Mysore
26
broken clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನಟಿಸಿದ ಮೊದಲ ಕನ್ನಡ ಚಿತ್ರದ ಟ್ರೈಲರ್‌ ಬಿಡುಗಡೆ

ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಭಾರತೀಯ ಪೊಲೀಸ್‌ ಸೇವೆ ಅಧಿಕಾರಿ ವೃತ್ತಿಗೆ ಸ್ವಯಂ ನಿವೃತ್ತಿ ಘೋಷಿಸಿದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇದರ ನಡುವೆಯೇ ನಟಿಸಿದ ಮೊದಲ ಕನ್ನಡ ಚಲನಚಿತ್ರ ಅರಬ್ಬಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ.

ಎರಡೂ ಕೈಗಳ್ಳಿಲ್ಲದ ಕನ್ನಡಿಗ ಕೆಎಸ್‌ ವಿಶ್ವಾಸ್ ಅವರು ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆಯ ನೈಜ ಘಟನೆ ಆಧಾರಿತ ಚಲನಚಿತ್ರ ಅರಬ್ಬಿಯಲ್ಲಿ ಅಣ್ಣಾಮಲೈ ವಿಶ್ವಾಸ್‌ ರವರ ತರಬೇತುದಾರಾಗಿ ನಟಿಸಿದ್ದು, ಕೆಲವು ಸ್ಪೂರ್ತಿದಾಯಕ ಖಡಕ್‌ ಡೈಲಾಗ್‌ ಹಾಗೂ ಆಕ್ಷನ್‌ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೈಲರ್‌ ನಲ್ಲಿ ಅಣ್ಣಾಮಲೈ ರವರು ಅನುಭವಿ ನಾಯಕರಂತೆ ನಟಿಸಿರುವುದು ಕಂಡು ಬಂದಿದೆ.

ಕೆಎಸ್‌ ವಿಶ್ವಾಸ್‌ ಅವರು ತಮ್ಮ ಚಿತ್ರದಲ್ಲಿ ಅವರೇ ನಟಿಸಿದ್ದು, ಎರಡು ಕೈಗಳಿಲ್ಲದ ವ್ಯಕ್ತಿ ಸಮಾಜದಲ್ಲಿ ಎದುರಿಸಿರುವ ಸಮಸ್ಯೆಗಳನ್ನು ಮೆಟ್ಟಿ ನಿಂತು ಯಾವ ರೀತಿಯಲ್ಲಿ ಸಾಧನೆ ಮಾಡಿದರು, ಅವರಿಗೆ ಸಹಾಯ ಮಾಡಿದವರು ಯಾರು? ಅವರ ಈ ಸಾಧನೆಗೆ ಸ್ಪೂರ್ತಿ ಏನು ? ಎಂಬ ಹಲವು ವಿಚಾರಗಳನ್ನು ಈ ಚಿತ್ರ ಒಳಗೊಂಡಿದೆ.

Tags:
error: Content is protected !!