ್ ರಾಮಾಯಣ’ ಚಿತ್ರವನ್ನು ಅಂಜನಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಜಯರಾಮ್ ಗಂಗಪ್ಪನಹಳ್ಳಿ ನಿರ್ಮಿಸಿದ್ದು, ಧನುಶ್‍ ಗೌಡ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ವಿನು ಗೌಡ, ’ಪಾರು’ ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ, ಯುಕ್ತಾ ರಣಧೀರ್‍ ಪೆರ್ವಿ, ಜಗ್ಗಪ್ಪ, ವೀಣಾ ಸುಂದರ್‍, ವಿಜಯ್‍ ಚೆಂಡೂರ್‍, ಎಸ್‍.ನಾರಾಯಣ್‍, ಬಲರಾಜ್‍ ವಾಡಿ ಮುಂತಾದವರು ನಟಿಸಿದ್ದಾರೆ.

ಇದನ್ನು ಓದಿ:ಚಾಮುಂಡಿಬೆಟ್ಟದಲ್ಲಿ ಶಿವಣ್ಣ ಅಭಿನಯದ ‘ಡ್ಯಾಡ್‍’ ಚಿತ್ರಕ್ಕೆ ಚಾಲನೆ

ಈ ಹಿಂದೆ ‘ರೆಬಲ್ ಹುಡುಗರು’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಧನುಶ್ ಗೌಡ ಈ ಚಿತ್ರ ಮಾಡಿದ್ದಾರೆ. ‘ಒಬ್ಬ ಮಿಡಲ್‍ ಕ್ಲಾಸ್ ಹುಡುಗನ ಕಥೆಯೇ ‘ಮಿಡಲ್ ಕ್ಲಾಸ್ ರಾಮಾಯಣ’. ಎಲ್ಲರ ಜೀವನದಲ್ಲೂ ಒಂದೊಂದು ಕಥೆ ಇರುತ್ತದೆ. ಅದನ್ನು ಹೇಳುವ ಪ್ರಯತ್ನ ಮಾಡಿದ್ದೇವೆ. ಈ ಚಿತ್ರ ಕೋವಿಡ್‍ಗೂ ಮೊದಲೇ ಶುರು ಮಾಡಲಾಗಿತ್ತು. ಆದರೆ, ಕಾರಣಾಂತರಗಳಿಂದ ಸ್ವಲ್ಪ ತಡವಾಗಿ, ಇದೀಗ ಬಿಡುಗಡೆಯಾಗುತ್ತಿದೆ’ ಎಂದರು.

ಮೋಕ್ಷಿತಾ ಪೈಗೆ ಇದು ಮೊದಲನೆಯ ಚಿತ್ರ. ಅವರಿಗೆ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟ ಫೀಲ್ ಆಗ್ತಾ ಇತ್ತಂತೆ. ‘ನಾವೆಲ್ಲರೂ ತೆರೆಯ ಮೇಲೆ ಕಾಣಿಸುತ್ತೇವೆ. ಆದರೆ, ತೆರೆಯ ಹಿಂದೆ ಒಂದಷ್ಟು ಜನರು ಹಾಕಿದ ಶ್ರಮದಿಂದ ಈ ಸಿನಿಮಾ ಬಿಡುಗಡೆ ಹಂತಕ್ಕೆ ಬಂದಿದೆ. ಈ ಚಿತ್ರದಲ್ಲಿ ಸೌಂದರ್ಯ ಎಂಬ ಪಾತ್ರ ಮಾಡಿದ್ದೀನಿ. ಆದರೆ, ಸಿನಿಮಾದಲ್ಲಿ ಬೇರೆಯದೇ ರೀತಿ ಕಾಣುತ್ತೇನೆ. ನನಗೆ ನಾಯಕಿ ಅಂತ ಅನಿಸಿಕೊಳ್ಳುವುದಕ್ಕಿಂತ ಕಲಾವಿದೆ ಅಂತ ಅನಿಸಿಕೊಳ್ಳೋದು ಬಹಳ ಮುಖ್ಯ. ನನ್ನ ಪಾತ್ರಕ್ಕೆ ಸ್ಕೋಪ್‍ ಇದ್ದಿದ್ದರಿಂದ ಈ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ’ ಎಂದರು.

ನಟ ವಿನು ಗೌಡ ಈ ಸಿನಿಮಾ ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ ಎಂದರು. ಹೊಸ ಪ್ರತಿಭೆಗಳನ್ನು ಬೆಳೆಸಿ ಎಂದು ಮನವಿ ಮಾಡಿದರು.

Tags:
error: Content is protected !!