2025ನೇ ಸಾಲಿನ ಬಹುನಿರೀಕ್ಷಿತ 97ನೇ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಪಟ್ಟಿಯನ್ನು ಆಸ್ಕರ್ ಆಕಾಡೆಮಿ ಘೋಷಣೆ ಮಾಡಿದೆ.
ಬೆಸ್ಟ್ ಲೈವ್ ಆಕ್ಷನ್ ಶಾರ್ಟ್ ವಿಭಾಗದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಗುನೀತ್ ಮೊಂಗಾ ನಿರ್ಮಾಣದ ʼಅನುಜಾʼ ಎಂಬ ಕಿರುಚಿತ್ರ ನಾಮ ನಿರ್ದೇಶನಗೊಂಡಿದೆ.
ʼಅನುಜಾʼ ಕಿರುಚಿತ್ರವು ಬಾಲ ಕಾರ್ಮಿಕ ಪದ್ದತಿ ಕುರಿತ ಸಿನಿಮಾ. ಈ ಸಿನಿಮಾದಲ್ಲಿ ನಟಿಸಿರುವ ಮಗು ನಿಜ ಜೀವನದಲ್ಲೂ ಬಾಲ ಕಾರ್ಮಿಕಳಾಗಿದ್ದು, ಕೊಳಗೇರಿಯಿಂದ ಬಂದವಳಾಗಿದ್ದಾಳೆ. ಬಾಲ ಕಾರ್ಮಿಕರು ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳ ಕುರಿತು ಈ ಸಿನಿಮಾ ಬೆಳಕು ಚೆಲ್ಲುತ್ತದೆ.
ಈ ಸಿನಿಮಾದಲ್ಲಿ ಆ ಹುಡುಗಿ ದೆಹಲಿಯಲ್ಲಿ ವಾಸಿಸುತ್ತಾಳೆ. ಆಕೆ ಬುದ್ದಿವಂತೆ. ಯಾವುದೇ ವಿಷಯವನ್ನು ಬೇಗನೆ ಅರ್ಥ ಮಾಡಿಕೊಳ್ಳುತ್ತಾಳೆ. ಮತ್ತೆ ಹೇಳಿದ ಕೆಲಸ ಅಚ್ಚುಕಟ್ಟಾಗಿ ಮಾಡುತ್ತಾಳೆ.