ಬೆಂಗಳೂರು: ಪೈರಸಿ ವಿರುದ್ಧ ನವರಸ ನಾಯಕ ಜಗ್ಗೇಶ್ ಸಮರ ಸಾರಿದ್ದು, ಕೋಣ ಸಿನಿಯಾ ಪೈರಸಿ ವಿರುದ್ಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೋಣ ಚಿತ್ರದ ನಿರ್ಮಾಪಕದ ಜೊತೆಗೆ ನಟ ಜಗ್ಗೇಶ್ ದೂರು ನೀಡಿದ್ದು, ಪೈರಸಿ ಮಾಡುತ್ತಿದ್ದ ಓರ್ವನನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿತ್ರರಂಗವನ್ನು ಪೈರಸಿ ಕಾಡುತ್ತಿದೆ. ಸಿನಿಮಾ ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ಜಾಲತಾಣಗಳು ಹಾಗೂ ಮೊಬೈಲ್‌ನಲ್ಲಿ ಸಿನಿಮಾ ನೋಡುತ್ತಿದ್ದಾರೆ. ಈ ರೀತಿ ಆದರೆ ನಿರ್ಮಾಪಕರನ್ನು ಕೊಲೆ ಮಾಡಿದಂತೆ. ದರೋಡೆ ಮಾಡಿದಂತೆ ಎಂದು ಜಗ್ಗೇಶ್ ಕಿಡಿ ಕಾರಿದ್ದಾರೆ.
ಕೋಣ ಚಿತ್ರವನನು ಡೌನ್ಲೋಡ್ ಮಾಡುತ್ತಿದ್ದ ಯುವಕನನನು ಹಿಡಿಯಲಾಗಿದ್ದು, ಆತ ಇದುವರೆಗೂ 100 ಸಿನಿಮಾಗಳನ್ನು ಈ ರೀತಿ ಪೈರಸಿ ಮಾಡಿದ್ದಾನೆ. ಲೋಕೇಶನ್ ಟ್ರೇಸ್ ಮಾಡಿದ ರವಿಕಿರಣ್ ಹಾಗೂ ಜಗ್ಗೇಶ್ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ. ಸಿನಿಮಾ ಡೌನ್ಲೋಡ್ ಮಾಡುವವರು, ಲಿಂಕ್ ಫಾರ್ವರ್ಡ್ ಮಾಡುವವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.





