ಗುರುವಾರ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಆಗಮಿಸಿದ್ದ ಸಚಿವರೆಲ್ಲ ಮಾದಪ್ಪನ ದರ್ಶನಕ್ಕಾಗಿ ತೆರಳಿದರೆ ಉಳಿದ ಸಚಿವರೆಲ್ಲರಿಗೂ ಮಾದರಿಯಾಗುವಂತೆ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್. ಸಿ. ಮಹದೇವಪ್ಪ ‘ಜನತಾ ದೇವಾಲಯ’ಕ್ಕೆ ಅಂದರೆ ತೆರಳಿದ್ದು, ಇಂದಿನ ಕಾಲಮಾನದ ಅಗತ್ಯ ಎಂಬುದು ಸುಸ್ಪಷ್ಟವಾಗಿದೆ.
ಮಹದೇವಪ್ಪ ಅವರು ಬೆಟ್ಟದ ತಪ್ಪಲಲ್ಲಿ ಇರುವ ಕಾಲೋನಿಗಳಿಗೆ ತೆರಳಿ ಅಲ್ಲಿನ ಜನರ ಕಷ್ಟ ಸುಖಗಳಿಗೆ ಕಿವಿಯಾಗುವ ಮೂಲಕ ಬಹಳಷ್ಟು ಜನಪ್ರತಿನಿಽಗಳಿಗೆ ಮಾದರಿ ಆಗಿದ್ದಾರೆ. ‘ಜನರೇ ದೇವರು ಅವರ ವಾಸಸ್ಥಾನವೇ ನನಗೆ ದೇವಾಲಯ’ ಎನ್ನುವ ಮೂಲಕ ಜನತಾ ದೇವಾಲಯಕ್ಕೆ ತೆರಳಿ ಅಲ್ಲಿನ ಜನರ ಸಮಸ್ಯೆಗಳನ್ನು ಖುದ್ದು ಆಲಿಸುವ ಮೂಲಕ ಅಲ್ಲಿನ ಜನರಲ್ಲಿ ಹೊಸದೊಂದು ಭರವಸೆ ಮೂಡಿಸಿದ್ದಾರೆ. ಮಹದೇವಪ್ಪ ಅವರ ಈ ನಡೆ ನಿಜಕ್ಕೂ ಶ್ಲಾಘನೀಯವಾದುದು.
–ಅಪುರಾ, ಅಗತಗೌಡನಹಳ್ಳಿ, ಗುಂಡ್ಲುಪೇಟೆ. ತಾ.





