Mysore
26
broken clouds

Social Media

ಮಂಗಳವಾರ, 31 ಮಾರ್ಚ್ 2026
Light
Dark

ವಿಬಿ ಜಿ ರಾಮ್ ಜಿ ಗೊಂದಲ ನಿವಾರಣೆ ಕೇಂದ್ರದ ಹೊಣೆ

ವಿಬಿ- ಜಿ ರಾಮ್ ಜಿ (ವಿಕಸಿತ್ ಭಾರತ್- ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕ ಮಿಷನ್ (ಗ್ರಾಮೀಣ್)- ೨೦೨೫) ಕಾಯ್ದೆಯು ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಲ್ಲಿ ಅತ್ಯಂತ ಗಂಭೀರ ಚರ್ಚೆಗೆ ಒಳಗಾಗಿದೆ. ಹಲವು ರಾಜ್ಯಗಳು ಈ ಕಾಯ್ದೆ ಜಾರಿಗೆ ಮೀನಮೇಷ ಎಣಿಸುತ್ತಿವೆ. ಬಿಜೆಪಿ ಆಡಳಿತ ಇರುವ ಬಹುತೇಕ ರಾಜ್ಯಗಳಲ್ಲಿ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲಾಗಿದೆ.

ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ, ಮಹಾತ್ಮ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನ್ರೇಗಾ)ಯನ್ನು ಜಾರಿಗೊಳಿಸಿತ್ತು. ಇದು ಹಳ್ಳಿಗಳಲ್ಲಿ ಬಡವರಿಗೆ ಕೆಲಸವನ್ನು ಸೃಷ್ಟಿಸಿತ್ತು. ಆದರೆ, ಈಗ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಸದರಿ ಯೋಜನೆಯ ಸ್ವರೂಪವನ್ನು ಬದಲಿಸಿ, ಕೆಲಸದ ದಿನಗಳನ್ನು ಹೆಚ್ಚಿಸಿದ್ದೇವೆ ಎಂದು ಹೇಳಿಕೊಂಡು ವಿಬಿ- ಜಿ ರಾಮ್ ಜಿ ಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ. ಇದನ್ನು ವಿರೋಧ ಪಕ್ಷ ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿದೆ. ಹೊಸ ಕಾಯ್ದೆ ಜನ ವಿರೋಧಿಯಾಗಿದೆ ಎಂದು ವಾದಿಸುತ್ತಿದೆ. ಮುಖ್ಯವಾಗಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇದನ್ನು ತಿರಸ್ಕರಿಸುವ ಚಿಂತನೆ ನಡೆಸಿವೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ, ವಿಬಿ- ಜಿ ರಾಮ್ ಜಿಯನ್ನು ರದ್ದುಗೊಳಿಸುವುದು ಮತ್ತು ಮನ್ರೇಗಾ ಮರು ಜಾರಿಗೆಒತ್ತಾಯಿಸಿ ಹೊಸ ವರ್ಷದ ಮೊದಲ ಅಧಿವೇಶನದಲ್ಲೇ ನಿರ್ಣಯ ಕೈಗೊಂಡಿದೆ. ಇದು ಜನತೆಯಲ್ಲಿ ಗೊಂದಲ ಮೂಡಿಸಿದೆ.

ಕೇಂದ್ರ ಸರ್ಕಾರಕ್ಕೆ ಜನರ ಹಿತಕ್ಕಿಂತ ಮನ್ರೇಗಾದಲ್ಲಿ ಇರುವ ಮಹಾತ್ಮ ಗಾಂಧಿ ಹೆಸರನ್ನು ಕಿತ್ತುಹಾಕಬೇಕು ಎಂಬ ದುರುದ್ದೇಶ ಮುಖ್ಯ ವಾಗಿತ್ತು. ಹಾಗಾಗಿಯೇ ಹಲವು ರಾಜ್ಯಗಳ ವಿರೋಧದ ನಡುವೆಯೂ ಮನ್ರೇಗಾವನ್ನು ಬದಲಾಯಿಸಿದೆ ಎಂಬ ದೂರುಗಳು ಸಾರ್ವಜನಿಕವಾಗಿವೆ.

ಬಿಜೆಪಿ ಮಿತ್ರ ಪಕ್ಷವಾದ ತೆಲುಗು ದೇಶಂಪಕ್ಷ (ಟಿಡಿಪಿ) ಆಂಧ್ರಪ್ರದೇಶದಲ್ಲಿ ಆಡಳಿತ ನಡೆಸುತ್ತಿದೆ. ಆದರೆ, ವಿಬಿ ಜಿ ರಾಮ್ ಜಿ ಕಾಯ್ದೆ ಬಗ್ಗೆ ಅಪಸ್ವರ ಎತ್ತಿದೆ. ಕಾಯ್ದೆಯನ್ನು ಕೇಂದ್ರ ಸರ್ಕಾರ ಮರು ಪರಿಶೀಲನೆಗೆ ಒಳಪಡಿಸಬೇಕಿತ್ತು ಎಂದು ಮನವಿ ಮಾಡಿದೆ. ಇದರರ್ಥ ಹೊಸ ಕಾಯ್ದೆಯನ್ನು ಎಲ್ಲ ರೀತಿಯಿಂದಲೂ ಒಪ್ಪಿಕೊಳ್ಳುವುದಕ್ಕೆ ಸೂಕ್ತವಾಗಿಲ್ಲ ಎಂಬು ದನ್ನು ಟಿಡಿಪಿಯ ಧ್ವನಿ ಹೇಳಿದೆ. ಆದರೆ, ಕೇಂದ್ರ ಸರ್ಕಾರ ಇದಕ್ಕೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ. ಅಲ್ಲದೆ, ಈಗಾಗಲೇ ಕಾಯ್ದೆ ಯನ್ನು ಸಂಸತ್ ಅಂಗೀಕರಿಸಿ ರುವುದರಿಂದ ಟಿಡಿಪಿಯ ಮುನಿಸು ಪ್ರಯೋಜನವಾಗಿಲ್ಲ.

ವಿಬಿ ಜಿ ರಾಮ್ ಜಿ ಕಾಯ್ದೆಗೆ ತಮಿಳುನಾಡು, ಕೇರಳ ರಾಜ್ಯಗಳಲ್ಲೂ ವಿರೋಧ ವ್ಯಕ್ತವಾ ಗಿದೆ. ಈ ಉಭಯ ರಾಜ್ಯಗಳಿಗೂ ಇದು ಚುನಾವಣಾ ವರ್ಷ. ಈ ಕಾಯ್ದೆಯನ್ನು ಕೇಂದ್ರ ಸರ್ಕಾರದ ವಿರುದ್ಧ ಚುನಾವಣಾ ಅಸ್ತ್ರವಾಗಿ ಬಳಸಲು ಅವಕಾಶ ಸಿಕ್ಕಿದಂತಾ ಗಿದೆ. ಇಡೀ ದೇಶದಲ್ಲಿ ವಿಬಿ ಜಿ ರಾಮ್ ಜಿ ಕುರಿತು ಬಹುಸಂಖ್ಯಾತ ಬಡವರಿಗೆ ಸ್ಪಷ್ಟತೆಯೇ ಇಲ್ಲ. ಇದರ ಜೊತೆಗೆ ಕೆಲ ರಾಜ್ಯ ಸರ್ಕಾರಗಳು, ವಿಬಿ ಜಿ ರಾಮ್ ಜಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಜನಸಾಮಾನ್ಯರಲ್ಲಿ ಕೇಂದ್ರದ ವಿರುದ್ಧ ಅನುಮಾನ ಮೂಡಿಸುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿವೇಶನದಲ್ಲಿ ಈ ಕಾಯ್ದೆಯನ್ನು ಪ್ರಸ್ತಾಪಿಸಿ, ಕರ್ನಾಟಕದ ಗ್ರಾಮೀಣ ಜನರ ಬದುಕುವ ಹಕ್ಕನ್ನು ರಕ್ಷಿಸುವ ದೃಷ್ಟಿಯಿಂದ, ಈ ಸದನವು ಕೇಂದ್ರ ಸರ್ಕಾರವನ್ನು ತಕ್ಷಣವೇ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸುತ್ತದೆ ಎಂದಿದ್ದಾರೆ. ಅಲ್ಲದೆ, ಈಗಿನ ಕಾಯ್ದೆ ಪ್ರಕಾರ ಶೇ.೬೦ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ನೀಡಿದರೆ, ಉಳಿದ ಶೇ.೪೦ರಷ್ಟು ರಾಜ್ಯ ಸರ್ಕಾರ ಹಂಚಿಕೆ ಮಾಡಬೇಕು. ಇದರಿಂದ ರಾಜ್ಯದ ಖಜಾನೆಗೆ ತೀವ್ರ ಹೊರೆ ಯಾಗುತ್ತದೆ ಎಂದು ಸಿದ್ದರಾಮಯ್ಯ ಕೇಂದ್ರಕ್ಕೆ ಮನದಟ್ಟು ಮಾಡುವ ಯತ್ನ ಮಾಡಿದ್ದಾರೆ.

ಅಲ್ಲದೆ, ವಿಬಿ ಜಿ ರಾಮ್ ಜಿಯು ಗ್ರಾಮ ಪಂಚಾ ಯಿತಿಗಳಿಗಿರುವ ಹಕ್ಕನ್ನು ಕಸಿದು ಕೊಂಡಿದೆ. ಹಾಗಾಗಿ ಹಿಂದಿನಂತೆ ಮನ್ರೇಗಾವನ್ನು ಪುನರ್ ಅನುಷ್ಠಾನಗೊಳಿಸಬೇಕು ಎಂಬ ಒತ್ತಾಯ ಕಾಂಗ್ರೆಸ್ ಪಕ್ಷದ್ದು. ದೇಶದಲ್ಲಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ಮನ್ರೇಗಾ ಬದಲು ವಿಬಿ ಜಿ ರಾಮ್ ಜಿ ಜಾರಿಗೊಳಿಸಿರುವುದರ ಬಗ್ಗೆ ಸಾರ್ವ ಜನಿಕರಿಗೆ ವಿಶೇಷವಾಗಿ ಈ ಯೋಜನೆಯ ಫಲಾನು ಭವಿಗಳಾಗಿರುವವರಿಗೆ ಸಮರ್ಪಕ ತಿಳಿವಳಿಕೆ ಮೂಡಿಸಬೇಕಿದೆ.

ಮನ್ರೇಗಾ ಸ್ವರೂಪವನ್ನು ಬದಲಿಸುವ ಮೊದಲು ಹೊಸ ಕಾಯ್ದೆಯ ಸಾಧಕ ಬಾಧಕಗಳ ಬಗ್ಗೆ ಸಾರ್ವಜ ನಿಕರೊಂದಿಗೆ ಸಂವಾದಿಸ ಬೇಕಾಗಿತ್ತು. ವಿಬಿ ಜಿ ರಾಮ್ ಜಿ ಜನಪರ ವಾಗಿಯೇ ಇದ್ದರೂ ಅದರ ಬಗ್ಗೆ ಫಲಾನು ಭವಿಗಳಿಗೆ ನಂಬಿಕೆ ಉಂಟು ಮಾಡಿ, ಬಳಿಕ ಕಾಯ್ದೆ ಯಾಗಿ ಜಾರಿಗೊಳಿಸಿದ್ದರೆ, ವಿಪಕ್ಷ ಗಳಿಗೆ ಕಾಯ್ದೆ ವಿರೋಧಿಸಲು ಅವಕಾಶ ಸಿಗುತ್ತಿರಲಿಲ್ಲ.

” ವಿಬಿ ಜಿ ರಾಮ್‌ಜಿ ಕಾಯ್ದೆಗೆ ತಮಿಳುನಾಡು, ಕೇರಳ ರಾಜ್ಯಗಳಲ್ಲೂ ವಿರೋಧ ವ್ಯಕ್ತವಾಗಿದೆ. ಈ ಉಭಯ ರಾಜ್ಯಗಳಿಗೂ ಇದು ಚುನಾವಣಾ ವರ್ಷ. ಈ ಕಾಯ್ದೆಯನ್ನು ಕೇಂದ್ರ ಸರ್ಕಾರದ ವಿರುದ್ಧ ಚುನಾವಣಾ ಅಸ್ತ್ರವಾಗಿ ಬಳಸಲು ಅವಕಾಶ ಸಿಕ್ಕಿದಂತಾಗಿದೆ. ಇಡೀ ದೇಶದಲ್ಲಿ ವಿಬಿ ಜಿ ರಾಮ್ ಜಿ ಕುರಿತು ಬಹುಸಂಖ್ಯಾತ ಬಡವರಿಗೆ ಸ್ಪಷ್ಟತೆಯೇ ಇಲ್ಲ. ಇದರ ಜೊತೆಗೆ ಕೆಲ ರಾಜ್ಯ ಸರ್ಕಾರಗಳು, ವಿಬಿ ಜಿ ರಾಮ್ ಜಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಜನಸಾಮಾನ್ಯರಲ್ಲಿ ಕೇಂದ್ರದ ವಿರುದ್ಧ ಅನುಮಾನ ಮೂಡಿಸುತ್ತಿದೆ.”

 

 

 

Tags:
error: Content is protected !!