Mysore
24
overcast clouds

Social Media

ಸೋಮವಾರ, 11 ಮೇ 2026
Light
Dark

ಶಿಕ್ಷಣ ಇಲಾಖೆಯ ಅನುಮತಿ ಕಡ್ಡಾಯವಾಗಲಿ

ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಅನೇಕ ಖಾಸಗಿ ಟ್ಯೂಷನ್ ಹಾಗೂ ಕೋಚಿಂಗ್ ಸೆಂಟರ್‌ಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕೆಲ ಕೋಚಿಂಗ್‌ ಸೆಂಟರ್‌ಗಳು ಹಾಗೂ ಟ್ಯೂಷನ್ಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದಾಗಿ ಜಾಹೀರಾತುಗಳನ್ನು ನೀಡಿ ವಿದ್ಯಾರ್ಥಿಗಳನ್ನು ಸೆಳೆಯಲಾಗುತ್ತಿದೆ. ತರಬೇತಿ ನೀಡಲಾಗುವುದು, ಖಚಿತವಾಗಿ ಉದ್ಯೋಗ ಸಿಗುವಂತೆ
ಮಾಡಲಾಗುವುದು ಎಂದು ನಂಬಿಸಿ ಸಾವಿರಾರು ರೂ. ವಸೂಲಿ ಮಾಡುತ್ತಿದ್ದಾರೆ. ಹೀಗೆ ವಿದ್ಯಾರ್ಥಿಗಳನ್ನು ನಂಬಿಸಿ ಹಣ ವಸೂಲಿ ಮಾಡುವ ಬಹುತೇಕ ಕೋಚಿಂಗ್ ಸೆಂಟರ್‌ಗಳು ಯಾವುದೇ ರೀತಿಯ ಗುಣಮಟ್ಟದ ಶಿಕ್ಷಣವನ್ನು ನೀಡದೆ, ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸವನ್ನೂ ಕೊಡಿಸದೆ ವಿದ್ಯಾರ್ಥಿಗಳ ಹಣ ಹಾಗೂ ಸಮಯವನ್ನು ವ್ಯರ್ಥ ಮಾಡುತ್ತಿವೆ ಇದರಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಆದ್ದರಿಂದ ಶಿಕ್ಷಣ ಇಲಾಖೆಯು ಟ್ಯೂಷನ್ ಮತ್ತು ಕೋಚಿಂಗ್ ಸೆಂಟರ್ ಗಳನು ನಡೆಸುವವರು ಕಡ್ಡಾಯವಾಗಿ ಇಲಾಖೆಯ ಅನುಮತಿ ಪಡೆಯುವಂತೆ ಆದೇಶಿಸಬೇಕಿದೆ. ಅಲ್ಲದೆ ಇಲಾಖೆಯೂ ಅನುಮತಿ ನೀಡುವ ಮುನ್ನ ಈ ಕೋಚಿಂಗ್‌ ಸೆಂಟರ್‌ಗಳು ಹಾಗೂ ಟ್ಯೂಷನ್‌ಗಳನ್ನು ಪರಿಶೀಲಿಸಬೇಕಿದೆ.

-ನಾಗೇಶ್, ಮಾನಸಗಂಗೋತ್ರಿ, ಮೈಸೂರು.

Tags:
error: Content is protected !!