Mysore
23
scattered clouds

Social Media

ಭಾನುವಾರ, 29 ಮಾರ್ಚ್ 2026
Light
Dark

ಓದುಗರ ಪತ್ರ | ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಿ

ಮಾರ್ಚ್ ೨೨ರಿಂದ ಐಪಿಎಲ್ ಪಂದ್ಯಾವಳಿ ಆರಂಭವಾಗಲಿದ್ದು, ಮುಂದಿನ ೨ ತಿಂಗಳ ಕಾಲ ಯುವಕರು ಕ್ರಿಕೆಟ್ ಹಬ್ಬದಲ್ಲಿ ಮುಳುಗಿಹೋಗುತ್ತಾರೆ.

ಐಪಿಎಲ್ ಆರಂಭಗೊಳ್ಳುತ್ತಿದ್ದಂತೆಯೇ ಬೆಟ್ಟಿಂಗ್ ದಂಧೆಯೂ ಹೆಚ್ಚಾಗುತ್ತದೆ. ಅದೆಷ್ಟೋ ಯುವಕರು ಈ ಬೆಟ್ಟಿಂಗ್ ಜಾಲಕ್ಕೆ ಸಿಲುಕಿ ತಮ್ಮ ಬದುಕನ್ನೇ ಹಾಳುಮಾಡಿಕೊಂಡಿರುವ ಉದಾಹರಣೆಗಳಿವೆ. ಯುವಕರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುವ ಬುಕ್ಕಿಗಳು ಕಾಲೇಜು ವಿದ್ಯಾರ್ಥಿಗಳು, ಹೋಟೆಲ್, ಮಾಲ್, ವಿವಿಧ ಶೋ ರೂಮ್‌ಗಳಲ್ಲಿ ಕೆಲಸ ಮಾಡುವ ಯುವಕರನ್ನೇ ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಬೆಟ್ಟಿಂಗ್ ಭೂತ ಹಳ್ಳಿಗಳಿಗೂ ಕಾಲಿಟ್ಟಿರುವುದು ದುರಂತವೇ ಸರಿ. ಹಲವು ಯುವಕರು ಬೆಟ್ಟಿಂಗ್ ಕಟ್ಟುವ ಸಲುವಾಗಿ ಸಾಲ ಮಾಡಿಕೊಂಡು ಬಳಿಕ ಬುಕ್ಕಿಗಳಿಂದ ಮೋಸಹೋಗಿ ಹಣ ಕಳೆದುಕೊಳ್ಳುವ ಜತೆಗೆ ಸಾಲ ತೀರಿಸಲಾಗದೆ ಆತ್ಮಹತ್ಯೆಯ ಹಾದಿ ಹಿಡಿದ ನೂರಾರು ಉದಾಹರಣೆಗಳಿವೆ.

ಬೆಟ್ಟಿಂಗ್ ದಂಧೆ ಫೋನ್ ಮೂಲಕವೇ ನಡೆಯುತ್ತಿದ್ದರೂ ಸೈಬರ್ ಕ್ರೈಂ ವಿಭಾಗದ ಪೊಲೀಸರು ಇದಕ್ಕೆ ಕಡಿವಾಣ ಹಾಕಲು ಮುಂದಾಗದಿರುವುದು ಬೇಸರದ ಸಂಗತಿ. ಪೊಲೀಸ್ ಇಲಾಖೆ ಈ ಬಾರಿಯಾದರೂ ಎಚ್ಚೆತ್ತುಕೊಂಡು ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಬೇಕು. -ಎಚ್.ಕೆ.ರಂಜಿತ, ಹಾಸನ.

 

Tags:
error: Content is protected !!