ಹೊಸ ವರ್ಷಕ್ಕೆ ಕಾಲಿಟ್ಟ ಬಳಿಕ ಕನ್ನಡ ಚಿತ್ರರಂಗದಲ್ಲಿ ಮೊದಲ ದಿನವೇ ತೀರ್ಥರೂಪ ತಂದೆಯವರಿಗೆ ಎಂಬ ಚಿತ್ರ ಬಿಡುಗಡೆಯಾಗಿದೆ.
ಈ ಹಿಂದೆ 2023ರಲ್ಲಿ ಹೊಂದಿಸಿ ಬರೆಯಿರಿ ಎಂಬ ಚಿತ್ರದ ಮೂಲಕ ಕನ್ನಡ ಸಿನಿ ರಸಿಕರ ಮನಗೆದ್ದಿದ್ದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ನೈಜ ಕನ್ನಡ ಸಿನಿ ರಸಿಕರು ಚಿತ್ರ ಚಿತ್ರಮಂದಿರಗಳತ್ತ ಹೆಜ್ಜೆ ಹಾಕಿದ್ದಾರೆ.
ಈ ಚಿತ್ರ ಕಳೆದ ತಿಂಗಳು ಬಿಡುಗಡೆಯಾದ ಕನ್ನಡ ಚಿತ್ರಗಳ ಹಾಗೆ ರೇಟಿಂಗ್ ಮೇಲೆ ನಿರ್ಬಂಧ ಹೇರದೇ ಬಿಡುಗಡೆಗೊಂಡಿದ್ದು, ಬುಕ್‌ಮೈಶೋನಲ್ಲಿ ರೇಟಿಂಗ್ ವಿಚಾರವಾಗಿ ಹಲವು ತಿಂಗಳುಗಳ ಬಳಿ ಸ್ಪಷ್ಟ ಹಿಟ್ ಫಲಿತಾಂಶ ಕಂಡ ಚಿತ್ರವಾಗಿ ಹೊರಬಂದಿದೆ.
ಇಂದು ಬುಕ್‌ಮೈಶೋನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ರೇಟಿಂಗ್ ಪಡೆದುಕೊಂಡಿರುವ ಚಿತ್ರ 10ಕ್ಕೆ ಬರೋಬ್ಬರಿ 9.9 ರೇಟಿಂಗ್ ಗಿಟ್ಟಿಸಿಕೊಂಡಿದೆ.
ಇಷ್ಟು ಮಂದಿ ರೇಟ್ ಮಾಡಿದರೂ 9.9 ರೇಟಿಂಗ್ ಪಡೆದುಕೊಂಡಿರುವುದು ಪ್ರೇಕ್ಷಕರು ಚಿತ್ರಕ್ಕೆ ಕೊಟ್ಟ ಹಿಟ್ ಸರ್ಟಿಫಿಕೇಟ್ ಆಗಿದೆ.





