Mysore
24
overcast clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ತನ್ನೂರಿನ ಶಾಲೆಗೆ ಹೈಟೆಕ್‌ ಸ್ಪರ್ಶ ನೀಡಲು ಮುಂದಾದ ಡಾಲಿ ಧನಂಜಯ್‌

ಹಾಸನ/ಅರಸೀಕೆರೆ: ವಿವಾಹದ ಹೊಸ್ತಿಲಲ್ಲಿರುವ ನಟ ಡಾಲಿ ಧನಂಜಯ್ ಸಮಾಜಮುಖಿ ಮಾದರಿಯ ತೃಪ್ತಿಕರ ಕಾಯಕ ಸೇವೆ ಮಾಡುತ್ತಿದ್ದು, ತನ್ನೂರಿನ ಶಾಲೆಗೆ ಹೈಟೆಕ್‌ ಸ್ಪರ್ಶ ನೀಡಲು ಮುಂದಾಗಿದ್ದಾರೆ.

ನಟ ಡಾಲಿ ಧನಂಜಯ್ ಹಾಗೂ ಡಾಕ್ಟರ್‌ ಧನ್ಯತಾ ಅವರ ವಿವಾಹ ಫೆಬ್ರವರಿಯಲ್ಲಿ ನಡೆಯಲಿದ್ದು, ಈಗಾಗಲೇ ಆಹ್ವಾನ ಪತ್ರಿಕೆ ನೀಡಿ ಮದುವೆಗೆ ಕರೆಯತೊಡಗಿದ್ದಾರೆ. ಆದರೆ ಈ ಮಧ್ಯೆ ತಮ್ಮ ಹುಟ್ಟೂರು ಅರಸೀಕೆರೆ ತಾಲೂಕಿನ ಕಾಳೇನಹಳ್ಳಿಯ 1 ರಿಂದ 7ನೇ ತರಗತಿವರೆಗಿನ ಸರ್ಕಾರಿ ಶಾಲೆ ಶಿಥಿಲಗೊಂಡಿದ್ದನ್ನು ಗಮನಿಸಿ, ಈ ಶಾಲೆಯ ಅಭಿವೃದ್ಧಿಗಾಗಿ ಆರ್ಥಿಕ ನೆರವು ನೀಡಿದ್ದಾರೆ. ಅಲ್ಲದೇ ತವರೂರಿನ ಮೇಲಿನ ಅಭಿಮಾನದಿಂದ ಶಾಲೆಗೆ ಕಾಯಕ ನೀಡಲು ಮುಂದಾಗಿದ್ದಾರೆ.

ಈ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ 80 ಮಕ್ಕಳು ಕಲಿಯುತ್ತಿದ್ದಾರೆ. ಶಾಲೆಯ ಕೊಠಡಿಗಳಿಗೆ ಟೈಲ್ಸ್, ಗೋಡೆಗಳಿಗೆ ಸುಣ್ಣಬಣ್ಣ, ಚುರಕಿ ಗಾರೆ ರಿಪೇರಿ, ಗೇಟ್ ದುರಸ್ತಿ, ಶಿಕ್ಷಕರ ಕೊಠಡಿ, ಶೌಚಾಲಯ ದುರಸ್ತಿ, ಅಡುಗೆ ಮನೆ ಸಹಿತ ಶಾಲೆಗೆ ಹೈಟೆಕ್ ಸ್ಪರ್ಶ ನೀಡಲು ಧನಂಜಯ್ ದೇಣಿಗೆ ನೀಡಿದ್ದಾರೆ.

ಇನ್ನು ತಮ್ಮ ಮದುವೆಯನ್ನು ಅರ್ಥಪೂರ್ಣಗೊಳಿಸಲು ಇಡೀ ಶಾಲೆಗೆ ಕಾಯಕಲ್ಪ ನೀಡುವ ಮೂಲಕ ಸರ್ಕಾರಿ ಶಾಲೆ ಉಳಿಸಲು ಮುಂದಾಗಿದ್ದಾರೆ. ತನ್ನೂರಿನ ಶಾಲೆಯ ನೆಲಕ್ಕೆ ಟೈಲ್ಸ್, ಬಣ್ಣ ಮಾಸಿದ ಶಾಲೆಯ ಎಲ್ಲ ಗೋಡೆಗಳಿಗೆ ಸಂಪೂರ್ಣ, ಬಿರುಕು ಬಿಟ್ಟಿದ್ದ ಗೋಡೆ, ಅಂತಸ್ತಿಗೆ ಚುರಕಿ, ಗೇಟ್ ದುರಸ್ತಿ, ಶಿಕ್ಷಕರ ಕೊಠಡಿಗೆ ಹೊಸ ರೂಪ, ಶೌಚಾಲಯ ಸುಸ್ಥಿತಿ ಹಾಗೂ ಅಚ್ಚುಕಟ್ಟು ಅಡುಗೆ ಮನೆಗೆ ಹೈಟೆಕ್‌ ಸ್ಪರ್ಶ ನೀಡುತ್ತಿದ್ದಾರೆ.

Tags:
error: Content is protected !!