Mysore
18
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಹಾಲಿವುಡ್‌ ನಿರ್ಮಾಪಕ ಜಾನ್‌ ಲ್ಯಾಂಡೊ ನಿಧನ

ವಾಷಿಂಗ್ಟನ್‌: ಹಾಲಿವುಡ್‌ನಲ್ಲಿ ಅವತಾರ್‌, ಟೈಟಾನಿಕ್‌ ನಂತಹ ಬ್ಲಾಕ್‌ ಬಾಸ್ಟರ್‌ ಸಿನಿಮಾಗಳಿಗೆ ನಿರೂಪಕರಾಗಿದ್ದ ಜಾನ್‌ ಲ್ಯಾಂಡೊ ಅವರು ಶನಿವಾರ (ಜುಲೈ. 6) ನಿಧನರಾಗಿದ್ದಾರೆ.

ಜುಲೈ 23, 1960ರಂದು ನ್ಯೂಯಾರ್ಕ್‌ನಲ್ಲಿ ಜನಿಸಿದ ಇವರು 1980ರಲ್ಲಿ ಪ್ರೋಡಕ್ಷನ್ ಮ್ಯಾನೇಜರ್‌ ಆಗಿ ವೃತ್ತಿ ಪ್ರಾರಂಭಿಸಿದ ಅವರು ನಂತರ ಟೈಟಾನಿಕ್‌, ಅವತಾರ್‌ ನಂತಹ ಜನಪ್ರಿಯ ಚಿತ್ರಗಳ ನಿರ್ಮಿಸಿ ಜನಮನ ಗೆದ್ದಿದ್ದರು.

ಡಿಸ್ನಿ ಎಂಟರ್‌ಡಟೈನ್‌ಮೆಂಟ್‌ ಸಹ ಅಧ್ಯಕ್ಷ ಅಲನ್‌ ಬರ್ಗ್‌ಮನ್‌ ಅವರು ನಿರ್ಮಾಪಕ ಲ್ಯಾಂಡೊ ನಿಧನ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಲ್ಯಾಂಡೊ ಅವರ ನಿರ್ಮಾಣದಲ್ಲಿ 1997ರಲ್ಲಿ ಮೂಡಿಬಂದ ಟೈಟಾನಿಕ್‌ ಚಿತ್ರ ಬರೋಬ್ಬರಿ 11 ಆಸ್ಕರ್‌ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು. 2009ರಲ್ಲಿ ಮೂಡಬಂದ ಅವತಾರ್‌ ಚಿತ್ರ ಪ್ರಪಂಚದಾದ್ಯಂತ ಸಿನಿ ರಸಿಕರನ್ನು ರಂಜಿಸಿ ಮನಗೆದ್ದಿತ್ತು. ಅವತಾರ್‌ ಚತ್ರದ ಸೀಕ್ವೆಲ್‌ ಅವತಾರ್‌ ದಿ ವೇ ಆಫ್‌ ವಾಟರ್‌ ಚಿತ್ರ ಇತ್ತೀಚೆಗೆ ತೆರೆಕಂಡು ಭರ್ಜರಿ ಕಲೆಕ್ಷನ್‌ ಮಾಡಿತ್ತು.

ಇನ್ನು ಲ್ಯಾಂಡೊ ನಿಧನದ ಬಗ್ಗೆ ಅವತಾರ್‌ ಅಕೌಂಟ್‌ನಿಂದ ಅಧಿಕೃತ ಮಾಹಿತಿ ಬಂದಿದ್ದು, ಜಿಮ್‌ ಕ್ಯಾಮರೋನ್‌ ಅವರು ಲ್ಯಾಂಡೊ ನಿಧನಕ್ಕೆ ಕಂಬನಿ ಮಿಡಿದ್ದಾರೆ. ಈ ಸಂಬಂಧ ಫೋಟೋ ಒಂದನ್ನು ಹಂಚಿಕೊಂಡು ಟ್ವೀಟ್‌ ಮಾಡಿದ್ದು, “ನಮ್ಮ ಸ್ನೇಹಿತ ಮತ್ತು ನಾಯಕ ಜಾನ್ ಲ್ಯಾಂಡೊ ಅವರ ನಷ್ಟದಿಂದ ಅವತಾರ್ ಕುಟುಂಬವು ದುಃಖಿತವಾಗಿದೆ. ಅವರ ವಿವೇಕಯುತ ಹಾಸ್ಯ, ವೈಯಕ್ತಿಕ ಕಾಂತೀಯತೆ, ಉತ್ಸಾಹದ ಮಹಾನ್ ಉದಾರತೆ ಮತ್ತು ಉಗ್ರತೆಯು ನಮ್ಮ ಅವತಾರ್ ಸಮೂಹವನ್ನು ಸುಮಾರು ಎರಡು ದಶಕಗಳವರೆಗೆ ಹಿಡಿದಿಟ್ಟುಕೊಂಡಿತ್ತು.

ಅವರು ಉತ್ತಮ ಚಲನಚಿತ್ರಗಳನ್ನು ನಿರ್ಮಿಸಿದರು. ಅವರು ನಮಗೆಲ್ಲರಿಗೂ ಪ್ರತಿದಿನವೂ ನಮ್ಮ ಅತ್ಯುತ್ತಮವಾದದ್ದನ್ನು ತರಲು ಸ್ಫೂರ್ತಿ ನೀಡಿದರು. ನಾನು ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ ಮತ್ತು 31 ವರ್ಷಗಳ ನನ್ನ ಹತ್ತಿರದ ಸಹಯೋಗಿ. ನನ್ನ ಒಂದು ಭಾಗವು ಹರಿದುಹೋಗಿದೆ” ಎಂದು ಜಿಮ್ ಕ್ಯಾಮೆರಾನ್ ಬರೆದುಕೊಂಡಿದ್ದಾರೆ.

Tags:
error: Content is protected !!