Mysore
20
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಪಡುವಾರಹಳ್ಳಿಯ ತರಕಾರಿ ರಾಮು

ಪಡುವಾರಹಳ್ಳಿಯಲ್ಲಿ ತಮ್ಮ 18ನೇ ವಯಸ್ಸಿನಿಂದ ತರಕಾರಿ ವ್ಯಾಪಾರ ಮಾಡುತ್ತಿರುವ ಇವರ ಹೆಸರು ಬಿ. ರಾಮು ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಅಂಗಡಿಯ ಕದ ತೆರೆದರೆ, ಮುಚ್ಚುವುದು ರಾತ್ರಿ ಹತ್ತರ ಹೊತ್ತಿಗೆ ಹಬ್ಬ-ಹರಕೆಯ ದಿನಗಳಲ್ಲಿ ಒಮ್ಮೊಮ್ಮೆ ಬೆಳಿಗ್ಗೆ ಆರೂವರೆಗೆ ಅಂಗಡಿ ತೆರೆಯುತ್ತಾರೆ. 18ನೆಯ ವಯಸ್ಸಿನಲ್ಲಿ ತರಕಾರಿ ಅಂಗಡಿಯನ್ನು ತೆರೆದ ರಾಮು
ಅವರಿಗೆ ಈಗ ವಯಸ್ಸು 67. ಆಕಾಶವಾಣಿಯನ್ನು ಕೇಳುತ್ತಾ ತಮ್ಮ ಕಾಯಕದೊಂದಿಗೆ ದಿನಕಳೆಯುತ್ತಾರೆ. ಹಳೆಯ ಹಾಡುಗಳ ಪ್ರಸಾರ ಆದಾಗಲಂತೂ, ಬಂದ ಗ್ರಾಹಕರೊಡನೆ ಹಾಡು ಗುನುಗುವಿಕೆಯಲ್ಲಿ ಇವರ ವ್ಯವಹಾರ ಸಾಗುವುದು.

ಮೊದಲೆಲ್ಲಾ ಪಡುವಾರಹಳ್ಳಿಯಲ್ಲಿ ಇದ್ದದ್ದು ಇವರದ್ದೊಂದೇ ಅಂಗಡಿ, ಹಾಗಾಗಿ ಮಾಡಿದ ವ್ಯಾಪಾರ ಕೈಗೆಟುಕಿ, ಲಾಭ ನೀಡುತ್ತಿತ್ತು. ಈಗ ಎಲ್ಲೆಡೆ ತರಕಾರಿ ತಳ್ಳುಗಾಡಿ ಬಂದಿರುವುದರಿಂದ ವ್ಯಾಪಾರ ಕಡಿಮೆಯಾಗಿದೆಯೇ ಹೊರತು, ಬದುಕು ನಡೆಸುವುದಕ್ಕೇನೂ ಕೊರತೆಯಾಗಿಲ್ಲ ಎನ್ನುತ್ತಾ ಸಂತೃಪ್ತಿಯ ನಗು ಬೀರುತ್ತಾರೆ. ಅಂಗಡಿಯಲ್ಲೇ ತರಕಾರಿ ರೀದಿಸಬೇಕೆಂಬ ಜನರಿದ್ದಾರೆ. ತಂದೆಯಿಂದ ಕಲಿತ ಪಾಠವನ್ನು ಇವತ್ತಿಗೂ ಜೀವನಸೂತ್ರದಂತೆ ಪಾಲಿಸುತ್ತಿದ್ದಾರೆ. ಸುಮ್ಮನೆ ಕೂರುವುದೂ ಒಂದು ಕೆಲಸ. ಆದರೆ ಅದರಲ್ಲಿ ನೆಮ್ಮದಿ ಇಲ್ಲ. ಮಾಡುವ ಕೆಲಸದಲ್ಲಿ ನೆಮ್ಮದಿ ಮತ್ತು ಖುಷಿ ಸಿಗಬೇಕು ಎಂಬುದು ಇವರ ಅಭಿಪ್ರಾಯ.

 

 

 

Tags: