Mysore
31
clear sky

Social Media

ಸೋಮವಾರ, 23 ಫೆಬ್ರವರಿ 2026
Light
Dark

‘ನಾಯಕ‌ ನಾನೇ’ ಎಂದ ಭರತ್: ‘ಮೆಜೆಸ್ಟಿಕ್‍ 2’ ಚಿತ್ರದ ಹಾಡು ಬಿಡುಗಡೆ

‘ಮೆಜೆಸ್ಟಿಕ್ 2’ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಚಿತ್ರದ ಇತರೆ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದ್ದು, ಅದಕ್ಕೂ ಮೊದಲು ಚಿತ್ರದ ‘ನಾಯಕ ನಾನೇ’ ಎಂಬ ಮೊದಲ ಹಾಡು ಬಿಡುಗಡೆಯಾಗಿದೆ.

ಈ ಚಿತ್ರಕ್ಕೆ ರಾಮು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದರೆ, ಚಿತ್ರದುರ್ಗದ ಆನಂದಪ್ಪ ನಿರ್ಮಾಣ ಮಾಡಿದ್ದಾರೆ. ಭರತ್ ಕುಮಾರ್, ಸಂಹಿತಾ ವಿನ್ಯಾ ನಾಯಕ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ನಟಿ ಶ್ರುತಿ ನಾಯಕನ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ‘ಭರತ್ ನಾಯಕನ ಜವಾಬ್ದಾರಿಯನ್ನು ತುಂಬಾ ಶ್ರದ್ಧೆಯಿಂದ ನಿಭಾಯಿಸಿದ್ದಾರೆ. ಆತನ ತಾಯಿಯಾಗಿ ನಾನು ಅಭಿನಯಿಸಿದ್ದೇನೆ. ನಿರ್ದೇಶಕ ರಾಮು ಹೃದಯಕ್ಕೆ ಹತ್ತಿರವಾಗುವ ಸಂಭಾಷಣೆಗಳನ್ನು ಬರೆದಿದ್ದಾರೆ. ಈ ಶೀರ್ಷಿಕೆಗೆ ದೊಡ್ಡ ಇತಿಹಾಸವಿದೆ. ಅದು ಈ ಸಿನಿಮಾದಿಂದ ಮತ್ತೊಮ್ಮೆ ಮರುಕಳಿಸಲಿ’ ಎಂದರು.

ನಿರ್ದೇಶಕ ರಾಮು ಮಾತನಾಡಿ, ‘20-30 ವರ್ಷ ತುಂಬಾ ಕಷ್ಟಪಟ್ಟಿದ್ದೇನೆ. ಒಬ್ಬ ನಿರ್ಮಾಪಕನಿಗೆ ಕಥೆ ಒಪ್ಪಿಸೋದು ಸುಲಭವಲ್ಲ. ನನ್ನ ಕಥೆ ಕೇಳಿ ಅವಕಾಶ ಕೊಡುವುದರ ಜೊತೆಗೆ ಕೇಳಿದ್ದೆಲ್ಲವನ್ನೂ ಒದಗಿಸಿಕೊಟ್ಟು ಸಹಕರಿಸಿದ್ದಾರೆ’ ಎಂದರು.

ನಾಯಕ ಭರತ್ ಮಾತನಾಡಿ, ‘ಈಗ ಬೆಂಗಳೂರಲ್ಲಿ ಏನೇನೆಲ್ಲ ನಡೀತಿದೆ ಅದನ್ನು ಚಿತ್ರದಲ್ಲಿ ತೋರಿಸಿದ್ದೇವೆ. ಈ ಹಾಡನ್ನು ಏಳು ಗಾಯಕರು ಹಾಡಿದ್ದಾರೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಇದು ಮೆಜೆಸ್ಟಿಕ್‍ನಲ್ಲೇ ಹುಟ್ಟಿ ಬೆಳೆದ ಹುಡುಗನ‌ ಕಥೆ. ನನ್ನ ಪಾತ್ರಕ್ಕೆ ಎರಡು ಶೇಡ್ಸ್ ಇದೆ. ಮೆಜೆಸ್ಟಿಕ್ ಅಂಡರ್ ಪಾಸ್, ಬಸ್ ಸ್ಟಾಪ್‍ನಲ್ಲೂ ಚಿತ್ರೀಕರಣ ಮಾಡಿದ್ದೇವೆ’ ಎಂದರು.

‘ಮೆಜೆಸ್ಟಿಕ್‍ 2’ ಚಿತ್ರಕ್ಕೆ ವಿನು ಮನಸು ಸಂಗೀತ, ವೀನಸ್‍ ಮೂರ್ತಿ ಸಂಗೀತವಿದೆ.

Tags:
error: Content is protected !!