ಈ ವಾರ ‘ಅಜ್ಞಾತವಾಸಿ’ ಚಿತ್ರದ ಜೊತೆಗೆ ಇನ್ನೂ ಎರಡು ಚಿತ್ರಗಳು ಬಿಡುಗಡೆಯಾಗುತ್ತಿವೆ. ಒಂದು ‘ವಿದ್ಯಾಪತಿ’, ಇನ್ನೊಂದು ‘ವಾಮನ’. ‘ವಿದ್ಯಾಪತಿ’ ಒಂದು ಹಾಸ್ಯ ಪ್ರಧಾನ ಚಿತ್ರವಾಗಿದ್ದು, ಧನಂಜಯ ಇದರ ನಿರ್ಮಾಪಕರು. ನಾಗಭೂಷಣ್ ಮತ್ತು ಮಲೈಕಾ ವಸುಪಾಲ್ ನಾಯಕ – ನಾಯಕಿಯರು. ಧನಂಜಯ್ ಮತ್ತು ಗರುಡ ರಾಮ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ‘ಇಕ್ಕಟ್’ ನಿರ್ದೇಶಿಸಿದ್ದ ಇಶಾಂ ಮತ್ತು ಹಸೀಂಖಾನ್, ‘ವಿದ್ಯಾಪತಿ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಿರ್ದೇಶನದ ಜೊತೆಗೆ ಕಥೆ-ಚಿತ್ರಕಥೆ ಬರೆದು, ಸಂಕಲನದ ಜವಾಬ್ದಾರಿಯನ್ನೂ ತಾವೇ ಹೊತ್ತುಕೊಂಡಿದ್ದಾರೆ. ಈ ಚಿತ್ರಕ್ಕೆ ಲವಿತ್ ಛಾಯಾಗ್ರಹಣ, ಡಾಸ್ ಮೋಡ್ ಸಂಗೀತ ಸಂಯೋಜನೆ ಇದೆ.
‘ವಾಮನ’ ಚಿತ್ರದಲ್ಲಿ ಧನ್ವೀರ್ ಮತ್ತು ರೀಷ್ಮಾ ಜೊತೆಗೆ ತಾರಾ, ಸಂಪತ್, ಆದಿತ್ಯ ಮೆನನ್, ಶಿವರಾಜ್ ಕೆ. ಆರ್. ಪೇಟೆ, ಅವಿನಾಶ್, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ, ಭೂಷಣ್ ಮುಂತಾದವರು ಅಭಿನಯಿಸಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ ಮತ್ತು ಅಜನೀಶ್ ಶ್ಲೋಕನಾಥ್ ಸಂಗೀತ ಸಂಯೋಜನೆ ಇದೆ.





