ಬೆಂಗಳೂರು : ನಟ ಅಜಯ್ ರಾವ್ ಹಾಗೂ ಸ್ವಪ್ನಾ ರಾವ್ ದಂಪತಿ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ ಎಂಬ ವಿಚಾರ ಚಂದನವನದಲ್ಲಿ ಸಂಚಲನ ಸೃಷ್ಟಿಸಿದೆ.
2014ರಲ್ಲಿ ಮದುವೆಯಾಗಿದ್ದ ಈ ಜೋಡಿಗೆ ಮುದ್ದಾದ ಒಂದು ಹೆಣ್ಣು ಮಗು ಕೂಡ ಇದೆ. ಇತ್ತೀಚೆಗಷ್ಟೇ ಅಜಯ್ ರಾವ್ ಅವರ ನಿರ್ಮಾಣದ ಯುದ್ಧಕಾಂಡ ಸಿನಿಮಾ ಕೂಡ ರಿಲೀಸ್ ಆಗಿತ್ತು. ಈ ಮಧ್ಯೆ ಸ್ವಪ್ನಾ ರಾವ್ ಅವರು ಪತಿ ಅಜಯ್ ರಾವ್ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿ, ಇದೀಗ ದಿಢೀರ್ ಡಿವೋರ್ಸ್‌ಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಸುದ್ದಿ ಎಲ್ಲಡೇ ವೈರಲ್ ಆಗ್ತಿದೆ. ಈ ಬಗ್ಗೆ ನಟ ಅಜಯ್ ರಾವ್ ಅವರು ಮೌನ ಮುರಿದಿದ್ದಾರೆ.
ಇದು ನನ್ನ ಪರ್ಸನಲ್ ವಿಚಾರ. ಇದನ್ನಾ ನಾವೇ ಬಗೆಹರಿಸಿಕೊಳ್ತಿನಿ. ನನ್ನ ಪತ್ನಿ ಕೋರ್ಟ್‌ಗೆ ಹೋಗಿದ್ದಾಳಾ? ಇಲ್ಲವಾ ನನಗೆ ಗೊತ್ತಿಲ್ಲ. ಚರ್ಚೆ ಮಾಡಿ ಹೇಳ್ತೀನಿ. ನನ್ನ ಮಗಳ ಭವಿಷ್ಯಕ್ಕೆ ತೊಂದರೆ ಆಗಬಾರರ್ದು. ಇದು ನನ್ನ ಪರ್ಸನಲ್ ವಿಚಾರ. ದಯವಿಟ್ಟು ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.





