Mysore
20
overcast clouds
Light
Dark

ಹೊಸ ವಿಶ್ವವ್ಯವಸ್ಥೆ ರಚನೆಗೆ ಜಿ-20 ದೆಹಲಿ ಶೃಂಗಸಭೆಯಲ್ಲಿ ಒಮ್ಮತ ಮೂಡುವುದೇ?

ಭಾರತದಲ್ಲಿ ಇದೇ ಮೊದಲ ಬಾರಿಗೆ ಸೆ.9 ಮತ್ತು 10ರಂದು ನಡೆಯುವ ಜಿ-20 ಗುಂಪಿನ ದೇಶಗಳ ಶೃಂಗಸಭೆ ಹೊಸ ವಿಶ್ವ ವ್ಯವಸ್ಥೆಗೆ ದಾರಿ ಮಾಡಿಕೊಡಬಹುದೆಂಬ ನಿರೀಕ್ಷೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಘೋಷ ವಾಕ್ಯದೊಂದಿಗೆ ಭಾರತ, ವಿಶ್ವದ ಅತಿ ದೊಡ್ಡ ಸಂಘಟನೆಯಾದ ಜಿ-೨೦ರ ಕಾರ್ಯವ್ಯಾಪ್ತಿ ಮತ್ತು ಕಾರ್ಯಕ್ರಮ ಸ್ವರೂಪವನ್ನು ಬದಲಾಯಿಸಿ ಭಿನ್ನ ದಿಕ್ಕಿಗೆ ನಡೆಸುವ ಗುರಿಯನ್ನು ಹೊಂದಿದೆ. ಇದೇ ಮೊದಲ ಬಾರಿಗೆ 40ಕ್ಕೂ ಹೆಚ್ಚು ದೇಶಗಳ ವಿಶ್ವ ನಾಯಕರು ಭಾರತದಲ್ಲಿ ಸಭೆ ಸೇರಲಿದ್ದು, ವಿಶ್ವವನ್ನು ಕಾಡುತ್ತಿರುವ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಯತ್ನಿಸಲಿದ್ದಾರೆ.

ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ವಸಾಹತು ಶಾಹಿ ಆಡಳಿತದಿಂದ ಹೊರಬಂದು ಅಭಿವೃದ್ಧಿಗಾಗಿ ಪರದಾಡುತ್ತಿರುವ ದೇಶಗಳ (ಗ್ಲೋಬಲ್ ಸೌತ್) ನಡುವೆ ಸೇತುವೆಯಾಗಿ ಕೆಲಸ ಮಾಡುವ ಸಾಮರ್ಥ್ಯ ತನಗಿದೆ ಎನ್ನುವುದನ್ನು ಸಾಬೀತು ಮಾಡುವ ಉತ್ತಮ ಅವಕಾಶ ವನ್ನು ಜಿ೨೦ ಶೃಂಗಸಭೆ ಭಾರತಕ್ಕೆ ಒದಗಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಅವಕಾಶವನ್ನು ಬಳಸಿಕೊಂಡು ಬಲಾಢ್ಯ ದೇಶ ಗಳ ನಡುವೆ ಹೊಂದಾಣಿಕೆ ಸಾಽಸಿ ಮಾನವ ಅಭಿವೃದ್ಧಿ ಕೇಂದ್ರಿತ ಹೊಸ ವಿಶ್ವ ವ್ಯವಸ್ಥೆಗೆ ಅಡಿಪಾಯ ಹಾಕುತ್ತಾರೆಯೇ ಇಲ್ಲವೇ ಎಂಬುದು ತೀವ್ರ ಕುತೂಹಲಕಾರಿ.

1998ರ ಪೂರ್ವ ಏಷ್ಯಾ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 1999ರಲ್ಲಿ ಆರಂಭವಾದ ಜಿ-20 (20 ದೇಶಗಳ ಗುಂಪು) ಮುಖ್ಯವಾಗಿ ಹಣಕಾಸು ವ್ಯವಸ್ಥೆ ಮತ್ತು ವ್ಯಾಪಾರ ವಹಿವಾಟಿನ ಬಿಕ್ಕಟ್ಟನ್ನು ಪರಿಹರಿಸಲು ನೆರವಾಗುವುದಾ ಗಿತ್ತು. ಅಮೆರಿಕ, ರಷ್ಯಾ, ಬ್ರಿಟನ್, ಜರ್ಮನಿ, ಫ್ರಾನ್ಸ್ ಜಪಾನ್, ಕೆನಡಾ ಸೇರಿದಂತೆ 19 ದೇಶಗಳು ಮತ್ತು ಐರೋಪ್ಯ ಒಕ್ಕೂಟ ಸದಸ್ಯತ್ವ ಪಡೆದಿವೆ. ವಿಶ್ವ ಹಣಕಾಸು ನೆರವು ಸಂಸ್ಥೆ (ಐಎಂಎಫ್), ವಿಶ್ವ ಬ್ಯಾಂಕ್ (ವರ್ಲ್ಡ್ ಬ್ಯಾಂಕ್) ಸೇರಿದಂತೆ ಹತ್ತು ಹಲವು ಅಂತರರಾಷ್ಟ್ರೀಯ ಸಂಸ್ಥೆ ಗಳು ಈ ಸಂಘಟನೆಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತವೆ. ವಿಶ್ವ ಆರ್ಥಿಕ ಬಿಕ್ಕಟ್ಟು ಎದುರಿಸಿದಾಗಲೆಲ್ಲಾ ಆರ್ಥಿಕ ನೆರವು ಒದಗಿಸುವುದು ಈ ಹಣಕಾಸು ಸಂಸ್ಥೆಗಳು ಮಾಡುತ್ತಿರುವ ಪ್ರಮುಖ ಕೆಲಸ. ೨೦೦೮ರ ಆರ್ಥಿಕ ಬಿಕ್ಕಟ್ಟು, ಕೋವಿಡ್ 19 ಹಾವಳಿಯ ಸಂದರ್ಭದಲ್ಲಿ ಈ ಸಂಸ್ಥೆಗಳ ಕಾರ್ಯವೈಖರಿ ಸಾಕಷ್ಟು ಟೀಕೆಗಳನ್ನು ಎದುರಿಸಿ ದವು. ಈ ಹಣಕಾಸು ಸಂಸ್ಥೆಗಳಲ್ಲಿ ಅಭಿವೃದ್ಧಿ ಹೊಂದಿದ ದೇಶಗಳೇ ಬಹುಪಾಲು ಸದಸ್ಯರಾಗಿರುವುದರಿಂದ ತಮ್ಮ ಸಮಸ್ಯೆಗಳ ಕಡೆಗೇ ಹೆಚ್ಚು ಗಮನಕೊಟ್ಟು ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ದೇಶಗಳ ಬಗ್ಗೆ ನಿರ್ಲಕ್ಷ ತೋರಿಸಿದವು ಎಂಬುದು ಆರೋಪ. ಕೋವಿಡ್ ಸಂದರ್ಭದಲ್ಲಿ ಎಷ್ಟೋ ಬಡದೇಶಗಳು ದಿವಾಳಿಯಾದವು. ಅಂಥ ದೇಶಗಳಿಗೂ ನೆರವಾಗಲು ಹಿಂದೇಟು ಹಾಕಲಾ ಯಿತು. ನೆರವು ನೀಡುವುದಿರಲಿ ಸಾಲವೂ ಸಿಗದಂಥ ಸ್ಥಿತಿ. ಸಾಲ ಕೊಡಲು ಹತ್ತಾರು ಷರತ್ತುಗಳು. ಆ ಷರತ್ತುಗಳನ್ನು ಜಾರಿಗೆ ತರಲು ಈ ಹಣಕಾಸು ಸಂಸ್ಥೆಗಳೇ ಮುಂದೆ ನಿಲ್ಲು ತ್ತಿದ್ದವು. ಐಎಂಎಫ್ ಮತ್ತು ವಿಶ್ವ ಬ್ಯಾಂಕಿನ ಈ ಧೋರಣೆ ಮೂಲಭೂತವಾಗಿ ಶ್ರೀಮಂತ ದೇಶಗಳ ಧೋರಣೆಯೇ ಆಗಿತ್ತು. ಕೊರೊನಾ ಲಸಿಕೆ ವಿಚಾರದಲ್ಲೂ ಶ್ರೀಮಂತ ದೇಶಗಳು ಬಡ ದೇಶಗಳಿಗೆ ಉಚಿತವಾಗಿ ವ್ಯಾಕ್ಸಿನ್ ಪೂರೈಸಲು ಮುಂದಾಗಲಿಲ್ಲ. ವ್ಯಾಕ್ಸಿನ್ ತಯಾರಿಸಿದ ಬಹುರಾಷ್ಟ್ರೀಯ ಸಂಸ್ಥೆಗಳು ವ್ಯಾಕ್ಸಿನ್ ಹಕ್ಕು ಸ್ವಾಮ್ಯದ ಸಮಸ್ಯೆ ಎತ್ತಿದವು. ವ್ಯಾಕ್ಸಿನ್ ಮಾರಾಟ ಮಾಡಲು ಮುಂದಾದವೇ ಹೊರತು ಬಡ ದೇಶಗಳಿಗೆ ನೆರವಾಗಲು ಮುಂದಾಗಲಿಲ್ಲ. ಬಡ ದೇಶಗಳಿಗೆ ಉಚಿತವಾಗಿ ವ್ಯಾಕ್ಸಿನ್ ವಿತರಿಸಲು ವಿಶ್ವಸಂಸ್ಥೆ ಪರದಾಡುವಂತಾ ಯಿತು. ಈ ಸಂದರ್ಭ ದಲ್ಲಿ ಭಾರತ ಅಪಾರ ಪ್ರಮಾಣದಲ್ಲಿ ವ್ಯಾಕ್ಸಿನ್‌ಗಳನ್ನು ವಿಶ್ವಸಂಸ್ಥೆಗೆ ಪೂರೈಸಿ ಬಡ ದೇಶಗಳಿಗೆ ಉಚಿತವಾಗಿ ವಿತರಿಸಲು ನೆರವಾಯಿತು. ಈ ಹಿನ್ನೆಲೆಯಲ್ಲಿ ಈ ತಾರತಮ್ಯ ವ್ಯವಸ್ಥೆ ಬದಲಾಗಬೇಕೆಂಬ ಕೂಗು ಜೋರಾಗಿ ಕೇಳಿಬಂದಿದೆ. ‘ಜಿ-20 ಸಂಘಟನೆ ಶ್ರೀಮಂತ ದೇಶಗಳ ಹಿತಾಸಕ್ತಿಯನ್ನಷ್ಟೇ ಕಾಪಾಡುವ ಕ್ಲಬ್ ಆಗಿದೆ. ಅದು ಬಂಡವಾಳಶಾಹಿ ವ್ಯವಸ್ಥೆಯನ್ನು ಮುಂದುವರಿಸಲು ಕಟ್ಟಿಕೊಂಡಿರುವ ವ್ಯವಸ್ಥೆ ಮಾತ್ರ’ ಎಂಬ ಟೀಕೆ ವ್ಯಾಪಕ ಪ್ರಮಾಣದಲ್ಲಿ ಬಡ ದೇಶಗಳಿಂದ ಬಂದಿದೆ. ಇಂಥ ಸ್ಥಿತಿಯಲ್ಲಿ ಈ ಬಡ ದೇಶಗಳ ಪರ, ವಸಾಹತುಶಾಹಿ ಹಿಡಿತದಿಂದ ಹೊರಬಂದು ಈಗೀಗ ಅಭಿವೃದ್ಧಿ ದಾರಿ ತುಳಿದಿರುವ ದೇಶಗಳ ಪರದನಿ ಎತ್ತಿರುವ ಭಾರತ ಇದೀಗ ದೆಹಲಿಯಲ್ಲಿ ನಡೆಯುತ್ತಿರುವ ಜಿ-20 ದೇಶಗಳ ಶೃಂಗಸಭೆಯಲ್ಲಿ ಈ ತಾರತಮ್ಯವನ್ನೇ ಮುಖ್ಯ ವಿಷಯವಾಗಿಸಿಕೊಂಡು ಹೊಸ ವಿಶ್ವವ್ಯವಸ್ಥೆಯನ್ನು ರೂಪಿಸುವತ್ತ ಹೆಜ್ಜೆ ಇಟ್ಟಿದೆ. ಭಾರತದ ಈ ಯತ್ನಕ್ಕೆ ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ದೇಶಗಳ ಬೆಂಬಲ ವ್ಯಕ್ತವಾಗಿದೆ. ಅಂತೆಯೇ ಈ ತಾರತಮ್ಯ ಹೋಗಲಾಡಿಸುವ ದಿಸೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದೆ. ಮಾನವ ಅಭಿವೃದ್ಧಿಯನ್ನೇ ಕೇಂದ್ರ ಬಿಂದು ವನ್ನಾಗಿರಿಸಿಕೊಂಡು ಈ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಹವಾಮಾನ ವೈಪರೀತ್ಯದಿಂದ ಆಗುತ್ತಿರುವ ಕೆಟ್ಟ ಪರಿಣಾಮಗಳನ್ನು ಎದುರಿಸಲು ಮತ್ತು ವಾತಾವರಣವನ್ನು ಸುಧಾರಿಸಲು ಪ್ರತಿವರ್ಷ ನೂರು ಬಿಲಿಯನ್ ಡಾಲರ್ ಹಣ ಮೀಸಲಿಡಬೇಕು. ಯೂರೋಪ್, ಆಫ್ರಿಕಾ ಮತ್ತು ಇತರ ಬಡ ದೇಶಗಳಲ್ಲಿನ ಆಹಾರಧಾನ್ಯ ಬಿಕ್ಕಟ್ಟು ಎದುರಿಸಲು ಆಹಾರ ಭದ್ರತೆ ವ್ಯವಸ್ಥೆ ರೂಪಿಸಬೇಕು. ಬಡ ದೇಶಗಳಿಗೆ ಸಹಾಯ ಮಾಡು ವಂಥ ಬಹುರಾಷ್ಟ್ರೀಯ ಬ್ಯಾಂಕುಗಳ ಸ್ಥಾಪನೆ ಯಾಗ ಬೇಕು. ಕ್ರಿಪ್ಟೋ ಕರೆನ್ಸಿಯನ್ನು ನಿರ್ವಹಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾನೂನುಗಳನ್ನು ರೂಪಿಸಬೇಕು. ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ನಿರ್ಹಹಣೆಗೆ ಅಗತ್ಯ ಅಂತಾರಾಷ್ಟ್ರೀಯ ನಿಯಂತ್ರಣ ಗಳನ್ನು ರೂಪಿಸಬೇಕು. ಮಾನವ ಅಭಿವೃದ್ಧಿ ಉದ್ದೇಶಕ್ಕೆ ತಂತ್ರಜ್ಞಾನವನ್ನು ಉಚಿತವಾಗಿ ಹಂಚಿಕೊಳ್ಳುವ ವ್ಯವಸ್ಥೆ ರೂಪಿತವಾಗಬೇಕು. ಮುಖ್ಯವಾಗಿ ಹಣಕಾಸು, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಹಂಚಿಕೊಳ್ಳುವುದು ಮುಖ್ಯವಾಗಬೇಕು ಎಂಬಿತ್ಯಾದಿ ಹತ್ತು ಹಲವು ವಿಷಯ ಗಳನ್ನು ಭಾರತ ಈ ಶೃಂಗಸಭೆಯ ಮುಂದೆ ಚರ್ಚೆಗೆ ಮತ್ತು ನಿರ್ಣಯಕ್ಕೆ ಸೂಚಿಸಲಿದೆ.

ದೆಹಲಿ ಶೃಂಗಸಭೆಗೆ ವಿಶ್ವದ ಬಹಳ ಪ್ರಮುಖ ನಾಯಕರಾದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಅವರು ಬರದಿ ರುವುದು ಈಗ ಖಚಿತವಾಗಿದೆ. ಅವರ ಗೈರುಹಾಜರಿಗೆ ನಿರ್ದಿಷ್ಟ ಕಾರಣಗಳು ಗೊತ್ತಾಗಿಲ್ಲ. ಆಂತರಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕ್ಷಿ ಮತ್ತು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನಿಂದ ಬಂಧನ ಭೀತಿಯ ಹಿನ್ನೆಲೆಯಲ್ಲಿ ಪುಟಿನ್ ಗೈರುಹಾಜರಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಕಾರಣ ಏನೇ ಇರಲಿ ಅವರ ಗೈರು ಹಾಜರಿ ಶೃಂಗಸಭೆಯ ಮೇಲೆ ಗಂಭೀರ ಪರಿಣಾಮ ಬೀರುವುದಂತೂ ಖಂಡಿತ. ಏಕೆಂದರೆ ಈಗ ಜಗತ್ತು ಬಿಕ್ಕಟ್ಟು ಎದುರಿಸುತ್ತಿರುವುದಕ್ಕೆ ಮುಖ್ಯ ಕಾರಣಕರ್ತರು ಈ ಇಬ್ಬರು ನಾಯಕರೇ ಆಗಿದ್ದಾರೆ. ಶೃಂಗಸಭೆಯಲ್ಲಿ ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆಯಿಂದ ವಿಶ್ವದ ಮೇಲೆ ಆಗಿರುವ ಪರಿಣಾಮ ಚರ್ಚೆಗೆ ಬರುವುದಂತೂ ಖಂಡಿತ. ಈ ಯುದ್ಧದಿಂದಾಗಿಯೇ ಯೂರೋಪಿನಲ್ಲಿ ಇಂಧನ ಬಿಕ್ಕಟ್ಟು ತಲೆದೋರಿದ್ದು ಹಣದುಬ್ಬರ ಜನರನ್ನು ಸಂಕಷ್ಟಕ್ಕೆ ದೂಡಿದೆ. ಯುದ್ಧ ನಿಲ್ಲುವ ಯಾವುದೇ ಸೂಚನೆ ಕಾಣದಿರುವುದರಿಂದ ವಿಶ್ವ ಆರ್ಥಿಕ ಬಿಕ್ಕಟ್ಟು ಕೂಡ ಮುಂದುವರಿಯಲಿದೆ. ಹೀಗಾಗಿ ಈ ವಿಚಾರದಲ್ಲಿ ಹಲವು ದೇಶಗಳು ರಷ್ಯಾವನ್ನು ಖಂಡಿಸುವ ನಿರ್ಣಯ ಮಂಡಿಸುವುದು ಖಚಿತ. ಆದರೆ ಅದಕ್ಕೆ ರಷ್ಯಾ ಮತ್ತು ಚೀನಾ ಅವಕಾಶ ನೀಡುವ ಸಾಧ್ಯತೆ ಇಲ್ಲ. ಅದೇ ರೀತಿ ಚೀನಾ ಈಗ ಅಮೆರಿಕಕ್ಕಷ್ಟೇ ಅಷ್ಟೇ ಅಲ್ಲ ವಿಶ್ವಕ್ಕೇ ದೊಡ್ಡ ಸಮಸ್ಯೆಯಾಗಿದೆ. ದಕ್ಷಿಣ ಚೀನಾ ಸಮುದ್ರದ ಜಲ ಪ್ರದೇಶ ತನ್ನದೇ ಎಂದು ಚೀನಾ ಇಡೀ ಪ್ರದೇಶದ ಮೇಲೆ ಹಕ್ಕು ಘೋಷಿಸಿದೆ. ಇದು ವಿಶ್ವದ ದೊಡ್ಡ ಜಲಮಾರ್ಗ ಗಳಲ್ಲಿ ಒಂದಾಗಿದ್ದು ತೈಲ, ಅನಿಲ, ಆಹಾರಧಾನ್ಯ ಹೊತ್ತ ಸಾರಿಗೆ ಹಡಗುಗಳು ಸಂಚರಿ ಸುವ ಮಾರ್ಗವಾಗಿದೆ. ಈ ಜಲಪ್ರದೇಶದ ಮೇಲೆ ತಮಗೂ ಹಕ್ಕಿದೆ ಎಂದು ತೈವಾನ್, ಬ್ರೂನಿ, ವಿಯಟ್ನಾಂ, ಮಲೇಷಿಯಾ ಮುಂತಾದ ನೆರೆಯ ದೇಶಗಳು ಹಕ್ಕು ಪ್ರತಿಪಾದಿಸಿವೆ. ಭಾರತದ ಅರುಣಾಚಲ ಪ್ರದೇಶ, ಅಕ್ಸಾಯಿಚಿನ್ ಮತ್ತು ದಕ್ಷಿಣ ಚೀನಾ ಸಮುದ್ರ ಪ್ರದೇಶ, ತೈವಾನ್ ತನಗೆ ಸೇರಿದ್ದು ಎಂದು ಚೀನಾ ಹೊಸ ನಕ್ಷೆ ಪ್ರಕಟಿಸಿ ವಿವಾದ ಎಬ್ಬಿಸಿದೆ. ಈ ಹಿನ್ನೆಲೆಯಲ್ಲಿ ಚೀನಾದ ನಿಲುವು ಕೂಡ ಶೃಂಗಸಭೆಯಲ್ಲಿ ಚರ್ಚೆಗೆ ಬರುವ ಮತ್ತು ಖಂಡನೆಗೆ ಗುರಿಯಾಗುವ ಸಾಧ್ಯತೆ ಇದೆ. ಈ ಎರಡೂ ದೇಶಗಳಿಂದ ಉನ್ನತ ಸಚಿವರು ಮತ್ತು ನಿಯೋಗ ಶೃಂಗಸಭೆ ಯಲ್ಲಿ ಹಾಜರಿದ್ದು ಅಂಥ ನಿರ್ಣಯಗಳನ್ನು ತಡೆ ಯುವ ಸಾಧ್ಯತೆ ಇದೆ. ಈಗಾಗಲೇ ರಷ್ಯಾದ ವಿದೇಶಾಂಗ ಸಚಿವ ಲ್ಯಾವರೋವ್ ಈ ಬಗ್ಗೆ ಸೂಕ್ಷ ವಾಗಿ ಎಚ್ಚರಿಸಿದ್ದಾರೆ.

ರಷ್ಯಾ ಮತ್ತು ಚೀನಾ ಸೃಷ್ಟಿಸಿರುವ ಸಮಸ್ಯೆಗಳೇ ಶೃಂಗಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಕಾರಣವಾಗಿ ಯಾವುದೇ ನಿರ್ಣಯ ಸರ್ವಸಮ್ಮತವಾಗಿ ಅಂಗೀಕಾರ ಪಡೆಯದಿದ್ದರೆ ಅದೊಂದು ವ್ಯರ್ಥ ಕಸರತ್ತಾಗುವುದರಲ್ಲಿ ಅನುಮಾನವಿಲ್ಲ. ಭಾರತ ಈ ವಿಚಾರದಲ್ಲಿ ಇಕ್ಕಟ್ಟಿನ ಸ್ಥಿತಿಯಲ್ಲಿದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣವನ್ನು ಖಂಡಿಸಲು ಭಾರತ ಸಿದ್ಧವಿಲ್ಲ. ಆದರೆ ಗಡಿಗೆ ಸಂಬಂಽಸಿದಂತೆ ಚೀನಾ ನಿಲುವನ್ನು ಖಂಡಿಸಲು ಭಾರತ ಸಿದ್ಧವಿದೆ. ಆದರೆ ಯಾವುದೊಂದು ಮಾಡಿದರೂ ಪರಿಣಾಮ ಕೆಟ್ಟದಾಗಿರುತ್ತದೆ. ರಷ್ಯಾ ಮತ್ತು ಚೀನಾ ವಿರೋಽ ದೇಶಗಳು ಖಂಡನಾ ನಿರ್ಣಯವನ್ನು ಮುಂದಿಟ್ಟು ಭಾರತಕ್ಕೆ ಮುಜುಗರ ತರ ಬಹುದು. ಭಾರತ ಇತರ ವಿಷಯ ಗಳಿಗೆ ಸಂಬಂಽಸಿದಂತೆ ಅಂದರೆ ಬಡ ದೇಶಗಳಿಗೆ ಆರ್ಥಿಕ ನೆರವು, ಡಿಜಲೀಕರಣ, ಮುಕ್ತ ತಂತ್ರಜ್ಞಾನ ವಿನಿಮಯ, ಆಹಾರ ಭದ್ರತೆ, ಕ್ರಿಪ್ಟೋ ಕರೆನ್ಸಿ ಮತ್ತು ಎಐ ತಂತ್ರಜ್ಞಾನಕ್ಕೆ ಸಂಬಂಽಸಿ ದಂತೆ ಅಂತಾರಾಷ್ಟ್ರಿಯ ಕಾನೂನುಗಳ ರಚನೆ ಮುಂತಾದ ವಿಚಾರದಲ್ಲಿ ನಿರ್ಣಯಗಳನ್ನು ಮಂಡಿಸಿ ಸರ್ವ ಸಮ್ಮತ ಅಂಗೀಕಾರ ಪಡೆಯಲು ಮುಂದಾಗ ಬಹುದು. ಅದಕ್ಕೆ ಹಲವು ದೇಶಗಳು ಬೆಂಬಲವನ್ನೂ ನೀಡಬಹುದು. ಆದರೆ ಚೀನಾ ಮತ್ತು ರಷ್ಯಾ ಕುರಿತ ವಿವಾದಗಳು ಇತರ ವಿಷಯಗಳನ್ನು ಮೂಲೆಗೆ ತಳ್ಳಬಹುದಾಂದಂಥ ಸಾಧ್ಯತೆಗಳು ಇವೆ. ಈ ಪರಿಸ್ಥಿತಿಯನ್ನು ಭಾರತ ಹೇಗೆ ನಿಭಾಯಿಸುತ್ತದೆ ಎನ್ನುವುದನ್ನು ಕಾದು ನೋಡಬೇಕು. ಭಾರತದ ಉದ್ದೇಶಿತ ನಿರ್ಣಯಗಳು ಸರ್ವಸಮ್ಮತವಾಗಿ ಅಂಗೀಕಾರವಾಗದೆ ಹೋದರೆ ಇಡೀ ಶೃಂಗಸಭೆ ವ್ಯರ್ಥ ಕಸರತ್ತಾಗಲಿದೆ. ಹೀಗಾದರೆ ಶೃಂಗ ಸಭೆಯ ಸೀಮಿತ ಲಾಭ ಪ್ರಧಾನಿ ಮೋದಿ ಮತ್ತು ಆಡಳಿತಾ ರೂಢ ಬಿಜೆಪಿ ಪಕ್ಷಕ್ಕೆ ಮಾತ್ರ ಆಗಬಹುದು. ವಿಶ್ವಮಟ್ಟದ ಶೃಂಗಸಭೆ ನಡೆಸಿದ ಕೀರ್ತಿ ತನ್ನದು ಮತ್ತು ಅದರಿಂದ ಭಾರತದ ಜಾಗತಿಕ ವರ್ಚಸ್ಸು ಹೆಚ್ಚಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿಕೊಂಡು ಬೀಗಬಹುದು. ಈ ವಿಷಯ ಮುಂಬರುವ ಲೋಕಸಭಾ ಚುನಾವಣೆ ಗೆಲ್ಲಲು ಬಿಜೆಪಿಗೆ ಬಂಡವಾಳ ಆಗಬಹುದು ಎಂಬ ವಿರೋಽಗಳ ಟೀಕೆಯನ್ನು ತಳ್ಳಿಹಾಕಲಾಗದು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ