Mysore
26
haze

Social Media

ಗುರುವಾರ, 25 ಡಿಸೆಂಬರ್ 2025
Light
Dark

ಓದುಗರ ಪತ್ರ | ಹದಗೆಟ್ಟ ರಸ್ತೆ ದುರಸ್ತಿ ಮಾಡಿಸಿ

ಖೋಡೆ ಫೌಂಡೇಶನ್ ವತಿಯಿಂದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆಆರ್‌ಎಸ್ ಅಣೆಕಟ್ಟೆಯ ಹಿನ್ನೀರಿನ ಪ್ರದೇಶದಲ್ಲಿ ಪುರಾತನ ವೇಣುಗೋಪಾಲಸ್ವಾಮಿ ದೇವಾಲಯವನ್ನು ಮನಮೋಹಕವಾಗಿ ನಿರ್ಮಿಸಲಾಗಿದೆ.

ಆ ದೇವಾಲಯಕ್ಕೆ ತೆರಳಲು ಹೊಸ ಕನ್ನಂಬಾಡಿ ಗ್ರಾಮದಿಂದ ಇರುವ ಸಂಪರ್ಕ ರಸ್ತೆಯು ತುಂಬಾ ಹದಗೆಟ್ಟಿದ್ದು. ವಾಹನ ಸವಾರರು ಹಳ್ಳ ಕೊಳ್ಳಗಳಿಂದ ಬರುವ ದೂಳನ್ನು ಅನಿವಾರ್ಯವಾಗಿ ಸೇವಿಸುತ್ತಾ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ದೇಶದ ನಾನಾ ಭಾಗಗಳಿಂದ ಈ ದೇವಾಲಯದ ರಮಣೀಯ ಸೌಂದರ್ಯವನ್ನು ಸವಿಯಲು ಪ್ರತಿನಿತ್ಯ ಸಹಸ್ರಾರು ಪ್ರವಾಸಿಗರು ತಂಡೋಪ ತಂಡವಾಗಿ ಆಗಮಿಸುತ್ತಾರೆ. ರಸ್ತೆಯ ದುಸ್ಥಿತಿ ನೋಡಿದರೆ ಮತ್ತೊಮ್ಮೆ ಇಲ್ಲಿಗೆ ಬರುವ ಮನಸ್ಸು ಮಾಡುವುದಿಲ್ಲ ಅನಿಸುತ್ತದೆ. ಮಳೆಗಾಲದಲ್ಲಂತೂ ರಸ್ತೆಯ ಸ್ಥಿತಿ ಅಧೋಗತಿ. ಮಳೆ ನೀರಿನಿಂದ ಕೆಸರಿನ ಗುಂಡಿಯಂತಾಗುವ ರಸ್ತೆಯಲ್ಲಿ ಹಲವರು ಬಿದ್ದಿರುವುದು ಉಂಟು.

ಈಗಲಾದರೂ ಇದಕ್ಕೆ ಸಂಬಂಧಪಟ್ಟವರು ಈ ರಸ್ತೆಯನ್ನು ದುರಸ್ತಿ ಮಾಡಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು.

-ಎನ್. ಪಿ. ಪರಶಿವಮೂರ್ತಿ, ನಂಜೀಪುರ. ಸರಗೂರು ತಾ

Tags:
error: Content is protected !!