Mysore
16
few clouds

Social Media

ಶುಕ್ರವಾರ, 30 ಜನವರಿ 2026
Light
Dark

ಮಿಸ್ಟರ್ ರಾಣಿಯಾಗಿ ಗೆದ್ದ ನಟ ದೀಪಕ್ ಸುಬ್ರಹ್ಮಣ್ಯ

ಹಾಸ್ಯ ಝಲಕ್‌ನಲ್ಲಿ ‘ಮಿಸ್ಟರ್ ರಾಣಿ’ ಲವ್ ಸ್ಟೋರಿ

ಮೈಸೂರು: ಕಲಾವಿದನೊಬ್ಬನಿಗೆ ಒಂದೇ ಸಿನಿಮಾದಲ್ಲೇ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕರೆ ಅದು ನಿಜಕ್ಕೂ ಅದೃಷ್ಟವೇ ಹೌದು. ಇಂಥ ಅವಕಾಶ ಸಿಕ್ಕಿದ್ದು ನಟ ದೀಪಕ್ ಸುಬ್ರಹ್ಮಣ್ಯಗೆ. ಸಿಕ್ಕ ಅವಕಾಶವನ್ನು ಜಾಣ್ಮೆ ಯಿಂದ ಬಳಸಿಕೊಂಡು ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

ಹಿಂದೆ ಡಾ.ರಾಜ್‌ಕುಮಾರ್ ಅವರೂ ತಮ್ಮ ಚಿತ್ರಗಳಲ್ಲಿ ಹೆಣ್ಣಿನ ವೇಷ ಹಾಕಿದ್ದರು. ಪ್ರೇಕ್ಷಕರು ಅದನ್ನು ತುಂಬಾ ಇಷ್ಟಪಟ್ಟಿದ್ದು ಈಗ ಇತಿಹಾಸ. ಇದೇ ಹಾದಿಯನ್ನು ತುಳಿಯಲು ಅನೇಕ ಕಲಾ ವಿದರೂ ಇಷ್ಟ ಪಟ್ಟಿದ್ದರು. ಆದರೆ ಕೆಲವರಿಗೆ ಮಾತ್ರ ಇಂಥ ಅವಕಾಶಗಳು ಕೂಡಿ ಬಂದಿತ್ತು.

ಈ ವಾರ ತೆರೆ ಕಾಣುತ್ತಿರುವ ‘ಮಿಸ್ಟರ್ ರಾಣಿ’ ಚಿತ್ರದ ನಾಯಕ ದೀಪಕ್ ಕೂಡ ಹುಡುಗಿ ವೇಷ ಹಾಕಿ, ನಡೆ-ನುಡಿ ಎರಡರಲ್ಲೂ ಹುಡುಗಿಯರೇ ನಾಚುವಂತೆ ಅಭಿನಯಿಸಿದ್ದಾರೆ. ಇದು ಕ್ರೈಂ, ಥ್ರಿಲ್ಲರ್, ಹಾರರ್, ಲವ್ ಸ್ಟೋರಿಯ ಕಥಾ ಹಂದರ ವಾಗಿದ್ದು, ಚಿತ್ರದ ನಾಯಕನಾಗಿ -ಟ್ಸ್, ರೋಮ್ಯಾನ್ಸ್, ಡ್ಯಾನ್ಸ್‌ಗಳಲ್ಲದೆ ಬೇರೆ ಪಾತ್ರಗಳಲ್ಲೂ ನಟ ದೀಪಕ್ ಮಿಂಚಿದ್ದಾರೆ.

‘ಸೆಲಿ ಮಮ್ಮಿ ಗೂಗಲ್ ಡ್ಯಾಡಿ’ ಖ್ಯಾತಿಯ ನಿರ್ದೇಶಕ ಮಧುಚಂದ್ರ ಈ ಚಿತ್ರ ನಿರ್ದೇಶನ ಮಾಡಿದ್ದು, ಸಿನಿಮಾ ಕಥೆ ಭಾರೀ ಕುತೂಹಲ ಕೆರಳಿಸುತ್ತದೆ. ‘ಹೀರೋ ಆಗಬೇಕು ಅಂಥ ಸಿನಿಮಾ ರಂಗಕ್ಕೆ ಬಂದ ಹುಡುಗ ಆಕಸ್ಮಿಕವಾಗಿ ಹೀರೋಯಿನ್ ಆಗುತ್ತಾನೆ. ಒಬ್ಬ ನಾಯಕನಟಿಗೆ ಚಿತ್ರರಂಗದಲ್ಲಿ ಏನೇನು ತಾಪತ್ರಯಗಳಾಗುತ್ತದೆಅನ್ನೋದನ್ನು ಚಿತ್ರದಲ್ಲಿ ಹಾಸ್ಯರೂಪದಲ್ಲಿ ತೋರಿಸಲಾಗಿದೆ.

ಕಿರುತೆರೆಯಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಜಯಂತ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ದೀಪಕ್ ಸುಬ್ರಹ್ಮಣ್ಯ ಹಿರಿತೆರೆಯಲ್ಲಿ ಹೆಣ್ಣಾಗಿ ಕಾಣಿಸಿಕೊಂಡು ಸಿನಿಪ್ರಿಯರು ಆಶ್ಚರ್ಯ ಪಡು ವಂತೆ ಮಾಡಿದ್ದಾರೆ. ಒಬ್ಬ ಹೊಸ ನಟನನ್ನು ಈ ರೀತಿ ಹೆಣ್ಣಾಗಿ ಚೇಂಜ್ ಓವರ್ ಮಾಡೋಕೆ ಸಾಧ್ಯಾನಾ? ಎಂದು ಎಲ್ಲರೂ ಅಚ್ಚರಿಪಟ್ಟಿದ್ದಾರೆ.

ಟೀಸರ್ ನೋಡಿದಾಗ ಚಿತ್ರ ಟೆಕ್ನಿಕಲ್ ಆಗಿಯೂ ತುಂಬಾ ಡಿ-ರೆಂಟ್ ಆಗಿ ಮೂಡಿ ಬಂದಿರೋದು ಎದ್ದು ಕಾಣುತ್ತಿದೆ. ಟೀಸರ್ ಆರಂಭದಲ್ಲಿ ಬರುವ ಅನಿಮೇಷನ್ ನೋಡಿದಾಗ ಇದು ವಿಭಿನ್ನ ರೀತಿಯ ಥಿಯೇಟರ್ ಅನುಭವ ಕೊಡುತ್ತದೆ. ಮಿಸ್ಟರ್ ರಾಣಿ ಒಂದು ಪರಿಪೂರ್ಣ ‘ಹಾಸ್ಯ ಪ್ಯಾಕೇಜ್’ ಇರುವ ಚಿತ್ರವಾಗಿದೆ.

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಮಂಜ ಈ ಸಿನಿಮಾದಲ್ಲಿ ಇನ್ನೂ ಜಾಸ್ತಿ ಮಜಾ ಕೊಡುತ್ತಾರೆ. ಚಿತ್ರದ ನಾಯಕ ನಟಿ ಪಾರ್ವತಿ ನಾಯರ್ ಯಾವ ರೀತಿ ಟ್ವಿ ಕೊಡ್ತಾರೆ ಎಂಬುದನ್ನು ಸಿನಿಮಾ ನೋಡಿಯೇ ತಿಳಿಯ ಬೇಕು. ‘ಬಾಹುಬಲಿ’ ಸಿನಿಮಾದಲ್ಲಿ ಅಸಿಸ್ಟೆಂಟ್ ಕ್ಯಾಮೆರಾಮನ್ ಆಗಿದ್ದ ರವೀಂದ್ರ ನಾಥ ಈ ಸಿನಿಮಾದ ಛಾಯಾಗ್ರಾಹಕರಾಗಿದ್ದು, ದೃಶ್ಯಗಳನ್ನು ಸುಂದರವಾಗಿ ಸೆರೆ ಹಿಡಿದಿದ್ದಾರೆ. ಟೀಸರ್ ಯೂಟ್ಯೂಬ್‌ನಲ್ಲಿದೆ. ತುಂಬಾ ಕ್ಯೂರಿ ಯಾಸಿಟಿ ಹುಟ್ಟಿಸಿದೆ.

Tags:
error: Content is protected !!