ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್‌ರನ್ನು ಮದುವೆಗೆ ಯಾಕೆ ಕರೆದಿಲ್ಲ ಎಂಬ ಪ್ರಶ್ನೆಗೆ ಇದೀಗ ನಟ ಡಾಲಿ ಧನಂಜಯ್ ಉತ್ತರ ನೀಡಿದ್ದಾರೆ.
ಇದೇ ಫೆಬ್ರವರಿ.16ರಂದು ಡಾಲಿ ಧನಂಜರ್ ಅವರು ವೈದ್ಯೆ ಧನ್ಯತಾ ಅವರೊಂದಿಗೆ ಹಸೆಮಣೆ ಏರಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದಲೂ ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಗಣ್ಯರನ್ನು ಭೇಟಿ ಮಾಡಿ ಮದುವೆಯ ಆಮಂತ್ರಣ ಪತ್ರ ನೀಡುತ್ತಿದ್ದಾರೆ.
ಆದರೆ ಡಾಲಿ ಧನಂಜಯ್ ಅವರು, ನಟ ದರ್ಶನ್‌ಗೆ ಇದುವರೆಗೂ ಆಮಂತ್ರಣ ಪತ್ರ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಮಾಧ್ಯಮದವರು ಪ್ರಶ್ನೆ ಕೇಳಿದಾಗ ಉತ್ತರಿಸಿದರು.
ನಾನು ಕಳೆದ ಕೆಲ ದಿನಗಳಿಂದ ದರ್ಶನ್‌ರನ್ನು ಸಂಪರ್ಕಿಸಲು ಪ್ರಯತ್ನ ಪಟ್ಟೆ. ಆದರೆ ಅದು ಸಾಧ್ಯವಾಗಲಿಲ್ಲ. ಶೀಘ್ರದಲ್ಲೇ ದರ್ಶನ್‌ರನ್ನು ಭೇಟಿ ಮಾಡಿ ಆಮಂತ್ರಣ ಪತ್ರಿಕೆ ನೀಡುತ್ತೇನೆ. ಮದುವೆಗೆ ಯಾರನ್ನೂ ಬಿಟ್ಟಿಲ್ಲ. ಎಲ್ಲರನ್ನೂ ಕರೆದಿದ್ದೇನೆ. ಸದ್ಯದಲ್ಲೇ ಅವರನ್ನು ಕೂಡ ಕರೆಯುತ್ತೇನೆ. ಅದು ಬಿಟ್ಟು ಬೇರೆ ಏನೂ ಇಲ್ಲ ಎಂದರು.