ಸೌಹಾರ್ದಯುತ ಸಮಾಜಕ್ಕಾಗಿ ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿ ಹಿಂದೂಗಳು ‘ಒಂದು ದೇಗುಲ, ಒಂದು ಬಾವಿ, ಒಂದು ಸ್ಮಶಾನ’ ಎಂಬ ತತ್ವ ಪಾಲಿಸಿ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಆದರೆ ನಮ್ಮೂರಿನಲ್ಲೇ ದಲಿತರಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ, ಇನ್ನು ಅವರು ಮನೆಗೊಂದೊಂದು ಪ್ರತ್ಯೇಕ ಬಾವಿಯನ್ನೇ ನಿರ್ಮಿಸಿಕೊಂಡಿದ್ದಾರೆ.
ಹೀಗಿರುವಾಗ ಒಂದು ಬಾವಿಯ ಬಳಕೆ ಸಾಧ್ಯವೇ? ಅದಕ್ಕೂ ಮೀರಿ ಜಾತಿಗೊಂದೊಂದು ಸ್ಮಶಾನ; ಅದಕ್ಕೊಂದು ಬೋರ್ಡು. . . ಹೀಗಿರುವಾಗ ಎಲ್ಲರಿಗೂ ಒಂದೇ ಸ್ಮಶಾನ ಎಂಬುದು ಕಲ್ಪನೆಯಷ್ಟೇ. ವಾಸ್ತವ ಹೀಗಿರುವಾಗ ಮೋಹನ್ ಭಾಗವತ್ ಅವರ ಮಾತು ನಿಜವಾಗಿ ಪಾಲನೆಯಾಗಬೇಕೆಂದರೆ ಸ್ವತಃ ಅವರೇ ಬಂದು ಹೇಳಬೇಕೇನೋ, ಒಂದು ವೇಳೆ ಹೇಳಿದರೂ ಪಾಲನೆ ಮಾಡುತ್ತಾರೆಯೇ ಎಂಬುದು ಉತ್ತರ ಸಿಗದ ಪ್ರಶ್ನೆಯಾಗಿದೆ.
-ನವೀನ್ ಕೋಳೂರು, ಮೈಸೂರು





