ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ ಅದಿತಿ ಪ್ರಭುದೇವ ನಿನ್ನೆ ( ಏಪ್ರಿಲ್ 9 ) ಯುಗಾದಿ ಹಬ್ಬದಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಸ್ವತಃ ಅದಿತಿ ಪ್ರಭುದೇವ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮಗುವಿನ ಕೈಯನ್ನು ತಾನು ಹಾಗೂ ತನ್ನ ಪತಿ ಯಶಸ್ ಪಟ್ಲಾ ಹಿಡಿದುಕೊಂಡಿರುವ ಫೋಟೊವನ್ನು ಹಂಚಿಕೊಂಡಿರುವ ಅದಿತಿ ಪ್ರಭುದೇವ “4.4.2024. ನಮ್ಮನೆ ಮಹಾಲಕ್ಷ್ಮಿ. ಎಲ್ಲರಿಗೂ ಯಗಾದಿ ಹಬ್ಬದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.
ಇನ್ನು ಅದಿತಿ ಪ್ರಭುದೇವ ಪೋಸ್ಟ್‌ಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.