Mysore
35
few clouds

Social Media

ಬುಧವಾರ, 08 ಏಪ್ರಿಲ 2026
Light
Dark

ಓದುಗರ ಪತ್ರ | ಅಂಚೆ ಕಚೇರಿಗಳು ಜನ ಸ್ನೇಹಿಯಾಗಲಿ

ಓದುಗರ ಪತ್ರ

ಅಂಚೆ ಕಚೇರಿಯಲ್ಲಿ ಸಾಮಾನ್ಯ ಜನರು ೫ ವರ್ಷಗಳ ಅವಧಿಗೆ, ಸಣ್ಣ ಉಳಿತಾಯ ಪ್ರತಿನಿಧಿಗಳ ಮೂಲಕ ಆರ್‌ಡಿ (ರಿಕರಿಂಗ್ ಡಿಪಾಸಿಟ್), ಮಾಡಿರುತ್ತಾರೆ. ಅವಧಿ ಮುಗಿದ ಮೇಲೆ ಮೆಚ್ಯುರಿಟಿ ಹಣವನ್ನು ಹಿಂದಕ್ಕೆ ಪಡೆಯಲು, ಆರ್‌ಡಿ ಮಾಡಿದ ವ್ಯಕ್ತಿಯೇ ತಾನು ಆರ್‌ಡಿ ಮಾಡಿರುವ ಅಂಚೆ ಕಚೇರಿಗೇ ಖುದ್ದು ಭೇಟಿ ನೀಡಿ ಸಹಿ ಮಾಡಿ ಹಣ ವಾಪಸ್ ಪಡೆಯಬೇಕೆಂಬ ಕಟ್ಟುನಿಟ್ಟಿನ ಸೂಚನೆ ಇದೆ.

ತುಂಬು ಗರ್ಭಿಣಿಯರು, ಬಾಣಂತಿಯರು, ಹಿರಿಯ ನಾಗರಿಕರು, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಅಂಚೆ ಕಚೇರಿಗೆ ಹೋಗಲು ಸಾಧ್ಯವೇ ಇಲ್ಲ. ಅಂತಹವರು ಕೂಡ ಖುದ್ದಾಗಿ ಅಂಚೆ ಕಚೇರಿಗೆ ಬಂದು ಹಣ ಪಡೆಯ ಬೇಕೆಂದರೆ ಹೇಗೆ? ಇಂತಹ ಆದೇಶ ಮಾಡಿರುವ ಅಂಚೆ ಕಚೇರಿಯ ಹಿರಿಯ ಅಧಿಕಾರಿಗಳಿಗೆ ಕನಿಷ್ಠ ಪಕ್ಷ ತಿಳಿವಳಿಕೆಯಾದರೂ ಬೇಡವೇ ? ಅಂಚೆ ಕಚೇರಿಗಳಲ್ಲಿ ಸಾರ್ವಜನಿಕರು ಹಣ ಹೂಡಿಕೆ ಮಾಡುವಾಗ ಇರುವ ಆಸಕ್ತಿ, ಹಣ ವಾಪಸ್ ಕೊಡುವಾಗ ಸಿಬ್ಬಂದಿಗೆ ಇರುವುದಿಲ್ಲ.

ಅಂಚೆ ಕಚೇರಿಗಳು ಈಗ ಪೋಸ್ಟ್ ಆಫೀಸ್ ಸೇವಿಂಗ್ಸ್ ಬ್ಯಾಂಕ್ ಎಂದು ಮರುನಾಮಕರಣಗೊಂಡಿದ್ದು, ಬ್ಯಾಂಕ್‌ಗಳ ಮಾದರಿಯಲ್ಲಿಯೇ ವಿವಿಧ ಯೋಜನೆಗಳಲ್ಲಿ ಹಣ ತೊಡಗಿಸಿದವರು ಅನಿವಾರ್ಯ ಸಂದರ್ಭದಲ್ಲಿ ತಮ್ಮ ಪರವಾಗಿ ಸೂಚಿಸಿದ ವ್ಯಕ್ತಿಗೆ ಹಣ ವನ್ನು ಮರುಪಾವತಿ ಮಾಡುವ ನಿಯಮವನ್ನು ಜಾರಿಗೆ ತರಬೇಕಾಗಿದೆ. ಅಂಚೆ ಕಚೇರಿಗಳು ಜನ ಸ್ನೇಹಿ ಆಗಬೇಕೇ ಹೊರತು ಜನರಿಗೆ ತೊಂದರೆ ಕೊಡಬಾರದು, ಇದರಿಂದಾಗಿಯೇ ಜನಸಾಮಾನ್ಯರು ಅಂಚೆ ಕಚೇರಿಯ ಉಳಿತಾಯ ಯೋಜನೆಗಳಿಂದ ದೂರ ಉಳಿಯುತ್ತಿದ್ದಾರೆ. ಕೇಂದ್ರ ಹಣ ಕಾಸು ಸಚಿವರು ಪೋಸ್ಟಲ್ ಸೇವಿಂಗ್ಸ್ ಬ್ಯಾಂಕ್‌ಅನ್ನು ಜನ ಸ್ನೇಹಿಯಾಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.

-ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು

Tags:
error: Content is protected !!