Mysore
29
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಆಗಸ್ಟ್.‌30ರಂದು ಮತ್ತೆ ತೆರೆಗೆ ಬರಲಿರುವ ದರ್ಶನ್‌ ಅಭಿನಯದ ಕರಿಯ ಚಿತ್ರ

ಬೆಂಗಳೂರು: ಇದೇ ಆಗಸ್ಟ್.‌30ರಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಬ್ಲಾಕ್‌ ಬಸ್ಟರ್‌ ಕರಿಯ ಚಿತ್ರ ಮತ್ತೆ ತೆರೆಗೆ ಬರಲಿದೆ.

ಈ ಬಗ್ಗೆ ನಿರ್ದೇಶಕ ಪ್ರೇಮ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಇದೊಂದು ಮೈಲಿಗಲ್ಲು, ಕರಿಯ ಇದು ನಿಮ್ಮಿಂದ. ಅಭಿಮಾನಿಗಳು ಶಾಂತಿ, ತಾಳ್ಮೆ ಹಾಗೂ ಪ್ರೀತಿಯಿಂದ ಕರಿಯನನ್ನು ಹರಿಸಿ ಹಾರೈಸಿ. ಯಾವುದೇ ಅತಿರೇಕಗಳನ್ನು ಮಾಡಬೇಡಿ. ನಿಮ್ಮ ಆನ್‌ಲೈನ್‌ ಬರವಣಿಗೆಗಳು ಬೇರೆಯವರಿಗೆ ನೋವು ತರದಿರಲಿ. ದರ್ಶನ್‌ ಅವರು ಕಾನೂನು ಮುಕ್ತರಾಗಿ ಆದಷ್ಟು ಬೇಗ ಹೊರಗೆ ಬಂದು ನಿಮ್ಮ, ನಮ್ಮ ಜೊತೆ ಬೆರೆಯಲಿ, ಬೆಳೆಯಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಿರ್ದೇಶಕ ಪ್ರೇಮ್‌ ಬರೆದುಕೊಂಡಿದ್ದಾರೆ.

 

Tags:
error: Content is protected !!