Mysore
24
light intensity drizzle

Social Media

ಗುರುವಾರ, 12 ಡಿಸೆಂಬರ್ 2024
Light
Dark

ಬಾಲಿವುಡ್‌ ನಟ ಶರದ್ ಕಪೂರ್‌ ವಿರುದ್ಧ ಎಫ್‌ಐಆರ್‌: ಕಾರಣ ಇಷ್ಟೇ

ಬಾಲಿವುಡ್‌ ನಟ ಶರದ್‌ ಕಪೂರ್‌ ಮಹಿಳೆಯೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ ಎನ್ನುವ ಆರೋಪದ ಮೇಲೆ ಮುಂಬೈ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ನಟನ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ಮನೆಗೆ ಕರೆಸಿ ನನ್ನನ್ನು ಅಸಹ್ಯವಾಗಿ ನಡೆಸಿಕೊಂಡಿದ್ದಾರೆ ಎಂದು 32 ವರ್ಷದ ಸಂತ್ರಸ್ತ ಮಹಿಳೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಳು.

ಶರದ್‌ ಕಪೂರ್‌ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಈಕೆಯೊಂದಿಗೆ ಸಂವಹನ ನಡೆಸುತ್ತಿದ್ದರು ಎನ್ನಲಾಗಿದ್ದು, ತುಂಬಾ ಹತ್ತಿರವಾದ ನಂತರ ವಿಡಿಯೋ ಕರೆ ಮೂಲಕವು ಸಂಪರ್ಕದಲ್ಲಿರುತ್ತಿದ್ದರು ಎಂದು ಹೇಳಲಾಗುತ್ತಿದೆ.

ಮಹಿಳೆಯ ಪರಿಚಯ ಆದ ನಂತರ ತನ್ನ ಆಫೀಸ್‌ಗೆ ಬರಲು ಶರದ್‌ ಹೇಳಿದ್ದಾರೆ. ಆದರೆ ಅವರು ಕಳುಹಿಸಿದ ವಿಳಾಸಕ್ಕೆ ಹೋದ ನಂತರ ಗೊತ್ತಾಯಿತು ಅದು ಮನೆ ಅಂತ. ಮನೆಯಲ್ಲಿ ಶರತ್‌ ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಲ್ಲದೇ ಬಲವಂತವಾಗಿ ಸ್ಪರ್ಶಿಸಿ ಕೋಣೆಗೆ ಕರೆದಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಘಟನೆಯ ನಂತರ ಶರದ್‌ ನನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಶರದ್‌ 1994ರಲ್ಲಿ ಮೇರಾ ಪ್ಯಾರಾ ಭಾರತ್‌ ಸಿನಿಮಾದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದರು. ನಂತರ ಜೋಶ್, ಕಾರ್ಗಿಲ್‌ ಎಲ್‌ಒಸಿ, ಲಕ್ಷ್ಯ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ 2022ರಲ್ಲಿ ನೋ ಮಿನ್ಸ್‌ ನೋ ಮತ್ತು ದಿ ಗುಡ್‌ ಮಹಾರಾಜ ಎಂಬ ಸಿನಿಮಾಗಳಲ್ಲೂ ನಟಿಸಿದ್ದರು.

Tags: