ಬಾನಾ ಸುಬ್ರಮಣ್ಯ
ಭಾರತದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಪ್ರಮುಖ ವಿಭಾಗಗಳಲ್ಲಿ ಒಂದು ʻಭಾರತೀಯ ಪನೋರಮಾʼ. ಆಯಾ ವರ್ಷ ಭಾರತದಲ್ಲಿ ತಯಾರಾದ ಚಿತ್ರಗಳಲ್ಲಿ ಆಯ್ದ ಅತ್ಯುತಮ ಇಪ್ಪತ್ತೊಂದು ಕಥಾ ಚಿತ್ರಗಳು ಮತ್ತು ಇಪ್ಪತ್ತೊಂದು ಕಥೇತರ ಚಿತ್ರಗಳನ್ನು ಈ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತದೆ. 1978ರಿಂದ ಆರಂಭವಾದ ಪನೋರಮಾ ವಿಭಾಗಕ್ಕೆ ಮುಖ್ಯವಾಹಿನಿಯ ಐದು ಚಿತ್ರಗಳನ್ನು ಇತ್ತೀಚೆಗೆ ಸೇರಿಸಲಾಗಿದೆ. ಅವುಗಳನ್ನು ದೇಶದ ವಿವಿಧ ಚಲನಚಿತ್ರ ಸಂಸ್ಥೆಗಳು ಶಿಫಾರಸು ಮಾಡಿ ಅಂತಿಮವಾಗಿ ಪನೋರಮಾ ಆಯ್ಕೆ ಸಮಿತಿ ನಿರ್ಧರಿಸುತ್ತದೆ.
53ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ಭಾರತೀಯ ಪನೋರಮಾದ ಕಥಾ ಚಿತ್ರಗಳ ವಿಭಾಗಕ್ಕೆ ಕನ್ನಡದ ಎರಡು ಚಿತ್ರಗಳು ಆಯ್ಕೆಯಾಗಿವೆ. ಪೃಥ್ವಿ ಕೊಣನೂರು ನಿರ್ಮಾಣ, ನಿರ್ದೇಶನದ ʻಹದಿನೇಳೆಂಟುʼ ಮತ್ತು ಕೃಷ್ಣೇ ಗೌಡ ನಿರ್ಮಾಣ, ನಿರ್ದೇಶನದ ʻನಾನು ಕುಸುಮʼ. ಪೃಥ್ವಿ ಈ ಹಿಂದೆ ʻರೈಲ್ವೇ ಚಿಲ್ಡ್ರನ್ʼ ಮತ್ತು ʻಪಿಂಕಿ ಎಲ್ಲಿʼ ಚಿತ್ರಗಳನ್ನುನಿರ್ದೇಶಿಸಿದ್ದರು. ಅವೆರಡೂ ಚಿತ್ರಗಳು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಗೌರವ ಪಡೆದಿದ್ದವು. ʻಹದಿನೇಳೆಂಟುʼ ಚಿತ್ರವೂ ಬೂಸಾನ್ ಚಿತ್ರೋತ್ಸವದ ಸ್ಪರ್ಧೆಯಲ್ಲಿತ್ತು. ಪನೋರಮಾ ವಿಭಾಗದ ಉದ್ಘಾಟನಾ ಚಿತ್ರವಾಗಿ ಈ ಚಿತ್ರವನ್ನು ಆಯ್ಕೆ ಮಾಡಲಾಗಿದೆ. ʻನಾನುಕನಸುʼ ಬೆಸಗರಹಳ್ಳಿ ರಾಮಣ್ಣ ಅವರ ಕಥೆಯನ್ನು ಆಧರಿಸಿದ ಚಿತ್ರ. ಆರಂಭದಲ್ಲಿಇದರನಿರ್ದೇಶಕರಹೆಸರುಬೇರೆಇತ್ತುಎನ್ನಲಾಗಿದ್ದು, ಇದೀಗನಿರ್ಮಾಪಕ, ನಿರ್ದೇಶಕರುಒಬ್ಬರೇ.
ಪನೋರಮಾಆಯ್ಕೆ ಬಯಸಿದ್ದ ಚಿತ್ರಗಳಲ್ಲಿ ರಿಷಭ್ ಶೆಟ್ಟಿಅವರಿಗಾಗಿಜೈಶಂಕರ್ ನಿರ್ದೇಶಿಸಿದ ʻಶಿವಮ್ಮʼ, ಚಂಪಾಶೆಟ್ಟಿನಿರ್ದೇಶನದʻಕೋಳಿಎಸ್ರುʼ, ಸೇರಿದಂತೆ ಕೆಲವುಪ್ರಮುಖ ಚಿತ್ರಗಳಿದ್ದವು. ʻಶಿವಮ್ಮʼಚಿತ್ರಬೂಸಾನ್‍ಅಂತಾರಾಷ್ಟ್ರೀಯಚಿತ್ರೋತ್ಸವದಲ್ಲಿಅತ್ಯುನ್ನತಪ್ರಶಸ್ತಿಪಡೆದಿತ್ತು. ಈ ಚಿತ್ರಆಯ್ಕೆಯಾಗದೆಇರುವುದರಕುರಿತಂತೆಮಾತುಗಳಿವೆ. ಕಳೆದವರ್ಷ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದʻಪಿಂಕಿಎಲ್ಲಿʼಚಿತ್ರರಾಷ್ಟ್ರೀಯಪ್ರಶಸ್ತಿಪಡೆಯುವುದರಲ್ಲಿವಿಫಲವಾದಹಾಗೆಇಲ್ಲೂಆದಂತಿದೆ.
ಸಾಮಾನ್ಯವಾಗಿ ಮುಖ್ಯವಾಹಿನಿ ವಿಭಾಗದಲ್ಲಿಆಯ್ಕೆಯಾಗುವ ಚಿತ್ರಗಳು ಕನ್ನಡದಲ್ಲಿತಯಾರಾಗುವುದುಅಪರೂಪ. ಆದರೆ ಈ ಬಾರಿಎರಡು ಚಿತ್ರಗಳನ್ನು ರಾಷ್ಟ್ರಮಟ್ಟದ ಚಲನಚಿತ್ರ ಸಂಸ್ಥೆಗಳು ಶಿಫಾರಸು ಮಾಡಿದ್ದವು. ʻಕೆಜಿಎಫ್‍ಚಾಪ್ಟರ್ 2ʼಮತ್ತುʻ777 ಚಾರ್ಲಿʼ. ಈ ಚಿತ್ರಗಳುಆಯ್ಕೆಯಾಗಿಲ್ಲ. ತೆಲುಗಿನಲ್ಲಿಎರಡು ಚಿತ್ರಗಳಜೊತೆಎರಡುಮುಖ್ಯವಾಹಿನಿ ಚಿತ್ರಗಳೂಆಯ್ಕೆಯಾಗಿವೆ.
ಕಥೇತರ ಚಿತ್ರಗಳ ವಿಭಾಗಕ್ಕೆ ಸಾಮಾನ್ಯವಾಗಿಕನ್ನಡದ ಸ್ಪರ್ಧೆಕಡಿಮೆ. ಈ ಬಾರಿ ಕೆಲವಿದ್ದವು. ಬಸ್ತಿ ದಿನೇಶ್ ಶೆಣೈ ನಿರ್ದೇಶನದʻಮಧ್ಯಂತರʼ ಈ ವಿಭಾಗದಲ್ಲಿಪ್ರದರ್ಶನಕ್ಕೆಆಯ್ಕೆಯಾಗಿದೆ. ಹಿಂದಿಯʻದಶೋಮಸ್ಟ್ ಗೋಆನ್ʼ ಈ ವಿಭಾಗದಉದ್ಘಾಟನಾಚಿತ್ರ.
ಕಳೆದ ವಾರ ಭಾರತದ ಚಿತ್ರಗಳ ಕುರಿತಂತೆಎರಡು ಪ್ರಕಟಣೆಗಳಿದ್ದವು. ಅಂತರರಾಷ್ಟ್ರೀಯ ಚಲನಚಿತ್ರ ವಿಮರ್ಶಕರಒಕ್ಕೂಟ, ಸರ್ವಶ್ರೇಷ್ಠ ಹತ್ತು ಚಿತ್ರಗಳನ್ನು ಘೋಷಿಸಿತ್ತು. ಸತ್ಯಜಿತ್‍ರೇ ನಿರ್ದೇಶನದʻಪಥೇರ್‍ಪಾಂಚಾಲಿʼಇದರಲ್ಲಿಮೊದಲಸ್ಥಾನಪಡೆದಿದೆ. ಮುಂದಿನಸ್ಥಾನಗಳನ್ನುಕ್ರಮವಾಗಿಋತ್ವಿಕ್‍ಘಟಕ್‍ರʻಮೇಘೇಢಾಕಾತಾರಾʼ, ಮೃಣಾಲ್‍ಸೇನ್‍ರʻಭುವನ್‍ಶೋಮ್ʼ, ಅಡೂರುಗೋಪಾಲಕೃಷ್ಣನ್‍ರʻಎಲಿಪತ್ತಾಯಂʼ, ಗಿರೀಶ್ ಕಾಸರವಳ್ಳಿಯವರʻಘಟಶ್ರಾದ್ಧʼ, ಎಂ.ಎಸ್.ಸತ್ಯುಅವರʻಗರಂಹವಾʼ, ರೇಅವರʻಚಾರುಲತಾʼ, ಶಾಂಬೆನಗಲ್‍ರʻಅಂಕುರ್ʼ, ಗುರುದತ್‍ರʻಪ್ಯಾಸಾʼಮತ್ತುರಮೇಶ್‍ಸಿಪ್ಪಿಅವರʻಶೋಲೆʼಪಡೆದಿವೆ. ಅಂತರರಾಷ್ಟ್ರೀಯ ಚಲನಚಿತ್ರ ವಿಮರ್ಶಕರಒಕ್ಕೂಟದಆಯ್ಕೆಇದು. ಕಾಸರವಳ್ಳಿ ಮತ್ತು ಸತ್ಯುಅವರಲ್ಲದೆ, ಶಾಂ ಬೆನಗಲ್ ಮತ್ತುಗುರುದತ್ ಸೇರಿ ನಾಲ್ವರುಕರ್ನಾಟಕ ಮೂಲದವರು ಈ ಸಾಲಲ್ಲಿದ್ದಾರೆಎನ್ನುವುದು ವಿಶೇಷ. 1995ರಲ್ಲಿ, ಸಿನಿಮಾ ಶತಮಾನೋತ್ಸವದ ಸಂದರ್ಭದಲ್ಲಿ, ಪ್ಯಾರಿಸ್ ಮೂಲದ ಸಿನಿಮಾ ಸಮಾಜವೊಂದು ವಿಶ್ವದ ನೂರು ಶ್ರೇಷ್ಠ ಚಿತ್ರಗಳನ್ನು ಆಯ್ಕೆ ಮಾಡಿತ್ತು. ಅದರಲ್ಲಿ ಭಾರತದಒಂದು ಮೂಕಿ ಚಿತ್ರ ಮತ್ತುಒಂದು ವಾಕ್ಚಿತ್ರ ಸೇರಿತ್ತು. ವಾಕ್ಚಿತ್ರ ಕಾಸರವಳ್ಳಿಯವರ ʻಘಟಶ್ರಾದ್ಧʼಆಗಿತ್ತು.
ಅಂತರ್ಜಾಲ ಸಿನಿಮಾಡಾಟಾಬೇಸ್ (Iಒಆb), ಅದರ ಸದಸ್ಯರ ವಿಮರ್ಶೆಯಆಧಾರದ ಮೇಲೆ ಇದೀಗ ಭಾರತದ 250 ಚಿತ್ರಗಳನ್ನು ಆಯ್ಕೆ ಮಾಡಿದ ಪಟ್ಟಿಯನ್ನು ನೀಡಿದ್ದುಅದು ಸಾಮಾಜಿಕ ತಾಣಗಳಲ್ಲಿ ಸಾಕಷ್ಟುಓಡಾಡುತ್ತಿದೆ. ಚಿತ್ರವೊಂದನ್ನು ನೋಡುವ ಪ್ರೇಕ್ಷಕ, ಈ ಡಾಟಾಬೇಸ್‍ನಲ್ಲಿತನ್ನಅಭಿಪ್ರಾಯದೊಂದಿಗೆ, ಹತ್ತರಲ್ಲಿತಾನು ನೀಡುವಅಂಕವನ್ನು ನಮೂದಿಸಬಹುದು. ಒಂದುಚಿತ್ರಕ್ಕೆಅದನ್ನು ನೋಡಿದಜನರುಅಲ್ಲಿ ನೀಡಿದ ಅಂಕಗಳ ಸರಾಸರಿಯ ಮೇಲೆ ಅದರರೇಟಿಂಗ್ ಹೇಳಲಾಗುತ್ತದೆ.
1998ರಲ್ಲಿ ಆರಂಭವಾದಅಮೆಜಾನ್ ಮಾಲಿಕತ್ವದಜಾಲತಾಣವಿದು. ಈ ದಿನಗಳಲ್ಲಿ ಇದರರೇಟಿಂಗ್‍ಆಧಾರದ ಮೇಲೆ, ಚಿತ್ರಗಳ ವ್ಯವಹಾರಗಳು ನಡಯುತ್ತವೆಎನ್ನಲಾಗುತ್ತದೆ. ಹ್ಞಾಂ, ಮೊನ್ನೆ ಪ್ರಕಟವಾದಅತ್ಯುನ್ನತರೇಟಿಂಗ್ ಪಡೆದ ಚಿತ್ರಗಳಲ್ಲಿ ಮೊದಲನೆಯ ಸ್ಥಾನ ʻಕಾಂತಾರʼಕ್ಕೆಸಂದಿದೆ. ಒಂದುಲಕ್ಷಕ್ಕೂಹೆಚ್ಚುಮಂದಿನೀಡಿದ ಅಂಕಗಳಸರಾಸರಿ 9.9 ಈ ಚಿತ್ರಪಡೆದಿದೆ. ಹೆಚ್ಚುರೇಟಿಂಗ್‍ಪಡೆದ 250ರ ಒಳಗೆಸ್ಥಾನಪಡೆದಿರುವ ಚಿತ್ರಗಳಲ್ಲಿಕನ್ನಡದವು ಕೇವಲ ಏಳು. ಅವುಗಳಲ್ಲಿ ಈ ವರ್ಷದ ಮೂರು ಚಿತ್ರಗಳಿವೆ. ʻಕಾಂತಾರʼ, ʻ777 ಚಾರ್ಲಿʼ (8) ಹಾಗೂʻಕೆಜಿಎಫ್‍ಚಾಪ್ಟರ್ 2 (136). 2020ರʻದಿಯಾʼ (240), 2018ರʻಕೆಜಿಎಫ್ʼ (128), 2016ರʻಕಿರಿಕ್‍ಪಾರ್ಟಿʼ (191), ಹಾಗೂ 2013ರʻಲೂಸಿಯಾʼ (118) ಈ ಪಟ್ಟಿಯಲ್ಲಿರುವ ಚಿತ್ರಗಳು.
1955ರಿಂದ 2012ರ ವರೆಗೆತಯಾರಾದಯಾವಕನ್ನಡಚಿತ್ರವೂ ಈ ಪಟ್ಟಿಯಲ್ಲಿಲ್ಲ. ಈ ಪಟ್ಟಿಯಲ್ಲಿಇರುವುದು, ಅದರ ಸದಸ್ಯರು ನೋಡಿ ಅಂಕ ನೀಡಿದ ಚಿತ್ರಗಳೇ ಹೊರತುಎಲ್ಲ ಚಿತ್ರಗಳಲ್ಲ. ವಿಮರ್ಶಕರಒಕ್ಕೂಟ ಭಾರತದ ಶ್ರೇಷ್ಠ ಚಿತ್ರಗಳು ಎಂದು ಹೇಳಿದ ಹತ್ತು ಚಿತ್ರಗಳ ಪೈಕಿ ಕೇವಲ ನಾಲ್ಕು ಚಿತ್ರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಸತ್ಯಜಿತ್‍ರೇಅವರʻಪಥೇರ್‍ಪಾಂಚಾಲಿʼ (39), ʻಚಾರುಲತಾʼ (119), ಗುರುದತ್ತರʻಪ್ಯಾಸಾʼ (67) ಮತ್ತುರಮೇಶ್‍ಸಿಪ್ಪಿಅವರʻಶೋಲೆʼ (92).
ಮೊದಲ ವಾಕ್ಚಿತ್ರʻಅಲಂಅರಾʼಮೊದಲ್ಗೊಂಡುಇಲ್ಲಿಯವರೆಗೆತಯಾರಾದ ಚಿತ್ರಗಳಲ್ಲಿಸಾಕಷ್ಟುಲಭ್ಯವಿಲ್ಲ. ಸೆಲ್ಯುಲಾಯಿಡ್‍ನಿಂದ ಸಿನಿಮಾಡಿಜಿಟಲ್‍ಗ ಹೊರಳಿದ ನಂತರತಯಾರಾದ ಚಿತ್ರಗಳು ಸಾಕಷ್ಟು ಜಾಲತಾಣಗಳಲ್ಲಿ, ಒಟಿಟಿ ತಾಣಗಳಲ್ಲಿ ಲಭ್ಯವಿರುತ್ತವೆ. ಅವು ಹೆಚ್ಚು ಜನಪ್ರಿಯವಾದ ಚಿತ್ರಗಳು I m d b ರೇಟಿಂಗ್‍ಆವರಣದಲ್ಲಿವೆ. ಈ ಪಟ್ಟಿಯನ್ನು ಗಮನಿಸಿದರೆ ಅದು ಸ್ಪಷ್ಟವಾಗುತ್ತದೆ.
ಡಿಜಿಟಲ್‍ರೂಪಾಂತರದ ನಂತರ ಸಿನಿಮಾ ನಿರ್ಮಾಣ ಮಾತ್ರವಲ್ಲ, ಅದು ಪ್ರೇಕ್ಷಕರನ್ನುತಲಪುವ ರೀತಿಯೂ ಬದಲಾಗತೊಡಗಿದೆ. ಪ್ರಚಾರದರೀತಿಯೂ. ವಾಹಿನಿಗಳು, ಸಾಮಾಜಿಕ ತಾಣಗಳು, IMDb ರೇಟಿಂಗ್‍ಇವೆಲ್ಲ ಈಗ ಪ್ರಚಾರ ಮೂಲವಾಗಿವೆ.