ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಖ್ಯಾತ ನಟ, ವರನಟ ಡಾ. ರಾಜ್ ಕುಮಾರ್ ಅವರ ಜನ್ಮದಿನವಿಂದು ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಕೊಂಡೊಯ್ದ ಮೊದಲಿಗೆ ಡಾ. ರಾಜ್ ಕುಮಾರ್ ಎಂದರೇ ತಪ್ಪಾಗಲಾರದು. ಇಂದು (ಏ.24) ಅಣ್ಣವ್ರ ಜನ್ಮದಿನವಾಗಿದ್ದು, ಅವರ ಇಡೀ ಕುಟುಂಬವೇ ಸಮಾಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಗರದ ಕಂಠೀರವ ಸ್ಟುಡಿಯೋ ಬಳಿಯಿರುವ ಡಾ. ರಾಜ್ ಅವರ ಸಮಾಧಿಯನ್ನು ವಿವಿಧ ಪುಷ್ಪಗಳಿಂದ ಅಲಂಕೃತಗೊಳಿಸಿ, ಹೂವು, ಹಣ್ಣು ಜವನ ಒಪ್ಪಿಸಿ, ಆರತಿ ಬಳಗಿ ಮುತ್ತುರಾಜನಿಗೆ ತಮ್ಮ ಕುಟುಂಬ ಹುಟ್ಟು ಹಬ್ಬದಂದು ನಮನ ಸಲ್ಲಿಸಿತು.
ದಿವಂಗತ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಅವರ ಮಕ್ಕಳು, ರಾಘವೇಂದ್ರ ರಾಜಕುಮಾರ ದಂಪತಿ, ಅಣ್ಣವ್ರ ಹಿರಿ ಮಗಳು ಮತ್ತು ದಂಪತಿ ಸೇರಿಂದತೆ ಎಲ್ಲಾ ಕುಡಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇನ್ನು ರಾಜ್ಯಾದ್ಯಂತ ನಾನಾ ಕಡೆಗಳಲ್ಲಿ ಅಣ್ಣವ್ರ ಜನ್ಮ ದಿನದ ಪ್ರಯುಕ್ತ ಅನ್ನದಾ, ರಕ್ತದಾನ ಸೇರಿದಂತೆ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ಮುತ್ತುರಾಜ್ ಅವರ ಅಭಿಮಾನಿ ದೇವರುಗಳು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.





