Mysore
30
light rain

Social Media

ಗುರುವಾರ, 03 ಅಕ್ಟೋಬರ್ 2024
Light
Dark

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ: ವಿಜೇತರ ಪಟ್ಟಿ ಇಂತಿದೆ

ನವದೆಹಲಿ: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ ಆಗಿದೆ. ಆ ಪೈಕಿ ಈ ಸಲದ ಅತ್ಯುತ್ತಮ ಪ್ರಶಸ್ತಿಯಲ್ಲಿ ಭಾರತದ ಯಾವೆಲ್ಲ ಸಿನಿಮಾಗಳಿಗೆ ಆವಾರ್ಡ್‌ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ.

ಪ್ರಶಸ್ತಿ ಪಡೆದ ಪ್ರಮುಖರ ವಿವರ

ಅತ್ಯುತ್ತಮ ಮನರಂಜನಾ ಚಿತ್ರ– ಕಾಂತಾರ

ಅತ್ಯುತ್ತಮ ನಟ– ರಿಷಬ್ ಶೆಟ್ಟಿ (ಕಾಂತಾರ)

ಅತ್ಯುತ್ತಮ ನಟಿ– ನಿತ್ಯಾ ಮೆನನ್ (ತಮಿಳು: ತಿರುಚಿತ್ರಂಬಲಂ)

ಅತ್ಯುತ್ತಮ ಗಾಯಕ: ಅರಿಜಿತ್ ಸಿಂಗ್ (ಬ್ರಹ್ಮಾಸ್ತ್ರ)

ಅತ್ಯುತ್ತಮ ಛಾಯಾಗ್ರಹಣ– ರವಿ ವರ್ಮನ್ (ಪೊನ್ನಿಯಿನ್ ಸೆಲ್ವನ್ 1)

ಅತ್ಯುತ್ತಮ ಸಂಗೀತ ನಿರ್ದೇಶನ (ಹಿನ್ನೆಲೆ ಸಂಗೀತ)-ಎ ಆರ್ ರೆಹಮಾನ್ (ಪೊನ್ನಿಯಿನ್ ಸೆಲ್ವನ್ 1)

ಅತ್ಯುತ್ತಮ ಸಂಗೀತ ನಿರ್ದೇಶನ: ಪ್ರೀತಂ (ಬ್ರಹ್ಮಾಸ್ತ್ರ)

ಅತ್ಯುತ್ತಮ ನೃತ್ಯ ನಿರ್ದೇಶನ- ತಿರುಚಿತ್ರಂಬಲಂ (ತಮಿಳು)

ಅತ್ಯುತ್ತಮ ಸಾಹಸ ನಿರ್ದೇಶನ- ಕೆಜಿಎಫ್: ಚಾಪ್ಟರ್ 2

ಅತ್ಯುತ್ತಮ ಕನ್ನಡ ಪ್ರಾದೇಶಿಕ ಸಿನಿಮಾ– ಕೆಜಿಎಫ್- ಚಾಪ್ಟರ್ 2

ಅತ್ಯುತ್ತಮ ಮರಾಠಿ ಪ್ರಾದೇಶಿಕ ಸಿನಿಮಾ– ವಾಲ್ವಿ

ಅತ್ಯುತ್ತಮ ತಮಿಳು ಪ್ರಾದೇಶಿಕ ಸಿನಿಮಾ- ಪೊನ್ನಿಯಿನ್ ಸೆಲ್ವನ್ 1

ಅತ್ಯುತ್ತಮ ತೆಲುಗು ಪ್ರಾದೇಶಿಕ ಸಿನಿಮಾ– ಕಾರ್ತಿಕೇಯ 2

ವಿಶೇಷ ಪ್ರಶಸ್ತಿ– ನಟ ಮನೋಜ್ ಬಾಜ್‍ಪೇಯಿ- ಚಿತ್ರ: ಗುಲ್‍ಮೋಹರ್

ಅತ್ಯುತ್ತಮ ಚೊಚ್ಚಲ ನಿರ್ದೇಶಕ– ಬಸ್ತಿ ದಿನೇಶ್ ಶೆಣೈ (ಮಧ್ಯಂತರ-ಕಿರುಚಿತ್ರ-ಕನ್ನಡ)

ಪ್ರಶಸ್ತಿಗಳ ಆಯ್ಕೆಗೆ ಸುಧೀರ್‌ ಮಿಶ್ರಾ, ಪ್ರಿಯನಂದನ್‌ ಟಿ.ಆರ್‌, ಸಿ.ಅಜೋಯ್‌, ಎನ್.ಎಸ್‌ ಮಾಧವನ್‌ ಹಾಗೂ ಆ್ಯನ್
ಅಗಸ್ಟಿಸ್‌ ತೀರ್ಪುಗಾರರ ಮಂಡಳಿಯ ಸದಸ್ಯರಾಗಿದ್ದರು.

Tags: