Mysore
25
few clouds

Social Media

ಶನಿವಾರ, 03 ಅಕ್ಟೋಬರ್ 2026
Light
Dark

6 ಮರಿಗಳಿಗೆ ಜನ್ಮ ನೀಡಿದ ಚಾರ್ಲಿ: ಖುಷಿ ಹಂಚಿಕೊಂಡ ರಕ್ಷಿತ್‌ ಶೆಟ್ಟಿ

ಮೈಸೂರು: ಚಾರ್ಲಿ 777 ಚಿತ್ರದಲ್ಲಿ ನಟ ರಕ್ಷಿತ್‌ ಶೆಟ್ಟಿ ಜತೆ ತೆರೆ ಹಂಚಿಕೊಂಡಿದ್ದ ಚಾರ್ಲಿ ಹೆಸರಿನ ಶ್ವಾನ 6 ಮರಿಗಳಿಗೆ ಜನ್ಮ ನೀಡಿದೆ. ಇದನ್ನು ನೋಡಲು ನಟ ರಕ್ಷಿತ್‌ ಶೆಟ್ಟಿ ಮೈಸೂರಿಗೆ ಬಂದಿದ್ದು, ಅಲ್ಲಿಂದ ಲೈವ್‌ ಮೂಲಕ ತಮ್ಮ ಅಭಿಮಾನಿಗಳ ಜತೆ ಸಂತಸ ಹಂಚಿಕೊಂಡಿದ್ದಾರೆ.

ಚಾರ್ಲಿ ಶ್ವಾನವು ಮರಿಗಳಿಗೆ ಜನ್ಮ ನೀಡುವ ಬಗ್ಗೆ ರಕ್ಷಿತ್‌ ಆಗಾಗ್ಗೆ ಮಾಹಿತಿ ಪಡೆಯುತ್ತಾ ಇದ್ದರು. ಆರೋಗ್ಯವಾಗಿ ತನ್ನ ಮರಿಗಳಿಗೆ ಚಾರ್ಲಿ ಜನ್ಮ ನೀಡಿದ ಸುದ್ದಿ ತಿಳಿದ ಕೂಡಲೇ ಚಾರ್ಲಿ ನೋಡಲು ನಟ ರಕ್ಷಿತ್‌ ಶೆಟ್ಟಿ ಮೈಸೂರಿಗೆ ಆಗಮಿಸಿದ್ದಾರೆ. ಬಂದು ಮರಿಗಳನ್ನು ನೋಡಿ ಹರ್ಷ ವ್ಯಕ್ತಪಡಿಸಿದ್ದಾರೆ.

Tags:
error: Content is protected !!