ಬೆಂಗಳೂರು: ಕನ್ನಡ ಚಿತ್ರರಂಗದ ನಟ ಶಿವರಾಜ್ ಕುಮಾರ್ ಅವರು ಶಸ್ತ್ರಚಿಕಿತ್ಸೆ ಮಾಡಿಕೊಂಡು ವಿಶ್ರಾಂತಿಯಲ್ಲಿರುವಾಗಲೇ ಅವರ ಮನೆ ನಾಯಿ ನೀಮೋ ನಿಧನ ಹೊಂದಿದೆ.
ಶಿವರಾಜ್ ಕುಮಾರ್ ಅವರ ದೊಡ್ಡ ಮಗಳು ನಿರುಪಮಾ ಅವರ ಪತಿ ಮದುವೆಗೂ ಮೊದಲು ಆ ನಾಯಿಯನ್ನು ಗಿಫ್ಟ್ ಆಗಿ ಕೊಟ್ಟಿದ್ದರು.
ನಿರುಪಮಾ ಅವರು ಡಾಕ್ಟರ್ ಆಗಿರುವ ಕಾರಣಕ್ಕೆ ಅದನ್ನು ಸಮಯಕ್ಕೆ ಸರಿಯಾಘಿ ನೋಡಿಕೊಳ್ಳಲು ಆಗಲ್ಲ ಎಂಬ ಕಾರಣಕ್ಕೆ ಆ ನಾಯಿ ಶಿವಣ್ಣ ಅವರ ಮನೆಯಲ್ಲೇ ಇತ್ತು.
ಆದ್ರೆ ನೀಮೋ ಇಂದು ಚಿರನಿದ್ರೆಗೆ ಜಾರಿಗೆ. ನೀಮೋ ಸಾವನ್ನಪ್ಪಿರುವ ಬಗ್ಗೆ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪತ್ರವೊಂದನ್ನು ಬರೆದು ಪೋಸ್ಟ್ ಮಾಡಿದ್ದಾರೆ.
ನಟ ಶಿವರಾಜ್ ಕುಮಾರ್ ಅವರು ಕಳೆದ ವಾರ ಅಮೆರಿಕಾಗೆ ಚಿಕಿತ್ಸೆಗೆ ಹೊರಡುವ ವೇಳೆ ನಾಯಿ ನೀಮೋ ಅವರ ಜೊತೆಯಲ್ಲೇ ಇದ್ದು ಬೀಳ್ಕೊಟ್ಟಿದೆ. ಆದರೆ ಈಗ ನೀಮೋ ಮೃತಪಟ್ಟಿದ್ದು, ಮನೆಯಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.
ಈ ಬಗ್ಗೆ ಪತ್ರ ಬರೆದಿರುವ ಗೀತಾ ಶಿವರಾಜ್ ಕುಮಾರ್ ಅವರು, ಪತ್ರದಲ್ಲಿ ಆ ನಾಯಿ ನೀಮೋ ಮನೆಯಲ್ಲಿ ಹೇಗಿರುತ್ತಿತ್ತು. ಗೀತಾ ಅವರನ್ನು ಅದೆಷ್ಟು ಇಷ್ಟಪಡುತ್ತಿತ್ತು ಎಂದು ಉಲ್ಲೇಖಿಸಿದ್ದಾರೆ.