ಹುಣಸೂರಿನ ಚಿಕ್ಕಹುಣಸೂರು ಸಮೀಪ ಹುಣಸೂರು-ಎಚ್.ಡಿ.ಕೋಟೆ ಮುಖ್ಯ ರಸ್ತೆಯ ಬದಿಯಲ್ಲಿಯೇ ಕುಡಿಯುವ ನೀರಿನ ಪೂರೈಕೆಗಾಗಿ ಕೊಳವೆ ಬಾವಿಯನ್ನು ಕೊರೆಯಲಾಗಿದ್ದು, ಫೈಟ್ ಲೈನ್ ಅಳವಡಿಸಲು ತೆಗೆದ ಗುಂಡಿಯನ್ನು 10 ದಿನಗಳು ಕಳೆದಿದ್ದರೂ ಮುಚ್ಚದಿರುವ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ.
ಪುರಸಭೆಯ ನೀರು ಸರಬರಾಜು ಸಿಬ್ಬಂದಿ ಕುಡಿಯುವ ನೀರಿನ ವೈಟ್ ಲೈನ್ ಅಳವಡಿಸಲು ಈ ಗುಂಡಿಯನ್ನು ತೆಗೆದಿದ್ದಾರೆ. ಅಲ್ಲದೆ ಆ ಮಣ್ಣನ್ನು ಮುಖ್ಯ ರಸ್ತೆಯಲ್ಲಿಯೇ ಹಾಕಿದ್ದು, ಇದರಿಂದಾಗಿ ರಾತ್ರಿಯ ವೇಳೆ ಮಣ್ಣಿನ ಗುಡ್ಡೆ ಕಾಣದ ಅಪಘಾತ ಸಂಭವಿಸುವ ಅಪಾಯವಿದೆ. ಇಲ್ಲಿ ಕಾಮಗಾರಿ ಪೂರ್ಣಗೊಂಡಿದೆಯೋ ಇಲ್ಲವೋ ಎಂಬುದೇ ಯಾರಿಗೂ ತಿಳಿಯುತ್ತಿಲ್ಲ. ಒಂದು ವೇಳೆ ಕಾಮಗಾರಿ ಪೂರ್ಣಗೊಂಡಿದ್ದರೆ ಸಂಬಂಧಪಟ್ಟವರು ಅನಾಹುತಗಳು ಸಂಭವಿಸುವ ಮೊದಲು ಈ ಗುಂಡಿಯನ್ನು ಮುಚ್ಚಬೇಕಿದೆ.
-ಶ್ರೀಕಾಂತ್, ಹುಣಸೂರು.