Mysore
30
few clouds

Social Media

ಶುಕ್ರವಾರ, 06 ಡಿಸೆಂಬರ್ 2024
Light
Dark

ಓದುಗರ ಪತ್ರ| ಸಂಸತ್ ಅಧಿವೇಶನ ವ್ಯರ್ಥವಾಗದಿರಲಿ

ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ಕಲಾಪದಲ್ಲಿ ಹಲವು ವಿಚಾರಗಳು ಚರ್ಚೆಯಾಗುವ ಜತೆಗೆ ಹತ್ತು ಹಲವು ವಿಧೇಯಕಗಳು ಮಂಡನೆಯಾಗುವ ಸಾಧ್ಯತೆ ಇದೆ.

ಇತ್ತೀಚಿನ ವರ್ಷಗಳಲ್ಲಿ ಅಧಿವೇಶನದ ಬಹುಪಾಲು ಸಮಯ ಆಡಳಿತಾರೂಢ ಪಕ್ಷ ಹಾಗೂ ವಿಪಕ್ಷಗಳ ಆರೋಪ-ಪ್ರತ್ಯಾರೋಪಗಳಿಗೆ ಮೀಸಲಾಗುವ ವೇದಿಕೆಯಾಗಿಬಿಟ್ಟಿದೆ. ಕಲಾಪದಲ್ಲಿ ಚರ್ಚೆಗಿಂತ ಹೆಚ್ಚಾಗಿ ಗದ್ದಲವೇ ತುಂಬಿರುತ್ತದೆ. ಇದರಿಂದ ಸಭಾಧ್ಯಕ್ಷರು ಸಭಾತ್ಯಾಗ ಮಾಡಿದ ಸಾಕಷ್ಟು ನಿದರ್ಶನಗಳಿವೆ. ಈ ಬಾರಿಯ ಅಽವೇಶನವು ಮಹತ್ವದ್ದಾಗಿದ್ದು, ಆರೋಗ್ಯಕರ ಚರ್ಚೆಗಳು ನಡೆಯಬೇಕಿದೆ. ವಕ್ಛ್ ಕಾಯ್ದೆಯ ತಿದ್ದುಪಡಿ ಬಗ್ಗೆ ಚರ್ಚೆ, ರಾಷ್ಟ್ರೀಯ ಸಹಕಾರ ವಿವಿ ಸ್ಥಾಪನೆ ವಿಧೇಯಕ, ಒಂದು ದೇಶ ಒಂದು ಚುನಾವಣೆ ಬಿಲ್ ಮಂಡನೆ ಸೇರಿದಂತೆ ಗೌತಮ್ ಅದಾನಿ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣ, ಮಣಿಪುರದ ಜನಾಂಗೀಯ ಸಂಘರ್ಷ, ದಿಲ್ಲಿಯನ್ನು ಆವರಿಸಿರುವ ವಿಷಗಾಳಿಗೆ ಪರಿಹಾರ ಮುಂತಾದ ಹಲವು ಜ್ವಲಂತ ಸಮಸ್ಯೆಗಳ ಕುರಿತು ಅಽವೇಶನದಲ್ಲಿ ಚರ್ಚೆಯಾಗಬೇಕು. ಈ ನಿಟ್ಟಿನಲ್ಲಿ ಸಂಸದರು ಕೇವಲ ಆರೋಪ-ಪ್ರತ್ಯಾರೋಪಗಳಲ್ಲೇ ಕಾಲಹರಣ ಮಾಡುವ ಬದಲು ಸಮಸ್ಯೆಗಳ ಕುರಿತು ಗಂಭೀರವಾಗಿ ಚರ್ಚಿಸಬೇಕಿದೆ. ಸದನದ ಸಮಯ ವನ್ನು ಹಾಳು ಮಾಡದೆ ಆಡಳಿತಾರೂಢ ಹಾಗೂ ವಿಪಕ್ಷಗಳ ನಾಯಕರು ಮಹತ್ವ ಪೂರ್ಣ ಚರ್ಚೆಗಳಿಗೆ, ನಿರ್ಣಯಗಳಿಗೆ ವೇದಿಕೆ ಕಲ್ಪಿಸಬೇಕು.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.

Tags: