ಮೈಸೂರು: ಬಹು ನಿರೀಕ್ಷಿತಾ ದಳಪತಿ ವಿಜಯ್ ನಟನೆಯ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ಧಾರೆ. ಸೆಪ್ಟೆಂಬರ್ 5ಕ್ಕೆ ರಿಲೀಸ್ ಆಗಲಿರುವ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (GOAT) ಸಿನಿಮಾ ಟ್ರೇಲರ್ ಬಿಡುಗಡೆ ದಿನಾಂಕವನ್ನು ತಿಳಿಸಿದ್ಧಾರೆ ಇದರಿಂದ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.
ಆಗಸ್ಟ್ 17 ರಂದು ಸಂಜೆ 5 ಗಂಟೆಗೆ ಸಿನಿಮಾ ಟ್ರೇಲರ್ ರಿಲೀಸ್ ಆಗಲಿದೆ ಎಂದು ಪೋಸ್ಟರ್ ಮೂಲಕ ಹಂಚಿಕೊಂಡಿದ್ದಾರೆ ಚಿತ್ರತಂಡ. ಈ ಚಿತ್ರದಲ್ಲಿ ದಳಪತಿ ವಿಜಯ್ ದ್ವಿಪಾತ್ರದಲ್ಲಿ ಕಾಣಿಕೊಳ್ಳುತ್ತಿದ್ದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಗೋಟ್ ಸಿನಿಮಾದಲ್ಲಿ ವಿಜಯ್ ಗನ್ ಹಿಡಿದು ಅಬ್ಬರಿಸುತ್ತಿರುವ ಪೋಸ್ಟ್ ಒಂದನ್ನು ಚಿತ್ರತಂಡ ರಿಲೀಸ್ ಮಾಡಿದ್ದು ಇದರಲ್ಲಿ ಸಿನಿಮಾದ ಟ್ರೇಲರ್ ರಿಲೀಸ್ ಡೇಟ್ ಕೂಡ ಪ್ರಕಟಿಸಿದ್ದಾರೆ.
ಇನ್ನು ವಿಜಯ್ ಅಭಿನಯದ ಈ ಆಕ್ಷನ್ ಸಿನಿಮಾವನ್ನು ವೆಂಕಟರ್ ಪ್ರಭು ಅವರು ನಿರ್ದೇಶನ ಮಾಡುತ್ತಿದ್ದಾರೆ. ಕಲ್ಪಥಿ ಎಸ್ ಅಘೋರಂ, ಕಲ್ಪತಿ ಎಸ್.ಗಣೇಶ್ ಹಾಗೂ ಕಲ್ಪತಿ ಎಸ್.ಸುರೇಶ್ ಅವರು ಈ ಚಿತ್ರವನ್ನು ‘ಎಜಿಎಸ್ ಎಂಟರ್ಟೇನ್ಮೆಂಟ್’ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಈ ಚಿತ್ರ ಸೆಪ್ಟೆಂಬರ್ 5ರಂದು ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರ ಐಮ್ಯಾಕ್ಸ್ ಫಾರ್ಮ್ಯಾಟ್ನಲ್ಲೂ ಲಭ್ಯ ಇರಲಿದೆ.