ಮೈಸೂರಿನ ಚಾಮರಾಜ ಜೋಡಿ ರಸ್ತೆಯ ಗಾಯಿತ್ರಿ ಟಾಕೀಸ್ ಎದುರಿನ ರಾಜ ಕಾಲುವೆಯ ಬಳಿ ಇರುವ ಬೀದಿ ದೀಪ ಹಗಲಿನ ವೇಳೆಯೂ ಕೆಲವು ದಿನಗಳಿಂದ ಉರಿಯುತ್ತಿದೆ. ಬೇಸಿಗೆಯ ಲೋಡ್ ಶೆಡ್ಡಿಂಗ್ ಮಡಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಂತೂ ದಿನವಿಡೀ ವಿದ್ಯುತ್ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಹಗಲಿನ ವೇಳೆ ಬೀದಿ ದೀಪ ಉರಿದರೆ ವಿದ್ಯುತ್ ಪೋಲಾಗುತ್ತದೆ. ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಹಗಲಿನ ವೇಳೆ ಬೀದಿ ದೀಪ ಉರಿಯುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕಾಗಿದೆ.
ಚೇತನ್, ಮೈಸೂರು





